ದಾವಣಗೆರೆ: ಕುರುಕಲು ತಿಂಡಿ ಪೊಟ್ಟಣದಲ್ಲಿದ್ದ ಆಟಿಕೆ ನುಂಗಿ 4 ವರ್ಷದ ಮಗು (Child) ಸಾವನ್ನಪ್ಪಿದ ಘಟನೆ ಚನ್ನಗಿರಿ (Chennagiri) ಪಟ್ಟಣದ ಕೌಸರ್ ಮಸೀದಿ ಏರಿಯಾದಲ್ಲಿ ನಡೆದಿದೆ.
ಅಲಿಯಾ ಶೇಕ್ (4 ವರ್ಷ, 4 ತಿಂಗಳು) ಸಾವನ್ನಪ್ಪಿದ ಮಗು. ಮನೆಯ ಪಕ್ಕದಲ್ಲೇ ಇದ್ದ ಅಂಗಡಿಯಿಂದ ಮಗು ಕುರುಕಲು ತಿಂಡಿ ತಂದು ತಿನ್ನುತ್ತಿತ್ತು. ಈ ವೇಳೆ ಅದರಲ್ಲಿದ್ದ ಆಟಿಕೆಯನ್ನು ನುಂಗಿ, ಮಗು ಅಸ್ವಸ್ಥಗೊಂಡಿತ್ತು. ಇದನ್ನೂ ಓದಿ: ಆಟವಾಡುತ್ತಿದ್ದ ವೇಳೆ ಬಲೂನ್ ನುಂಗಿ ಮಗು ಸಾವು
ಕೂಡಲೇ ಮಗುವನ್ನು ಪೋಷಕರು ತಾಲೂಕು ಆಸ್ಪತ್ರೆಗೆ ಕರೆದೊಯ್ದಿದ್ದರು. ಚಿಕಿತ್ಸೆ ಪಡೆದು ಮನೆಗೆ ಕರೆತಂದ ತಕ್ಷಣ ಅಸ್ವಸ್ಥಗೊಂಡು ಮಗು ಸಾವನ್ನಪ್ಪಿದೆ. ಚನ್ನಗಿರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಇದನ್ನೂ ಓದಿ: ಒಣಗಿದ ದಾಸವಾಳ ನುಂಗಿ 6 ತಿಂಗಳ ಮಗು ಸಾವು
