ಚೆನ್ನೈ: ಮಾಜಿ ಪ್ರಿಯಕರನೊಬ್ಬ ವಾಟ್ಸಪ್ ಮೂಲಕ ವಿವಾಹಿತ ಮಹಿಳೆಯ ಅಶ್ಲೀಲ ಫೋಟೋಗಳನ್ನು ಆಕೆಯ ಪತಿಗೆ ಕಳುಹಿಸಿದ್ದು, ಇದೀಗ ಆತನನ್ನು ಪೊಲೀಸರು ಬಂಧಿಸಿರುವ ಘಟನೆ ತಮಿಳುನಾಡಿನ ತಿರುವಣ್ಣಾಮಲೈನಲ್ಲಿ ನಡೆದಿದೆ.
ಬಂಧಿತ ಆರೋಪಿಯನ್ನು ವೀರಾಮಣಿ ಎಂದು ಗುರುತಿಸಲಾಗಿದೆ. ಈತ ತಿರುವಣ್ಣಾಮಲೈನ ಕಿಲ್ಪೆನಾಥೂರ್ ಗ್ರಾಮದಲ್ಲಿ ಅಡುಗೆ ಪಾತ್ರೆಗಳನ್ನು ಮಾರಾಟ ಮಾಡುವ ಅಂಗಡಿ ಇಟ್ಟುಕೊಂಡಿದ್ದನು. ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಯುವತಿಯನ್ನು ಆರೋಪಿ ವೀರಮಣಿ ಪ್ರೀತಿಸುತ್ತಿದ್ದನು. ಅಷ್ಟೇ ಅಲ್ಲದೇ ಆಕೆಗೆ ಮದುವೆಯಾಗುವುದಾಗಿ ಭರವಸೆ ನೀಡಿದ್ದನು.
ಆದರೆ ಆರೋಪಿ ಯುವತಿಗೆ ತಿಳಿಯದೆ ಆಕೆಯ ನಗ್ನ ಫೋಟೋಗಳನ್ನು ತಮ್ಮ ಫೋನಿನಲ್ಲಿ ತೆಗೆದುಕೊಂಡಿದ್ದನು. ಈ ಫೋಟೋಗಳನ್ನು ಉಪಯೋಗಿಸಿಕೊಂಡು ಆಕೆಯನ್ನು ಲೈಂಗಿಕವಾಗಿ ಬಳಸಿಕೊಳ್ಳಲು ಪ್ರಾರಂಭಿಸಿದ್ದನು. ನಂತರ ಯುವತಿ ಆರೋಪಿಯನ್ನು ಮದುವೆಯಾಗುವಂತೆ ಕೇಳಿದ್ದಾಳೆ. ಆದರೆ ಆರೋಪಿ ನಿರಾಕರಿಸಿದ್ದನು. ಆದರೆ ತನ್ನ ಫೋನಿನಲ್ಲಿರುವ ಫೋಟೋಗಳನ್ನು ಡಿಲೀಟ್ ಮಾಡುವುದಾಗಿ ಹೇಳಿದ್ದನು. ಆದರೆ ಆತ ಫೋಟೋಗಳನ್ನು ಡಿಲೀಟ್ ಮಾಡಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಯುವತಿ ಪೋಷಕರು ನೋಡಿದ ಹುಡುಗನ ಜೊತೆ ಜೂನ್ 6 ರಂದು ಮದುವೆಯಾಗಿದ್ದಳು. ಇತ್ತ ವೀರಮಣಿ ಆಕೆ ಮತ್ತೆ ತನ್ನ ಬಳಿ ಬರುವುದಿಲ್ಲ ಎಂದು ತಿಳಿದು ಆಕೆಯ ಅಶ್ಲೀಲ ಫೋಟೋಗಳನ್ನು ಪತಿಯ ವಾಟ್ಸಪ್ಗೆ ಕಳುಹಿಸಿದ್ದಾನೆ. ಪತ್ನಿಯ ಫೋಟೋಗಳನ್ನು ನೋಡಿದ ತಕ್ಷಣ ಪತಿ ತನ್ನ ಕುಟುಂಬ ಸದಸ್ಯರಿಗೆ ಫೋಟೋಗಳ ಬಗ್ಗೆ ತಿಳಿಸಿ ಪತ್ನಿಯನ್ನು ತವರು ಮನೆಗೆ ಕಳುಹಿಸಿದ್ದನು.
ನಂತರ ಸಂತ್ರಸ್ತೆ ತನ್ನ ಪೋಷಕರೊಂದಿಗೆ ತಿರುವಣ್ಣಾಮಲೈನ ಮಹಿಳಾ ಪೊಲೀಸ್ ಠಾಣೆಗೆ ಹೋಗಿ ಆತನ ವಿರುದ್ಧ ದೂರು ದಾಖಲಿಸಿದ್ದಾಳೆ. ಪೊಲೀಸರು ಈ ಕುರಿತು ಪ್ರಕರಣ ದಾಖಲಿಸಿಕೊಂಡು ಆರೋಪಿ ವೀರಮಣಿಯನ್ನು ಬಂಧಿಸಿದ್ದಾರೆ.
[wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.in/wp-content/plugins/wonderplugin-video-embed/engine/playvideo-64-64-0.png”]