ಬೆಂಗಳೂರು: ಸಿಎಂ ಡಿ.ಕೆ ಶಿವಕುಮಾರ್ (D.K Shivakumar)ಅವರು ಆಶಾ ಕಾರ್ಯಕರ್ತೆಯರ (Asha Workers) ಜೊತೆ ನಡೆಸಿದ ಸಂಧಾನ ಸಭೆ ಯಶಸ್ವಿಯಾಗಿದೆ. 2,000 ರೂ. ಪ್ರೋತ್ಸಾಹ ಧನ ಹೆಚ್ಚಳ ಮಾಡುವ ಸಿಎಂ ಭರವಸೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಕೊಂಡಿದ್ದಾರೆ.
ಈ ಬಗ್ಗೆ ಮಾತನಾಡಿದ ಸಿಎಂ, ರಾಜ್ಯದ ಮೂಲೆಮೂಲೆಯಿಂದ ಆಶಾ ಕಾರ್ಯಕರ್ತೆಯರು ಸುದ್ದಿಗೋಷ್ಟಿ ನೋಡುತ್ತಿದ್ದಾರೆ. 12 ದಿನಗಳ ಹೋರಾಟ ಮಾಡಿದ್ರು, 15 ಸಾವಿರಕ್ಕೆ ಮನವಿ ಮಾಡಿದ್ದರು. ರಾಜ್ಯದಿಂದ ಈಗ 5, ಕೇಂದ್ರದಿಂದ 2 ಸಾವಿರ, ಪ್ರೋತ್ಸಾಹ ಧನ 1 ಸಾವಿರ ಬರುತ್ತಿದೆ. ಕೆಲಸ ಆಧಾರಿತ ಇನ್ಸೆಂಟಿವ್ ಸಹ ಬರುತ್ತಿದೆ. ಮೂರು ವರ್ಷದಿಂದ ಹೆಚ್ಚಳ ಆಗಿಲ್ಲ. ಅನೇಕ ಬೇಡಿಕೆ ಇಟ್ಟಿದ್ದಾರೆ. ಇದನ್ನೂ ಓದಿ: 12ನೇ ದಿನಕ್ಕೆ ಕಾಲಿಟ್ಟ `ಆಶಾ’ ಹೋರಾಟ – ಮನವೊಲಿಕೆಗೆ ಮತ್ತೊಂದು ಸುತ್ತಿನ ಪ್ರಯತ್ನಕ್ಕೆ ಮುಂದಾದ ಯುಟಿ ಖಾದರ್
ಕೇಂದ್ರ ಸಹ ಇವರ ಬಗ್ಗೆ ಸಹನೆ ವಹಿಸಬೇಕು. ಹಿಂದೆ 50:50 ಅನುಪಾತ ಇತ್ತು. ಆದರೆ ಕೇಂದ್ರ 2 ಸಾವಿರದ ಮೇಲೆ ಹೆಚ್ಚಿಸಿಲ್ಲ. ನಾವು ಭರವಸೆ ಕೊಟ್ಟಿದ್ದೆವು. ಸುದೀರ್ಘ ಚರ್ಚೆ ನಂತರ ಈ ತೀರ್ಮಾನಕ್ಕೆ ಬರಲಾಗಿದೆ. ನನ್ನನ್ನು ಕರಗಿಸಿ ಮನಸು ಸೆಳೆದಿದ್ದಾರೆ.
2 ಸಾವಿರ ಹೆಚ್ಚಳ ಮಾಡಲು ತೀರ್ಮಾನ ಅಗಿದೆ. ಈಗ ಏನಿದೆ ಅದರ ಮೇಲೆ 2 ಸಾವಿರ ಹೆಚ್ಚಳವಾಗಿದ್ದು, ಜನವರಿ 2027 ರಿಂದ ಹೆಚ್ಚಳ ಅನ್ವಯವಾಗಲಿದೆ. ಮುಂದೆ ಅವರ ಸಹಕಾರ ಇರಲಿದೆ ಎಂದರು.
ಮಧ್ಯದಲ್ಲಿ ಕೆಲವರು ರಾಜಕಾರಣಕ್ಕೆ ಬಳಸಿಕೊಳ್ಳಲು ಪ್ರಯತ್ನ ಮಾಡಿದರು. ಇವರು ಯಾರಿಗೂ ಬಗ್ಗಲಿಲ್ಲ. ಕೆಲವರು ಇವರ ಥರದ ಬಟ್ಟೆ ಹಾಕಿಕೊಂಡು ಬಂದು ಇವರ ಜತೆ ಸೇರಿಕೊಂಡಿದ್ರು. ಅವರನ್ನು ಇವರು ಪತ್ತೆ ಮಾಡಿದ್ದಾರೆ. ಇವರಿಗೆ ಜಯ ಸಿಕ್ಕಿದೆ, ಒಟ್ಟಿಗೆ ಕೆಲಸ ಮಾಡೋಣ ಎಂದರು.
ಸಂಧಾನ ಸಕ್ಸಸ್ ಆಗುತ್ತಿದ್ದಂತೆ ಸಿಎಂ ಹಿಂದೆ ನಿಂತು ಆಶಾ ಕಾರ್ಯಕರ್ತೆಯರು ಒಗ್ಗಟ್ಟು ಪ್ರದರ್ಶಿಸಿದ್ದಾರೆ. ಸಿಎಂಗೆ ಶಾಲು ಹೊದಿಸಿ ಸನ್ಮಾನ ಸಹ ಮಾಡಿದ್ದಾರೆ. ಸಂಧಾನ ಸಕ್ಸಸ್ ಆಗುತ್ತಿದ್ದಂತೆ, ಆಶಾ ಕಾರ್ಯಕರ್ತೆಯರು ಹೋರಾಟವನ್ನು ಕೈಬಿಟ್ಟಿದ್ದಾರೆ. ಇದನ್ನೂ ಓದಿ: ಆಶಾ ಕಾರ್ಯಕರ್ತೆಯರ ಜೊತೆ ಯು.ಟಿ. ಖಾದರ್ ಸಭೆ – 2,000 ರೂ. ಹೆಚ್ಚಳದ ಭರವಸೆಗೂ ಮೂಡದ ಒಮ್ಮತ

