Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಸಂಸದ ನಳಿನ್ ಕುಮಾರ್ ಕಟೀಲ್ ಅಯೋಗ್ಯ ಸಂಸದ- ಹಮೀದ್ ಖಂದಕ್
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | Dakshina Kannada | ಸಂಸದ ನಳಿನ್ ಕುಮಾರ್ ಕಟೀಲ್ ಅಯೋಗ್ಯ ಸಂಸದ- ಹಮೀದ್ ಖಂದಕ್

Dakshina Kannada

ಸಂಸದ ನಳಿನ್ ಕುಮಾರ್ ಕಟೀಲ್ ಅಯೋಗ್ಯ ಸಂಸದ- ಹಮೀದ್ ಖಂದಕ್

Public TV
Last updated: January 13, 2018 11:02 am
Public TV
Share
3 Min Read
MNG 12
SHARE

ಮಂಗಳೂರು: ದಕ್ಷಿಣ ಕನ್ನಡ ಸಂಸದ ಓರ್ವ ಅಯೋಗ್ಯ ಸಂಸದ, ರಾಜ್ಯದ ಕರಾವಳಿಯ ಮಂಗಳೂರು ಸೇರಿದಂತೆ ಜಿಲ್ಲೆಯಲ್ಲಿ ನಡೆದ ಕೋಮುದ್ವೇಷದ ಹತ್ಯೆಗಳಲ್ಲೂ ಸಂಸದ ನಳಿನ್ ಕುಮಾರ್ ಕಟೀಲ್ ರಾಜಕೀಯ ಮಾಡುತ್ತಿದ್ದಾರೆ. ಜಿಲ್ಲೆಯ ಸಂಸದನಾಗಿದ್ದು ತನ್ನ ಕ್ಷೇತ್ರದ ಅಮಾಯಕ ಬಶೀರ್ ಹತ್ಯೆಯಾಗಿದ್ದರೂ ಕನಿಷ್ಟ ಅವರ ಮನೆಗೆ ಭೇಟಿ ನೀಡಲಾಗದ ಅಯೋಗ್ಯ ಸಂಸದನಾಗಿದ್ದಾನೆ. ಇಂತಹ ಅಯೋಗ್ಯ ಸಂಸದನಿಗೆ ನಾಚಿಕೆಯಾಗಬೇಕೆಂದು ದಕ್ಷಿಣ ಕನ್ನಡ ಜಿಲ್ಲಾ ಮುಸ್ಲಿಂ ಸೆಂಟ್ರಲ್ ಕಮಿಟಿಯ ಉಪಾಧ್ಯಕ್ಷ ಹಮೀದ್ ಖಂದಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

MNG 2 1

ಇತ್ತೀಚೆಗೆ ದುಷ್ಕರ್ಮಿಗಳ ಕೋಮು ದ್ವೇಷದಿಂದ ಹತ್ಯೆಗೀಡಾದ ದೀಪಕ್ ರಾವ್ ಹಾಗೂ ಬಶೀರ್ ಅವರಿಗೆ ದಕ್ಷಿಣ ಕನ್ನಡ ಜಿಲ್ಲಾ ಮುಸ್ಲಿಂ ಸಂಘಟನೆಗಳ ವತಿಯಿಂದ ಮಂಗಳೂರಿನ ನೆಹರು ಮೈದಾನದಲ್ಲಿ ಸಂತಾಪ ಸಭೆ ನಡೆಯಿತು. ಈ ಸಭೆಯಲ್ಲಿ ಅಧ್ಯಕ್ಷೀಯ ಭಾಷಣ ಮಾಡಿದ ಹಮೀದ್ ಖಂದಕ್, ದೀಪಕ್ ರಾವ್ ಅವರನ್ನು ಹತ್ಯೆಗೈದ ಸಮಯದಲ್ಲಿ ಬಂದ್, ಗಲಾಟೆ, ಉದ್ರೇಕಕಾರಿ ಭಾಷಣಗಳ ಸುರಿಮಳೆಯಾಗಿತ್ತು. ಜೊತೆಗೆ ಸಂಸದ ನಳಿನ್ ಕುಮಾರ್ ಕಟೀಲ್ ಮುಸ್ಲಿಮರನ್ನು ಉದ್ರೇಕಿಸುವಂತೆ ದೂರದ ದೆಹಲಿಯಲ್ಲಿ ಕೂತು ಇಲ್ಲಿನ ಪರಿಸ್ಥಿತಿಯನ್ನು ನೋಡದೆ ಮಾಧ್ಯಮಗಳಲ್ಲಿ ಉದ್ರೇಕಕಾರಿ ಹೇಳಿಕೆಗಳನ್ನು ನೀಡಿದ್ದರು. ಈ ಮೂಲಕ ಗಲಭೆ ಎಬ್ಬಿಸುವ ಪ್ರಯತ್ನ ಮಾಡಿದ್ದರು. ಆದರೆ ಬಶೀರ್ ರನ್ನು ಹತ್ಯೆಗೈದಾಗ ಇದ್ಯಾವುದೂ ಇರದೆ ಶಾಂತಿ ಕಾಪಾಡಿಕೊಂಡಿದ್ದರು. ನಮಗೆ ಬೇಕಾಗಿರೋದು ಶಾಂತಿ ಎಂದು ಬಶೀರ್ ಮನೆಯವರು ಹೇಳಿದ್ದನ್ನು ಹಮೀದ್ ಖಂದಕ್ ನೆನಪಿಸಿಕೊಂಡರು. ಈ ಇಬ್ಬರನ್ನು ಕೊಂದವರು ಯಾರು ಹಾಗೂ ಈ ಕೊಲೆಗಳ ಹಿಂದೆ ಇರುವ ಕಾಣದ ಕೈಗಳನ್ನು ಬಹಿರಂಗಪಡಿಸಬೇಕು ಎಂದು ಅವರು ಆಗ್ರಹಿಸಿದರು.

MNG 11 1

ಮಾತ್ರವಲ್ಲ ಮುಸ್ಲಿಂ ಸಂಘಟನೆಗಳು ಆಯೋಜಿಸಿರುವ ಈ ಕಾರ್ಯಕ್ರಮಕ್ಕೆ ಬಾರದ ಮುಸ್ಲಿಂ ನಾಯಕರನ್ನು ಸಾಮಾಜಿಕವಾಗಿ ಬಹಿಷ್ಕರಿಸಿ. ಚಾನೆಲ್‍ಗಳು ಚರ್ಚೆಗೆಂದು ಕರೆದಾಗ ಓಡೋಡಿ ಬರುವ ಪ್ರಚಾರಪ್ರಿಯ ಮುಸ್ಲಿಂ ನಾಯಕರನ್ನು ಬಹಿಷ್ಕರಿಸಿ. ಅವರು ಎಷ್ಟೇ ದೊಡ್ಡ ನಾಯಕಾರದೂ ಸರಿ ಎಂದು ಕಾರ್ಯಕ್ರಮಕ್ಕೆ ಬಾರದ ಮುಸ್ಲಿಂ ನಾಯಕರ ವಿರುದ್ಧವೂ ಅವರು ಕಿಡಿಕಾರಿದರು.

ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ರಾಜ್ಯ ಪ್ರಧಾನ ಕಾರ್ಯದರ್ಶಿ ಯಾಸಿರ್ ಹಸನ್ ಮಾತನಾಡಿ, ಹಿಂದೂ ಮುಸ್ಲಿಮರ ಮಧ್ಯೆ ಗೋಡೆಗಳನ್ನಲ್ಲ ಬದಲಾಗಿ ಅಣೆಕಟ್ಟುಗಳನ್ನು ಕಟ್ಟಿ ರಕ್ತದ ಓಕುಳಿಯನ್ನು ಸಂಘಪರಿವಾರ ಹರಿಸಿ ಸಂಗ್ರಹಿಸಿಡುತ್ತಿದೆ. ಈ ದೇಶದ ಮುಸಲ್ಮಾನರು ದೌರ್ಜನ್ಯಕ್ಕೊಳಗಾದರೂ, ಶೋಷಣೆಗೊಳಗಾದರೂ ಕೂಡ, ಎಲ್ಲಾ ರೀತಿಯ ಸಂವಿಧಾನ ಬದ್ಧವಾದ ಹಕ್ಕುಗಳಿಂದ ವಂಚಿತರಾದರೂ ಕೂಡ ಯಾವತ್ತೂ ಈ ದೇಶದ ವಿರುದ್ಧ ಸಂವಿಧಾನ ವಿರೋಧಿ ಕೆಲಸವನ್ನು ಮಾಡಿಲ್ಲ. ಕರ್ನಾಟಕದಲ್ಲಿ 23 ಹಿಂದುಗಳ ಕೊಲೆಯಾಗಿದೆ ಎಂಬ ಪಟ್ಟಿಯನ್ನು ಶೋಭಾ ಕರಂದ್ಲಾಜೆಯವರು ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದ್ದಾರೆ. ಆದರೆ ಇದೇ ಸಮಯದಲ್ಲಿ ಸಂಘಪರಿವಾರದಿಂದ ಕೊಲೆಯಾದ 13 ಹಿಂದುಗಳ ಪಟ್ಟಿಯನ್ನು ಏಕೆ ಕೊಟ್ಟಿಲ್ಲ? ಅದರಲ್ಲೂ ವಿಶೇಷವೇನೆಂದರೆ ಕೊಲೆಯಾದ 13 ಮಂದಿಯ ಪಟ್ಟಿಯಲ್ಲಿ ಜೀವಂತವಿರುವವರ ಹೆಸರೂ ಇದೆ, ಅಪಘಾತದಲ್ಲಿ ಸಾವನ್ನಪ್ಪಿದ್ದವವರ ಹೆಸರೂ ಇದೆ ಹಾಗೂ ಕೌಟುಂಬಿಕ ಕಲಹ ಮತ್ತು ಆಸ್ತಿಗಾಗಿ ಕೊಲೆಯಾದವರ ಹೆಸರೂ ಕೂಡಾ ಈ ಪಟ್ಟಿಯಲ್ಲಿದೆ ಎಂದರು.

MNG 3 2

ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾವು ತನ್ನ ಪ್ರಥಮ ದಿನಂದಿಂದ ಇವತ್ತಿನವರೆಗೆ ಹಿಂದೂಗಳ ವಿರುದ್ಧ ಅಥವಾ ಸಂವಿಧಾನದ ವಿರುದ್ಧ ಮಾತನಾಡಿದ ಬಗ್ಗೆ ಪುರಾವೆ ಸಮೇತ ತೋರಿಸಲು ಸಂಘ ಪರಿವಾರಕ್ಕೆ ಸಾಧ್ಯವಿದೆಯೇ? ಪಾಪ್ಯುಲರ್ ಫ್ರಂಟ್ ನ ಹೋರಾಟ ಈ ದೇಶದ ದೌರ್ಜನ್ಯಕ್ಕೊಳಗಾದವರ ಪರವಾಗಿ ಹಾಗೂ ಈ ದೇಶದ ಸಂವಿಧಾನ ವಿರೋಧಿಗಳಾದ ಹಾಗೂ ದೇಶದ ಆಂತರಿಕ ಶತ್ರುಗಳಾದ ಭಯೋತ್ಪಾದಕ ಆರ್‍ಎಸ್‍ಎಸ್ ವಿರುದ್ಧವಾಗಿದೆ. ನಮ್ಮ ಕೊನೆಯ ಉಸಿರಿರುವ ತನಕ ಸಂಘ ಪರಿವಾರದ ವಿರುದ್ಧ ಹೋರಾಡಲು ಕಟಿಬದ್ಧರಾಗಿದ್ದೇವೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಮಾತನಾಡಿದ ಅತಿಥಿಯೊಬ್ಬರು, ಈ ಸಂತಾಪ ಸಭೆಯು ಕೊನೆಯ ಸಂತಾಪ ಸಭೆಯಾಗಲಿ ಎಂದು ಆಶಿಸಿದರು. ನೆಹರೂ ಮೈದಾನದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಮುಸ್ಲಿಂ ಸಮುದಾಯದ ವಿವಿಧ ಸಂಘ ಸಂಸ್ಥೆ ಹಾಗೂ ಸಂಘಟನೆಗಳ ಹಲವಾರು ನಾಯಕರು ಉಪಸ್ಥಿತರಿದ್ದು, ಸಾವಿರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಸೇರಿದ್ದರು.

MNG 11 2

MNG 6 1

MNG 7 1

MNG 8 1

MNG 1 3

MNG 9 2

MNG 10 1

TAGGED:basheerdeepakHaji Abdul Hamid KhandakMangaloremeetingMurderPFIPublic TVYasir Hasanದೀಪಕ್ಪಬ್ಲಿಕ್ ಟಿವಿಪಿಎಫ್‍ಐಬಶೀರ್ಮಂಗಳೂರುಯಾಸಿರ್ ಹಸನ್ಸಭೆಹತ್ಯೆಹಾಜಿ ಅಬ್ದುಲ್ ಹಮೀದ್ ಖಂದಕ್
Share This Article
Facebook Whatsapp Whatsapp Telegram

Cinema news

Udupi Rishab Shetty Home Bhajane Kunitha Yakshagana Harake
ನಟ ರಿಷಬ್ ಶೆಟ್ಟಿ ಮನೆಯಲ್ಲಿ ಕುಣಿತ ಭಜನೆ, ಯಕ್ಷಗಾನ ಹರಕೆ ಪ್ರದರ್ಶನ
Cinema Districts Karnataka Latest Sandalwood Top Stories Udupi
Asha Bhosle Funeral
ಸರ್ಕಾರಿ ಗೌರವಗಳೊಂದಿಗೆ ನೆರವೇರಿದ ಗಾಯಕಿ ಆಶಾ ಭೋಸ್ಲೆ ಅಂತ್ಯಕ್ರಿಯೆ
Cinema Latest National Top Stories
Jogi Prem
ಕನ್ನಡ ಸಿನಿಮಾ ಅಂತಲೇ ರಾಜಕಾರಣ – ಸೆನ್ಸಾರ್ ಬೋರ್ಡ್ ವಿರುದ್ಧ ಪ್ರೇಮ್ ಕಿಡಿ
Cinema Latest Sandalwood Top Stories
Dhruva Sarja
LPG ಗ್ಯಾಸ್‌ ಬಿಕ್ಕಟ್ಟಿನಿಂದ ಕಂಗಾಲಾದ ಆಟೋ ಚಾಲಕರಿಗೆ ಆಸರೆ – 25 ಲಕ್ಷ ನೆರವು ನೀಡಿದ ಧ್ರುವ ಸರ್ಜಾ!
Bengaluru City Cinema Latest Sandalwood Top Stories

You Might Also Like

Bus carrying Vinay Kulkarni to jail catches fire bengaluru CBI
Bengaluru City

ಜೈಲಿಗೆ ವಿನಯ್‌ ಕುಲಕರ್ಣಿಯನ್ನು ಕರೆತರುತ್ತಿದ್ದ ಬಸ್ಸಿನಲ್ಲಿ ಬೆಂಕಿ

Public TV
By Public TV
26 minutes ago
Bus carrying Vinay Kulkarni to jail catches fire bengaluru CBI
Bengaluru City

ಜೈಲಿಗೆ ವಿನಯ್‌ ಕುಲಕರ್ಣಿಯನ್ನು ಕರೆತರುತ್ತಿದ್ದ ಬಸ್ಸಿನಲ್ಲಿ ಬೆಂಕಿ

Public TV
By Public TV
28 minutes ago
big bulletin 15 april 2026 part 1
Big Bulletin

ಬಿಗ್‌ ಬುಲೆಟಿನ್‌ 15 April 2026 ಭಾಗ-1

Public TV
By Public TV
51 minutes ago
big bulletin 15 april 2026 part 2
Big Bulletin

ಬಿಗ್‌ ಬುಲೆಟಿನ್‌ 15 April 2026 ಭಾಗ-2

Public TV
By Public TV
56 minutes ago
Rasikh Salam Dar and Virat Kohli
Bengaluru City

75 ರನ್‌ಗಳಿಗೆ 8 ವಿಕೆಟ್‌ ಪತನ| ಆರ್‌ಸಿಬಿ ಬೌಲರ್‌ಗಳ ಮುಂದೆ ಲಕ್ನೋ ಪಲ್ಟಿ – ಮೊದಲ ಸ್ಥಾನಕ್ಕೆ ಜಿಗಿದ ಬೆಂಗಳೂರು

Public TV
By Public TV
58 minutes ago
big bulletin 15 april 2026 part 3
Big Bulletin

ಬಿಗ್‌ ಬುಲೆಟಿನ್‌ 15 April 2026 ಭಾಗ-3

Public TV
By Public TV
59 minutes ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?