-ಆಶಾ ಕಾರ್ಯಕರ್ತೆಯರ ಬೇಡಿಕೆ ಈಡೇರಿಸದೇ ಇದ್ರೆ ಬೆಳಗಾವಿ ಅಧಿವೇಶನದಲ್ಲಿ ಹೋರಾಟ
ಬೆಂಗಳೂರು: ಯುಟಿ ಖಾದರ್ (UT Khader) ಅವರೇ ನೀವು ಇಲ್ಲದಿದ್ದರೂ ನಿಮ್ಮ ಕ್ಷೇತ್ರ, ಇಲಾಖೆ ನಡೆಯುತ್ತೆ, ನಿಮ್ಗೆ ಸಂಬಳ ಯಾಕೆ? ರಾಜೀನಾಮೆ ಕೊಡಿ ಎಂದು ಬಿಜೆಪಿ (BJP) ಎಂಎಲ್ಸಿ ರವಿಕುಮಾರ್ (MLC Ravi Kumar) ವ್ಯಂಗ್ಯವಾಡಿದ್ದಾರೆ.
ಆಶಾ ಕಾರ್ಯಕರ್ತೆಯರು (Asha Workers) ಇಲ್ಲದಿದ್ದರೂ ನಡೆಯುತ್ತೆ ಎಂಬ ಹೇಳಿಕೆಗೆ ಬಿಜೆಪಿ ಕಚೇರಿಯಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಆಶಾ ಕಾರ್ಯಕರ್ತೆಯರು 11 ದಿನಗಳಿಂದ ಪ್ರತಿಭಟನೆ ಮಾಡುತ್ತಿದ್ದಾರೆ. ಆದ್ರೆ ಸಿಎಂ, ಸಚಿವರು, ಕಾರ್ಮಿಕ ಇಲಾಖೆ, ಮಹಿಳಾ ಇಲಾಖೆ, ಧನಾತ್ಮಕವಾಗಿ ಅವರ ಜೊತೆ ಮಾತುಕತೆ ಮಾಡಿಲ್ಲ. ಯು.ಟಿ.ಖಾದರ್ ಆಶಾ ಕಾರ್ಯಕರ್ತೆಯರು ಇಲ್ಲದೆ ಕೆಲಸ ಆಗ್ತಿದೆ. ಸಮಸ್ಯೆಯೇ ಆಗಿಲ್ಲ ಅಂತ ಹೇಳಿದ್ದಾರೆ. ಆಶಾ ಕಾರ್ಯಕರ್ತೆಯರು ಹೋರಾಟ ಕೈ ಬಿಟ್ಟು ಹೋಗಿ ಅಂತಿದ್ದಾರೆ. ಯು.ಟಿ.ಖಾದರ್ ಅವರೇ ನಿಮ್ಮ ಕ್ಷೇತ್ರದಲ್ಲಿ ನೀವು ಇಲ್ಲ ಅಂದ್ರಿ, ನಿಮ್ಮ ಕ್ಷೇತ್ರ, ನಿಮ್ಮ ಇಲಾಖೆ ನಡೆಯುತ್ತದೆ. ನೀವು ರಾಜೀನಾಮೆ ಕೊಟ್ಟುಬಿಡಿ. ನಿಮಗೆ ಟಿಎ, ಡಿಎ, ಸಂಬಳ ಯಾಕೆ ಬೇಕು ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಕೋರ್ಟ್ ಸಮಯ ವ್ಯರ್ಥ ಮಾಡ್ಬೇಡಿ – ರಾಮಾಯಣ ಸಿನಿಮಾ ಪ್ರಶ್ನಿಸಿ ಸಲ್ಲಿಸಿದ ಅರ್ಜಿ ವಿಚಾರಣೆ ವೇಳೆ ಸುಪ್ರೀಂ ಅಭಿಪ್ರಾಯ
ಸಿಎಂ ಅವರು ಆಶಾ ಕಾರ್ಯಕರ್ತೆಯರು ಸರ್ಕಾರವನ್ನ ಬೆದರಿಸಬೇಡಿ ಅಂತಾರೆ. ಆಶಾ ಕಾರ್ಯಕರ್ತೆಯರು ತಮ್ಮ ಆಹಾರಕ್ಕಾಗಿ ಬೇಡಿಕೆ ಇಟ್ಟಿದ್ದಾರೆ. ಅವರು ನಿಮ್ಮನ್ನ ಹೆದರಿಸೋಕೆ ಸಾಧ್ಯನಾ? ಡಿಕೆ ಶಿವಕುಮಾರ್ ಅವರನ್ನು ಹೆದರಿಸೋಕೆ ಸಾಧ್ಯನಾ? ಸಿದ್ದರಾಮಯ್ಯ ಹಿಂದೆ 10 ಸಾವಿರ ರೂ. ಕೊಡ್ತೀನಿ ಅಂದಿದ್ದರು. ಆದ್ರೆ ಈ ಸರ್ಕಾರ ಇನ್ನು ಕೊಟ್ಟಿಲ್ಲ. ಹೋರಾಟ ಮಾಡಿದ್ರೆ ಬ್ಲ್ಯಾಕ್ಮೇಲ್ ಮಾಡ್ತೀರಾ ಅಂತೀರಾ ಅಂತ ಸಿಎಂ ಹೇಳಿಕೆ ಖಂಡಿಸಿದ್ದಾರೆ.
ಸಚಿವ ನರೇಂದ್ರ ಸ್ವಾಮಿ ಕಂಠೀಹಾರ ಕೊಡೋಕೆ ಆಗುತ್ತೆ ಅಂತಾರೆ. ಈಗಾಗಲೇ ಈ ಸರ್ಕಾರ ಮುಳ್ಳಿನ ಹಾರ ಕೊಟ್ಟಿದೆ. ಕೂಡಲೇ ಇವೆಲ್ಲ ಬಿಟ್ಟು ಗೌರವದಿಂದ, ಮಾನವೀಯತೆಯಿಂದ ಈ ಸರ್ಕಾರ ಆಶಾ ಕಾರ್ಯಕರ್ತೆಯರಿಗೆ 15 ಸಾವಿರ ರೂ. ಗೌರವ ಧನ ಕೊಡಬೇಕು. ಇಲ್ಲದೆ ಹೋದ್ರೆ ಬೆಳಗಾವಿ ಅಧಿವೇಶನದಲ್ಲಿ ದೊಡ್ಡ ಹೋರಾಟ ಮಾಡ್ತೀವಿ ಅಂತ ಎಚ್ಚರಿಕೆ ಕೊಟ್ಟಿದ್ದಾರೆ.ಇದನ್ನೂ ಓದಿ: ಮಾತುಕತೆಗಾಗಿ ಮಸ್ತಾನ್ ದರ್ಗಾ ಬಳಿಯ ಲಾಡ್ಜ್ಗೆ ಬಂದಿದ್ದ ಜೋಡಿ – ಇಂದು ಚೆಕ್ಔಟ್ ಆಗುವಾಗ ಗಲಾಟೆ; ಇರಿದು ಕೊಂದ ಪ್ರಿಯಕರ











