Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಹಸುಗೂಸು ಜೊತೆ ಬಾಣಂತಿ ಬಯಲಲ್ಲೇ ಜೀವನ – ಮಿನಿ ಗೂಡ್ಸ್ ವಾಹನದಲ್ಲಿ ಬದುಕು
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Corona | ಹಸುಗೂಸು ಜೊತೆ ಬಾಣಂತಿ ಬಯಲಲ್ಲೇ ಜೀವನ – ಮಿನಿ ಗೂಡ್ಸ್ ವಾಹನದಲ್ಲಿ ಬದುಕು

Corona

ಹಸುಗೂಸು ಜೊತೆ ಬಾಣಂತಿ ಬಯಲಲ್ಲೇ ಜೀವನ – ಮಿನಿ ಗೂಡ್ಸ್ ವಾಹನದಲ್ಲಿ ಬದುಕು

Public TV
Last updated: April 30, 2020 3:09 pm
Public TV
Share
2 Min Read
DWD FAMILY
SHARE

– ವಲಸಿಗರ ಬದುಕು ಕಸಿದ ಡೆಡ್ಲಿ ಕೊರೊನಾ
– ತಾಯಿ, ಮಗುವಿಗೆ ವಾಹನವೇ ಮನೆ

ಧಾರವಾಡ: ಕೊರೊನಾ ಲಾಕ್‍ಡೌನ್‍ನಿಂದ ಅನೇಕ ಜನರ ಜೀವನ ಅಸ್ತವ್ಯಸ್ತವಾಗಿದೆ. ಇದೀಗ ಜಿಲ್ಲೆಯಲ್ಲಿ ಎರಡು ವಾರದ ಹಸುಗೂಸು ಮತ್ತು ಬಾಣಂತಿ ಬಯಲಿನಲ್ಲೇ ಮಿನಿಗೂಡ್ಸ್ ವಾಹನದಲ್ಲಿ ವಾಸ ಮಾಡುತ್ತಿದ್ದಾರೆ.

ಲಾಕ್‍ಡೌನ್‍ಗೂ ಮುನ್ನ ಧಾರವಾಡ ಹಾಗೂ ಹಾವೇರಿ ಗಡಿ ಭಾಗದ ಹೆಳವರು ಎಂಬ ಸಮುದಾಯದ ಜನರು ಜಿಲ್ಲೆಯ ಹಳಿಯಾರ ರಸ್ತೆಯಿರುವ ಹಳ್ಳಿಗಳಲ್ಲಿ ಸಂಚಾರ ಮಾಡುತ್ತ ಬಣದೂರ ಗ್ರಾಮದ ಬಳಿ ಬಂದಿದ್ದರು. ಆದರೆ ತಮ್ಮ ತಮ್ಮ ಊರುಗಳನ್ನು ಸೇರಬೇಕು ಎನ್ನುವಾಗಲೇ ಕೊರೊನಾದ ಲಾಕ್‍ಡೌನ್ ಜಾರಿಯಾಗಿ ಇವರೆಲ್ಲ ಬಣದೂರ ಬಯಲಿನಲ್ಲೇ ಲಾಕ್ ಆದರು. ಇಲ್ಲಿಯೇ ಕೆಲ ಹೆಳವರ ಮನೆಗಳು ಸಹ ಇರುವುದರಿಂದ ಇವರೆಲ್ಲ ಇಲ್ಲಿಯೇ ಉಳಿದರು. ಇವರೊಂದಿಗೆ ತನ್ನ ತಾಯಿ ಬಸವ್ವಳ ಮನೆಗೆ ಹೆರಿಗೆಗೆ ಬಂದಿದ್ದ ಸರಸ್ವತಿ ಸಹ ಇದ್ದಳು.

DWD 1 2

ದಿನ ತುಂಬುವುದರೊಳಗಾಗಿ ಇವರೆಲ್ಲ ತಮ್ಮ ತಮ್ಮ ಊರುಗಳನ್ನು ಸೇರಿ ಹೆರಿಗೆಯೂ ಆಗೋದಿತ್ತು. ಆದರೆ ಲಾಕ್‍ಡೌನ್ ಆಗಿದ್ದರಿಂದ ಎರಡು ವಾರದ ಹಿಂದೆಯಷ್ಟೇ ಸರಸ್ವತಿಗೆ ಹೆರಿಗೆ ನೋವು ಕಾಣಿಸಿಕೊಂಡಿದೆ. ತಕ್ಷಣ ಧಾರವಾಡ ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಹೋಗಿ ಹೆರಿಗೆ ಮಾಡಿಸಲಾಗಿದೆ. ನಂತರ ತನ್ನವರೆಲ್ಲ ಬಣದೂರ ಬಯಲಿನಲ್ಲಿ ಇದ್ದ ಕಾರಣ ಬಾಣಂತಿ ಸರಸ್ವತಿ ಕೂಡ ಅಲ್ಲಿಗೆ ವಾಪಸ್ ಬಂದಿದ್ದಾರೆ.

ಮಿನಿ ಗೂಡ್ಸ್‌ನ ಹಿಂಭಾಗಕ್ಕೆ ಕೌದಿಗಳನ್ನು ಹಾಕಿ ಕೋಣೆಯನ್ನಾಗಿ ಮಾಡಿ ಮಗುವಿಗೆ ಆರೈಕೆ ಮಾಡುತ್ತಿದ್ದಾರೆ. ಆದರೆ ಒಂದಷ್ಟು ರೇಷನ್ ಮಾತ್ರ ಬಂದಿದ್ದು, ಉಳಿದಂತೆ ಕೈಯಲ್ಲಿರುವುದು ಎಲ್ಲವೂ ಖಾಲಿಯಾಗುತ್ತಿದೆ. ಹೀಗಾಗಿ ಮುಂದೇನು ಎನ್ನುವ ಚಿಂತೆ ಕೂಡ ಇವರನ್ನು ಕಾಡುತ್ತಿದೆ.

DWD 2

ಸರಸ್ವತಿ ಹೆರಿಗೆಗೆ ಆಸ್ಪತ್ರೆಗೆ ಕೂಡ ಬೈಕ್‍ನಲ್ಲಿ ಹೋಗಿದ್ದು, ಮೈಯಲ್ಲಿ ರಕ್ತ ಕಡಿಮೆ ಇದೆ ಎಂದು ವೈದ್ಯರು ತಿಳಿಸಿದ್ದಾರೆ. ಹೀಗಾಗಿ ಪೌಷ್ಟಿಕ ಆಹಾರ ಕೊಡೋಣ ಎಂದರೆ ಅಗತ್ಯ ವಸ್ತುಗಳನ್ನು ಖರೀದಿಸಲು ಹಣವಿಲ್ಲದೆ ಪರದಾಡುತ್ತಿದ್ದಾರೆ. ಈ ಸಮುದಾಯದವರು ವರ್ಷಗಟ್ಟಲೆ ಹೊರಗೆ ಜೀವನ ಕಳೆಯುವುದು. ಇದೇ ರೀತಿ ವಾಹನದಲ್ಲಿ ತಮ್ಮ ಮನೆ ಮಾಡಿ ಇರುತ್ತಾರೆ. ಕೆಲವರು ಚಕ್ಕಡಿಯಲ್ಲಿ ಮನೆ ಮಾಡಿಕೊಂಡು ಇರುತ್ತಾರೆ. ಇನ್ನೂ ಕೆಲವರು ಈ ರೀತಿ ವಾಹನದಲ್ಲೇ ಕಾಲ ಕಳೆಯುತ್ತಾರೆ. ಸದ್ಯ ಸರಸ್ವತಿ ಹಾಗೂ ಅವರ ಮಗುವಿಗೆ ಈ ಲಾಕ್ ಡೌನ್‍ನಿಂದ ವಾಹನವೇ ಮನೆ ಆಗಿದೆ.

TAGGED:childCoronadharwadLockdownMini Goods VehiclePublic TVಕೊರೊನಾಧಾರವಾಡಪಬ್ಲಿಕ್ ಟಿವಿಮಗುಮಿನಿ ಗೂಡ್ಸ್ ವಾಹನಲಾಕ್‍ಡೌನ್
Share This Article
Facebook Whatsapp Whatsapp Telegram

Cinema news

Yelahanka House Theft Arrest
ಸಿನಿಮೀಯ ಶೈಲಿಯಲ್ಲಿ ಮನೆ ಕಳ್ಳತನ – 3.5 ಕೋಟಿ ಮೌಲ್ಯದ ಚಿನ್ನಾಭರಣ ಸೀಜ್
Bengaluru City Cinema Crime Karnataka Latest Top Stories
The trailer of the movie Love Mocktail 3 released Darling Krishna Milana Nagaraj 1
ಬಿಡುಗಡೆಯಾಯ್ತು ಲವ್‌ಮಾಕ್ಟೇಲ್ 3 ಚಿತ್ರದ ಟ್ರೈಲರ್!
Cinema Latest Top Stories
Kamal Haasan Donald Trump
ನಿಮ್ಮ ಕೆಲಸ ಎಷ್ಟಿದೆ ಅದನ್ನಷ್ಟೇ ನೋಡಿಕೊಳ್ಳಿ – ಟ್ರಂಪ್‌ ವಿರುದ್ಧ ಕಮಲ್‌ ಹಾಸನ್‌ ಕಿಡಿ
Cinema Latest National South cinema Top Stories
Jr NTR
ಬೆಂಗ್ಳೂರಲ್ಲಿ ಜ್ಯೂ.ಎನ್‍ಟಿಆರ್ ನೋಡಲು ಮುಗಿಬಿದ್ದ ಫ್ಯಾನ್ಸ್ – ಪೊಲೀಸರಿಂದ ಲಾಠಿಚಾರ್ಜ್‌
Bengaluru City Cinema Latest Top Stories

You Might Also Like

Legislative Council
Bengaluru City

ಕಾಂಗ್ರೆಸ್ ಭವನ ನಿರ್ಮಾಣಕ್ಕೆ ಕೊಟ್ಟಿರೋ ಸಿಎ ಸೈಟ್ ವಾಪಸ್ ಪಡೆಯಬೇಕು: ಬಿಜೆಪಿ ಆಗ್ರಹ

Public TV
By Public TV
7 minutes ago
gas shortage
Bengaluru City

ಮಧ್ಯಪ್ರಾಚ್ಯ ಯುದ್ಧದಿಂದ `ಗ್ಯಾಸ್’ ಟ್ರಬಲ್; ಬೆಂಗಳೂರಿನ ಹೋಟೆಲ್‌ಗಳಿಗೆ ಸಿಲಿಂಡರ್ ಪೂರೈಕೆ ಸ್ಥಗಿತ – ಹೋಟೆಲ್‌ಗಳು ಬಂದ್ ಸಾಧ್ಯತೆ?

Public TV
By Public TV
9 minutes ago
pm modi meeting
Latest

ಭಾರತದಲ್ಲಿ ಗ್ಯಾಸ್ ಎಮರ್ಜೆನ್ಸಿ; ತೈಲ, ವಿದೇಶಾಂಗ ಸಚಿವರ ಜೊತೆ ಮೋದಿ ಸಭೆ

Public TV
By Public TV
14 minutes ago
Basavaraj Bommai 1
Bengaluru City

ಎಲ್‌ಪಿಜಿ ಸಮಸ್ಯೆ ಬಗೆಹರಿಯುವ ವಿಶ್ವಾಸ ಇದೆ – ಬೊಮ್ಮಾಯಿ

Public TV
By Public TV
31 minutes ago
Fire Accident Gas Leak
Chamarajanagar

ಅಡುಗೆ ಅನಿಲ ಸೋರಿಕೆಯಾಗಿ ಅಗ್ನಿ ಅವಘಡ – ದಂಪತಿಗೆ ಗಂಭೀರ ಗಾಯ

Public TV
By Public TV
1 hour ago
Parrot astrology
Bengaluru City

ವರ್ಗಾವಣೆ, ಪ್ರಮೋಷನ್‌ಗಾಗಿ ಗಿಳಿಶಾಸ್ತ್ರದ ಮೊರೆ – 35 ಲಕ್ಷ ಚಿನ್ನಾಭರಣ ಪಡೆದು ಎಸ್ಕೇಪ್ ಆದ ಗಿಳಿರಾಮ!

Public TV
By Public TV
2 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?