- 15 ಆರೋಪಿಗಳು ಅರೆಸ್ಟ್
ನವದೆಹಲಿ: ಸ್ಪಾ ಮತ್ತು ಮಸಾಜ್ ಸೆಂಟರ್ಗಳ ಸೋಗಿನಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಜಾಲಗಳ ಮೇಲೆ ದೆಹಲಿ (Delhi) ಪೊಲೀಸರು (Police) ದಾಳಿ ನಡೆಸಿದ್ದಾರೆ. 4 ಸ್ಪಾಗಳ ಮೇಲೆ ದಾಳಿ (Spa Raids) ನಡೆಸಿ, 29 ಮಹಿಳೆಯರನ್ನು ಪೊಲೀಸರು ರಕ್ಷಿಸಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿರುವ ಪೊಲೀಸರು, ದೆಹಲಿ ಕೇಂದ್ರ ಭಾಗದಲ್ಲಿ ಸ್ಪಾ ಹಾಗೂ ಮಸಾಜ್ ಸೆಂಟರ್ ಹೆಸರಿನಲ್ಲಿ ವೇಶ್ಯಾವಾಟಿಕೆ ನಡೆಸಲಾಗುತ್ತಿತ್ತು. ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದಾಗ ವೇಶ್ಯಾವಾಟಿಕೆ ನಡೆಸುತ್ತಿರುವುದು ಬೆಳಕಿಗೆ ಬಂದಿದೆ. ಈ ಸ್ಪಾಗಳಿಂದ 29 ಮಂದಿ ಮಹಿಳೆಯರನ್ನು ರಕ್ಷಿಸಲಾಗಿದೆ. ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಜಿಲ್ಲಾಧಿಕಾರಿಗೆ ಅಶ್ಲೀಲ ಮೆಸೇಜ್ – ಟಿವಿಕೆ ಶಾಸಕ ಅರೆಸ್ಟ್
ಪಹರ್ಗಂಜ್, ನಬಿ ಕರೀಮ್ ಮತ್ತು ಕರೋಲ್ ಬಾಗ್ನಲ್ಲಿರುವ 4 ಸ್ಪಾಗಳಲ್ಲಿ ವೇಶ್ಯಾವಾಟಿಕೆ ನಡೆಯುತ್ತಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಬಂದಿತ್ತು. ಮಾಹಿತಿ ಆಧರಿಸಿ ದಾಳಿ ನಡೆಸುವ ಮುನ್ನ ಪೊಲೀಸರು ಮಫ್ತಿಯಲ್ಲಿ ಗ್ರಾಹಕರಂತೆ ತೆರಳಿದ್ದರು. ಮಾಹಿತಿ ಖಚಿತವಾಗುತ್ತಿದ್ದಂತೆ ಪೊಲೀಸರು ದಾಳಿ ನಡೆಸಿದ್ದರು.
ಈ ಸಂಬಂಧ ಸ್ಪಾ ಮಾಲೀಕರು, ವ್ಯವಸ್ಥಾಪಕರು ಮತ್ತು ಗ್ರಾಹಕರು ಸೇರಿದಂತೆ 15 ಜನರನ್ನು ಬಂಧಿಸಲಾಗಿದೆ. 4 ಪ್ರಕರಣಗಳು ದಾಖಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ.
ಕಾರ್ಯಾಚರಣೆ ನಡೆದಿದ್ದು ಹೇಗೆ?
ನವೆಂಬರ್ 26 ರಂದು, ರಹಸ್ಯ ಮಾಹಿತಿದಾರರು ಪಹರ್ಗಂಜ್, ನಬಿ ಕರೀಮ್ ಮತ್ತು ಕರೋಲ್ ಬಾಗ್ನ ಪ್ರದೇಶದಲ್ಲಿರುವ ಸ್ಪಾಗಳಲ್ಲಿ ನಡೆಯುತ್ತಿದ್ದ ವೇಶ್ಯಾವಾಟಿಕೆ ಜಾಲದ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದರು. ಈ ಮಾಹಿತಿಯನ್ನು ಆಧರಿಸಿ ಆಯಾ ಭಾಗದ ಪೊಲೀಸ್ ಠಾಣೆಗಳಿಂದ ತಂಡ ರಚಿಸಲಾಗಿತ್ತು.
ಮಾಹಿತಿಯನ್ನು ಪರಿಶೀಲಿಸಲು ಮಫ್ತಿಯಲ್ಲಿ ಗ್ರಾಹಕರಂತೆ ಪೊಲೀಸರನ್ನು ನಿಯೋಜಿಸಲಾಗಿತ್ತು. ಮಫ್ತಿಯಲ್ಲಿದ್ದ ಪೊಲೀಸರು ಸ್ಪಾಗಳಿಗೆ ತೆರಳಿ ಮಾಹಿತಿ ದೃಢಪಡಿಸಿದ ನಂತರ ಪೊಲೀಸರ ತಂಡಗಳು ದಾಳಿ ನಡೆಸಿದ್ದವು. ದಾಳಿ ವೇಳೆ ನಗದು ಹಣ, ಗ್ರಾಹಕರ ನೋಂದಣಿ ದಾಖಲೆಗಳು, ಗರ್ಭನಿರೋಧಕಗಳು ಪತ್ತೆಯಾಗಿದ್ದು, ಪೊಲೀಸರು ಅವುಗಳನ್ನು ವಶಕ್ಕೆ ಪಡೆದಿದ್ದಾರೆ. ಇದನ್ನೂ ಓದಿ: ಕೋಲಾರ | ಪಾರ್ಸೆಲ್ ರೀತಿ ಮೂಟೆ ಕಟ್ಟಿ ಮಹಿಳೆಯ ಶವ ಎಸೆದು ಹೋದ ದುಷ್ಕರ್ಮಿಗಳು
