ಮುಂಬೈ: ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಕಾರಿನಲ್ಲಿ ಹೋಗುವಾಗ ರೋಡಿನಲ್ಲಿ ಪ್ಲಾಸ್ಟಿಕ್ ಕವರ್ ನಲ್ಲಿ ಕಸ ಎಸೆಯುತ್ತಿದ್ದ ವ್ಯಕ್ತಿಗೆ ಹಿಗ್ಗಾಮುಗ್ಗಾ ಜಾಡಿಸಿದ್ದರು. ರಸ್ತೆಗಳು ಇರೋದು ನಿಮ್ಮ ಕಸ ಹಾಕಲು ಅಲ್ಲ ಬಿ ಕೇರ್ ಫುಲ್ ಎಂದು ಖಡಕ್ ವಾರ್ನಿಂಗ್ ನೀಡಿದ ಅನುಷ್ಕಾಗೆ ಆ ವ್ಯಕ್ತಿ ಈಗ ಪ್ರತಿಕ್ರಿಯಿಸಿದ್ದಾನೆ.
ಅರ್ಹಾನ್ ಸಿಂಗ್ ಕಸ ಎಸೆದಿದ್ದಕ್ಕೆ ಕ್ಷಮೆಯಾಚಿಸಿ ಅನುಷ್ಕಾ ಹಾಗೂ ಕೊಹ್ಲಿ ವಿರುದ್ಧ ರೊಚ್ಚಿಗೆದ್ದಿದ್ದಾನೆ. ತಮ್ಮ ಇನ್‍ಸ್ಟಾಗ್ರಾಂನಲ್ಲಿ ಅನುಷ್ಕಾ ಹಾಗೂ ವಿರಾಟ್ ವಿರುದ್ಧ ಪೋಸ್ಟ್ ಹಾಕಿದ್ದು, ಆತನಿಗೆ ಆತನ ತಾಯಿ ಕೂಡ ಸಾಥ್ ನೀಡಿದ್ದಾರೆ.
ನೀವು ಹಾಕಿದ ಈ ಪೋಸ್ಟ್ ನಿಂದ ನನಗೆ ಯಾವುದೇ ಪ್ರಯೋಜನವಿಲ್ಲ. ಇದು ಹಾರಿಬಲ್. ಈ ಚಿಕ್ಕ ಪ್ಲಾಸ್ಟಿಕ್ ಬ್ಯಾಗ್ ನನ್ನ ಅಜಾಗರೂಕತೆಯಿಂದ ಕಾರಿನಿಂದ ಹೊರಬಿತ್ತು. ನಾನು ಹೋಗುತ್ತಿದ್ದ ಕಾರಿನಲ್ಲಿ ಮತ್ತೊಂದು ಕಾರು ಬಂದು ಕಿಟಕಿಯನ್ನು ಕೆಳೆಗೆ ಮಾಡಿದ್ದಾಗ ಅಲ್ಲಿ ನಮ್ಮ ಅದ್ಭುತ ಅನುಷ್ಕಾ ಶರ್ಮಾ ಕಿರುಚುತ್ತಾ ರಸ್ತೆಬದಿಯಲ್ಲಿರುವ ವ್ಯಕ್ತಿಗಳಂತೆ ಆಡುತ್ತಿದ್ದರು ಎಂದು ಅರ್ಹಾನ್ ಸಿಂಗ್ ತಮ್ಮ ಇನ್‍ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾನೆ.
https://twitter.com/imVkohli/status/1007952358310055937
ನಾನು ನನ್ನ ಅಜಾಗರೂಕತೆಗೆ ಕ್ಷಮೆಯಾಚಿಸಿದ್ದೇನೆ. ಮಿಸೆಸ್ ಅನುಷ್ಕಾ ಶರ್ಮಾ ಕೊಹ್ಲಿ ನೀವು ಹೇಳಿದ ಡೈಲಾಗ್‍ನಲ್ಲಿ ಸ್ವಲ್ಪ ತಾಳ್ಮೆಯಿಂದ ಹಾಗೂ ಶಿಷ್ಟಚಾರದಿಂದ ಇದ್ದರೆ ಅದು ನಿಮ್ಮ ಸ್ಟಾರ್ ಲೆವಲ್ ಕಡಿಮೆ ಮಾಡುವುದಿಲ್ಲ. ದುಬಾರಿ ಕಾರಿನಲ್ಲಿ ಕುಳಿತುಕೊಂಡು ನಿಮ್ಮ ಬಾಯಿಯಿಂದ ಬಂದ ಕಸಗಿಂತ ನನ್ನ ಕಾರಿನಿಂದ ಹಾರಿಹೋದ ಕಸ ಕಡಿಮೆಯಿತ್ತು. ವಿರಾಟ್ ಕೊಹ್ಲಿ ಈ ವಿಡಿಯೋ ಪೋಸ್ಟ್ ಮಾಡಿದರಿಂದ ನಿಮಗೆ ಎನು ದೊರೆಯಿತು ಎಂದು ಪೋಸ್ಟ್ ಮಾಡಿದ್ದಾನೆ.
ಅರ್ಹಾನ್ ಸಿಂಗ್ ತಾಯಿ ಗೀತಾಂಜಲಿ, ವಿರುಷ್ಕಾ ವಿರುದ್ಧ ರೊಚ್ಚಿಗೆದಿದ್ದಾರೆ. ಅಲ್ಲದೇ ಅವರಿಗೆ ಕೆಟ್ಟ ಪದಗಳಿಂದ ನಿಂದಿಸಿದ್ದಾರೆ. ನೀವು ಪ್ರಚಾರ ಪಡೆಯೋದಕ್ಕೆ ನನ್ನ ಮಗನನ್ನು ಬಳಿಸಿಕೊಂಡಿದ್ದೀರಿ. ವಿಡಿಯೋದಲ್ಲಿ ನೀವು ನನ್ನ ಮಗನ ಮುಖವನ್ನು ಬ್ಲರ್ ಮಾಡದೇ ಹಾಗೇ ತೋರಿಸಿದ್ದೀರಿ. ಸಾಮಾಜಿಕ ಜಾಲತಾಣದಲ್ಲಿ ಅವನನ್ನು ಅವಮಾನ ಮಾಡಿದ್ದೀರಿ. ನನ್ನ ಮಗನ ಜೀವನವನ್ನು ನೀವು ಹಾಳು ಮಾಡಿದ್ದೀರಿ ನಿಮಗೆ ಪರಿಸರದ ಬಗ್ಗೆ ಕಾಳಜಿ ಇದ್ದರೆ ನಿಮ್ಮ ಸುತ್ತಮುತ್ತಲಿನ ಪ್ರದೇಶವನ್ನು ನೋಡಿಕೊಳ್ಳಿ ಎಂದು ಪೋಸ್ಟ್ ಮಾಡಿದ್ದಾರೆ.
Lot of people who don't have the courage to do something like this find it funny. Everything for people nowadays is meme content. Shame.
— Virat Kohli (@imVkohli) June 16, 2018
ಏನಿದು ಘಟನೆ?
ಅನುಷ್ಕಾ ಶರ್ಮಾ ಕಾರಿನಲ್ಲಿ ಹೋಗುತ್ತಿದ್ದಾಗ ಪಕ್ಕದಲ್ಲೇ ಹೋಗುತ್ತಿದ್ದ ಅರ್ಹಾನ್ ಸಿಂಗ್ ಕಾರಿನಿಂದ ಪ್ಲಾಸ್ಟಿಕ್ ಕವರ್ ಎಸೆದಿದ್ದಾನೆ. ಇದನ್ನು ಕಂಡ ಅನುಷ್ಕಾ ಶರ್ಮಾ ತನ್ನ ಕಾರಿನ ಕಿಟಕಿ ತೆಗೆದು ಅರ್ಹಾನ್ ಸಿಂಗ್ ವ್ಯಕ್ತಿಗೆ ಹಿಗ್ಗಾಮುಗ್ಗಾ ಬೈದಿದ್ದಾರೆ. ರಸ್ತೆಯಲ್ಲಿ ಕಸವನ್ನು ಯಾಕೆ ಎಸುತ್ತಿದ್ದೀಯಾ? ದಯವಿಟ್ಟು ಎಚ್ಚರದಿಂದ ಇರು. ನೀನು ಪ್ಲಾಸ್ಟಿಕ್ ಕವರ್ ಗಳನ್ನು ಈ ರೀತಿ ರಸ್ತೆಯ ಮೇಲೆ ಎಸೆಯುವ ಹಾಗೇ ಇಲ್ಲ ಎಂದು ಅನುಷ್ಕಾ ಶರ್ಮಾ ಅರ್ಹಾನ್ ಸಿಂಗ್ ಖಡಕ್ ವಾರ್ನಿಂಗ್ ನೀಡಿದ್ದರು.
ಅನುಷ್ಕಾ ಪತಿ ಹಾಗೂ ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ತಮ್ಮ ಪತ್ನಿಯ ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿ ಅದಕ್ಕೆ, “ರಸ್ತೆಯಲ್ಲಿ ವ್ಯಕ್ತಿಯೊಬ್ಬ ಕಸ ಎಸೆಯುತ್ತಿರುವುದನ್ನು ನೋಡಿ ಅನುಷ್ಕಾ ಅವನಿಗೆ ತರಾಟೆಗೆ ತೆಗೆದುಕೊಂಡಿದ್ದಾರೆ. ದುಬಾರಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು, ಅವರ ಮೆದುಳು ಕೆಲಸ ಮಾಡುವುದಿಲ್ಲ. ಇಂತಹ ಜನರು ನಮ್ಮ ದೇಶವನ್ನು ಸ್ವಚ್ಛತೆಯಿಂದ ಇಡುತ್ತಾರಾ? ನೀವು ಕೂಡ ಈ ರೀತಿ ಆಗುವುದನ್ನು ನೋಡಿದ್ದರೆ, ಹೀಗೆ ಮಾಡಿ ಜಾಗೃತಿ ಮೂಡಿಸಿ ಎಂದು ಪೋಸ್ಟ್ ಮಾಡಿದ್ದಾರೆ.
ಇನ್ನೂ ಕೆಲವರು ವಿರಾಟ್ ಕೊಹ್ಲಿ ವಿರುದ್ಧ ಹಾಸ್ಯವಾಗಿ ಟ್ವೀಟ್ ಮಾಡಿದ್ದಾರೆ. ಆ ವ್ಯಕ್ತಿಯ ಟ್ವೀಟ್ ಗಮನಿಸಿದ ವಿರಾಟ್, “ಇಂತಹ ಕೆಲಸ ಮಾಡಲು ಬರದ ಹಲವಾರು ಮಂದಿಗೆ ಇದು ಹಾಸ್ಯಮಯವಾಗಿ ಕಾಣುತ್ತದೆ. ಈಗಿನ ಕಾಲದಲ್ಲಿ ಜನಗಳಿಗೆ ಎಲ್ಲವು ಹಾಸ್ಯವಾಗಿರಬೇಕು. ನಾಚಿಕೆಯಾಗಬೇಕು ಎಂದು ಪ್ರತಿಕ್ರಿಯಿಸುವ ಮೂಲಕ ಆ ವ್ಯಕ್ತಿಗೆ ಖಡಕ್ ಉತ್ತರ ನೀಡಿದ್ದಾರೆ. ಸದ್ಯ ಅನುಷ್ಕಾ ಶರ್ಮಾ ಆ ವ್ಯಕ್ತಿಗೆ ಬೈಯುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ. ಈ ವಿಡಿಯೋವನ್ನು ನೋಡಿದ ಹಲವಾರು ಅನುಷ್ಕಾಗೆ ತಮ್ಮ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

