ರಿಯಾದ್: ಸೌದಿ ಅರೇಬಿಯಾದ ಜೆದ್ದಾ (Jeddah) ಮತ್ತು ಮದೀನಾಗೆ (Madinah) ವಿಮಾನಯಾನವನ್ನು ಇಂಡಿಗೋ (IndiGo) ಸಂಸ್ಥೆ ಪುನರಾರಂಭಿಸಿದೆ. ಇದರ ನಡುವೆ ರಿಯಾದ್ – ದಮ್ಮಾಮ್ಗೆ ಮತ್ತು ಅಲ್ಲಿಂದ ಹೊರಡುವ ವಿಮಾನಗಳ (Flights) ಸೇವೆ ಡಿ.7ರ ವರೆಗೆ ಸ್ಥಗಿತವಾಗಿರಲಿದೆ.
ಈ ಬಗ್ಗೆ X ನಲ್ಲಿ ಪೋಸ್ಟ್ ಮಾಡಿರುವ ವಿಮಾನಯಾನ ಸಂಸ್ಥೆ, ಜಿದ್ದಾ ಮತ್ತು ಮದೀನಾಗೆ ಆಯ್ದ ಸೇವೆಗಳನ್ನು ಪುನಃಸ್ಥಾಪಿಸಲು ನಿರ್ಧರಿಸಲಾಗಿದೆ. ಆದರೆ ರಿಯಾದ್ ಮತ್ತು ದಮ್ಮಾಮ್ಗೆ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸುವುದನ್ನು ಮುಂದುವರಿಸಲಾಗಿದೆ ಎಂದು ಮಾಹಿತಿ ಹಂಚಿಕೊಂಡಿದೆ.
ಬುಕಿಂಗ್ ಮಾಡಿರುವ ಪ್ರಯಾಣಿಕರಿಗೆ ಅಗತ್ಯ ಮಾಹಿತಿ ನೀಡಲಾಗುತ್ತಿದೆ. ವಿಮಾನ ನಿಲ್ದಾಣಕ್ಕೆ ಹೋಗುವ ಮೊದಲು ವೆಬ್ಸೈಟ್ ಅಥವಾ ಮೊಬೈಲ್ ಅಪ್ಲಿಕೇಶನ್ನಲ್ಲಿ ತಮ್ಮ ವಿಮಾನದ ಸ್ಥಿತಿಯನ್ನು ಪರಿಶೀಲಿಸುವಂತೆ ಸಂಸ್ಥೆ ಗ್ರಾಹಕರಿಗೆ ಸೂಚಿಸಿದೆ. ಇದನ್ನೂ ಓದಿ: ಇತಿಹಾಸದಲ್ಲೇ ಮೊದಲ ಬಾರಿಗೆ ಮೆಕ್ಕಾದಲ್ಲಿ ವೈಮಾನಿಕ ದಾಳಿ ಎಚ್ಚರಿಕೆ- ಹೌತಿ ಡ್ರೋನ್ ಹೊಡೆದುರುಳಿಸಿದ ಸೌದಿ
ಪ್ರಯಾಣಿಕರು ಮತ್ತು ಸಿಬ್ಬಂದಿಯ ಸುರಕ್ಷತೆ ನಮ್ಮ ಪ್ರಮುಖ ಆದ್ಯತೆಯಾಗಿದೆ. ವಿಮಾನಯಾನದ ಅಡಚಣೆಯ ಸಮಯದಲ್ಲಿ ಗ್ರಾಹಕರ ಸಂಯಮ ಮತ್ತು ಸಹಕಾರಕ್ಕಾಗಿ ನಾವು ಧನ್ಯವಾದ ಅರ್ಪಿಸುತ್ತೇವೆ ಎಂದು ಸಂಸ್ಥೆ ಹೇಳಿದೆ.
ವಿಮಾನ ಸ್ಥಗಿತಗೊಂಡಿದ್ದು ಯಾಕೆ?
ಈ ವರ್ಷ ಸೆ.16 ರಂದು ಇಸ್ಲಾಂ ಧರ್ಮದ ಪವಿತ್ರ ನಗರ ಮೆಕ್ಕಾ(Mecca) ಸೇರಿದಂತೆ ಜೆದ್ದಾ ಮತ್ತು ತೈಫ್ ಗವರ್ನರೇಟ್ಗಳ ಮೇಲೆ ಹೌತಿ ಡ್ರೋನ್ ದಾಳಿ ಭೀತಿ ಎದುರಾಗಿತ್ತು. ಈ ಬಗ್ಗೆ ಸೌದಿ ಅರೇಬಿಯಾ(Saudi Arabia) ನಾಗರಿಕ ರಕ್ಷಣಾ ಇಲಾಖೆ ದಾಳಿಯ ಭೀತಿಯಿಂದ ತುರ್ತು ಎಚ್ಚರಿಕೆ (Alert) ಘೋಷಿಸಿತ್ತು.
ಇದರಿಂದ ಮುನ್ನೆಚ್ಚರಿಕೆಯ ಭಾಗವಾಗಿ ಮದೀನಾದ ಪ್ರಿನ್ಸ್ ಮೊಹಮ್ಮದ್ ಬಿನ್ ಅಬ್ದುಲ್ ಅಜೀಜ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನ ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು. ಇದರಿಂದ ಭಾರತೀಯ ವಿಮಾನಯಾನ ಸಂಸ್ಥೆಗಳು ಭದ್ರತೆಯ ದೃಷ್ಟಿಯಿಂದ ವಿಮಾನ ಸಂಚಾರವನ್ನು ಸ್ಥಗಿತಗೊಳಿಸಿದ್ದವು. ಇದನ್ನೂ ಓದಿ: ಅಫ್ಘಾನಿಸ್ತಾನದ ಕುನಾರ್ ಶಾಲೆ ಬಳಿ ಸ್ಫೋಟ – 6 ವಿದ್ಯಾರ್ಥಿಗಳು ಸಾವು, 100 ಮಂದಿಗೆ ಗಾಯ
