ಲಕ್ನೋ: ಹೆಲ್ಮಟ್ ಹಾಕಿಲ್ಲ ಎಂದು ಪೊಲೀಸರು ಫೈನ್ ಹಾಕಿದ್ದಕ್ಕೆ ಸವಾರನೋರ್ವ ಬೈಕ್ ಎಸೆದು ಅಳುತ್ತಾ ಕುಳಿತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಉತ್ತರ ಪ್ರದೇಶದ ಮೀರತ್ ನಲ್ಲಿ ನಡೆದಿದ್ದು , ಹೆಲ್ಮೆಟ್ ಹಾಕದೆ ಬೈಕ್ ಓಡಿಸಿದಕ್ಕೆ ಬೈಕ್ ಸವಾರನನ್ನು ಅಡ್ಡಗಟ್ಟಿದ ಪೊಲೀಸರು ಫೈನ್ ಹಾಕಿದ್ದಾರೆ. ಇದಕ್ಕೆ ಕೋಪಗೊಂಡ ಆತ ಬೈಕ್ ತಳ್ಳಿ ಅದರ ಮೇಲೆಯೇ ಕುಳಿತುಕೊಂಡು ಅತ್ತಿದ್ದಾನೆ. ಪೊಲೀಸರು ವಿಡಿಯೋದ ಕೊನೆಯಲ್ಲಿ ಬಂದು ಆತನನ್ನು ಸಮಾಧಾನ ಪಡಿಸಲು ಪ್ರಯತ್ನ ಮಾಡುತ್ತಾರೆ.
https://twitter.com/Benarasiyaa/status/1198889107092492288
ಈ ವಿಡಿಯೋವನ್ನು ಪಿಯೂಷ್ ರಾಜ್ ಎಂಬವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಶೇರ್ ಮಾಡಿದ್ದು, ಟ್ರಾಫಿಕ್ ಫೈನ್ ಬಗ್ಗೆ ಆಕ್ರೋಶಗೊಂಡ ಬೈಕ್ ಸವಾರ ತನ್ನ ಕೋಪವನ್ನು ಬೈಕ್ ಮೇಲೆ ಹೊರಹಾಕಿದ್ದಾನೆ. ನಂತರ ಬಿದ್ದಿದ್ದ ಬೈಕ್ ಮೇಲೆ ಕುಳಿತುಕೊಂಡು ಅಳಲು ಪ್ರಾರಂಭ ಮಾಡಿದ್ದಾನೆ. ಪೊಲೀಸರು ಈ ಡ್ರಾಮಾವನ್ನು ನಿಂತುಕೊಂಡು ನೋಡುತ್ತಿದ್ದರು ಎಂದು ಬರೆದುಕೊಂಡಿದ್ದರು.

ಈ ವಿಡಿಯೋಕ್ಕೆ ಕೆಲ ನೆಟ್ಟಿಗರು ಕಮೆಂಟ್ ಮಾಡಿದ್ದು, ಕೆಲವರು ಪೊಲೀಸರ ಪರವಾಗಿ ಮಾತನಾಡಿದರೆ, ಇನ್ನೂ ಕೆಲವರು ಬೈಕ್ ಸವಾರ ಪರವಾಗಿ ಕಮೆಂಟ್ ಮಾಡಿದ್ದಾರೆ. ಇವರಗೆ 60 ಸಾವಿರ ಕೊಟ್ಟು ಬೈಕ್ ತೆಗೆದುಕೊಳ್ಳಲು ಆಗುತ್ತೆ. ಆದರೆ 600 ರೂ. ಕೊಟ್ಟು ಹೆಲ್ಮೆಟ್ ತೆಗೆದುಕೊಳ್ಳಲು ಆಗುವುದಿಲ್ಲ. ಪೊಲೀಸರು ಫೈನ್ ಹಾಕಿ ಒಳ್ಳೆಯ ಕೆಲಸ ಮಾಡಿದ್ದಾರೆ. ಈ ನಿಯಮ ಸುರಕ್ಷತೆಗಾಗಿ ದೇಶದದ್ಯಾಂತ ಫಾಲೋ ಮಾಡಬೇಕು ಎಂದು ಕಮೆಂಟ್ ಮಾಡಿದ್ದಾರೆ.

