ಶಿವಮೊಗ್ಗ: ಆಯನೂರು (Ayanur) ಬಳಿ ಹಿಟ್ & ರನ್ಗೆ (Hit And Run) ಮೆಸ್ಕಾಂ ಲೈನ್ಮ್ಯಾನ್ (Lineman) ಬಲಿಯಾಗಿದ್ದಾರೆ.
ಹಾರನಹಳ್ಳಿ ಮೆಸ್ಕಾಂ ಶಾಖೆಯ ತಿರುಮಲೇಶ್ ರೆಡ್ಡಿ (30) ಮೃತ ದುರ್ದೈವಿ. ಇವರು ಚಿತ್ರದುರ್ಗ ಜಿಲ್ಲೆಯ ನಾಯಕನಹಟ್ಟಿ ಮೂಲದವರಾಗಿದ್ದಾರೆ. ಕರ್ತವ್ಯ ಮುಗಿಸಿ ಬೈಕ್ನಲ್ಲಿ ವಾಪಸ್ ಆಗುವಾಗ ಈ ಅಪಘಾತ ನಡೆದಿದ್ದು, ಸ್ಥಳದಲ್ಲೇ ಅವರು ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ರಸ್ತೆ ದಾಟುವ ವೇಳೆ ಕಾರು ಅಪಘಾತ – ಒಂದು ತಿಂಗಳು ಕೋಮಾದಲ್ಲಿದ್ದ 5 ವರ್ಷದ ಬಾಲಕಿ ಸಾವು
ಮೈಸವಳ್ಳಿ- ವೀರಣ್ಣನಬೆನವಳ್ಳಿಯಲ್ಲಿ ವಿದ್ಯುತ್ ದುರಸ್ತಿಗೆ ಅವರು ತೆರಳಿದ್ದರು. ಅಲ್ಲಿಂದ ವಾಪಸ್ ಆಗುವಾಗ ಅಪರಿಚಿತ ವಾಹನ ಡಿಕ್ಕಿಯಾಗಿದೆ. ವಾಹನ ಚಾಲಕ ನಿಲ್ಲಿಸದೆ ಪರಾರಿಯಾಗಿದ್ದು, ಆತನ ಪತ್ತೆಗೆ ಪೊಲೀಸರು ಶೋಧ ನಡೆಸುತ್ತಿದ್ದಾರೆ.
ಈ ಸಂಬಂಧ ಕುಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಒತ್ತುವರಿ ವಿಚಾರಕ್ಕೆ ಗಲಾಟೆ – ಗುಂಡು ಹಾರಿಸಿ ಯುವಕನ ಕೊಲೆ
