ದರ್ಶನ್ (Darshan) ಪತ್ನಿ ವಿಜಯಲಕ್ಷ್ಮಿ (Vijayalakshmi) ಪಿಎ ನಾಗರಾಜ್ಗೆ ಅವಾಚ್ಯ ಪದಗಳಿಂದ ನಿಂದನೆ ಹಿನ್ನೆಲೆ ಆರ್ಆರ್ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಈ ಸಂಬಂಧ ಬುಧವಾರ ರಾತ್ರಿ ರಾಜರಾಜೇಶ್ವರಿ ಪೊಲೀಸ್ ಠಾಣೆಗೆ ನಟ ಧನ್ವೀರ್ ಹಾಜರಾದ್ರು. ವಿಚಾರಣೆಗೆ ಹಾಜರಾಗದೆ ತಪ್ಪಿಸಿಕೊಳ್ತಿದ್ದ ಧನ್ವೀರ್ಗೆ ಈ ಹಿಂದೆ ನೋಟಿಸ್ ನೀಡಲಾಗಿತ್ತು. ಈ ಹಿನ್ನೆಲೆ ವಿಚಾರಣೆಗೆ ಧನ್ವೀರ್ (Dhanveer Gowda) ಆಗಮಿಸಿದ್ದರು. ವಿಜಯಲಕ್ಷ್ಮಿ ಜೊತೆ ಧನ್ವೀರ್ ಜಟಾಪಟಿ ಬಳಿಕ ಇದೀಗ ಮೊದಲ ಬಾರಿಗೆ ಪೊಲೀಸ್ ಠಾಣೆಯಲ್ಲಿ ಧನ್ವೀರ್ ಕಾಣಿಸ್ಕೊಂಡಿದ್ದಾರೆ.
ಈ ಹಿಂದೆ ಧನ್ವೀರ್ ತಮ್ಮ ಮೇಲಿದ್ದ ಮೂರು ಎಫ್ಐಆರ್ ರದ್ದು ಕೋರಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಆದರೆ, ಹೈಕೋರ್ಟ್ನಿಂದ ಎಫ್ಐಆರ್ ಸ್ಕ್ವಾಷ್ಗೆ ನಿರಾಕರಣೆ ಮಾಡಲಾಗಿತ್ತು. ಇದೀಗ ವಿಧಿಯಿಲ್ಲದೆ ವಿಚಾರಣೆಗೆ ಹಾಜರಾದ್ರು ನಟ ಧನ್ವೀರ್. ಭರ್ತಿ ಮೂರು ಗಂಟೆಗಳ ಕಾಲ ವಿಚಾರಣೆ ನಡೆದಿದ್ದು, ರಾತ್ರಿ ಠಾಣೆಯಿಂದ ಹೊರಬಂದಿದ್ದಾರೆ. ಇದನ್ನೂ ಓದಿ: ರೇಣುಕಾಸ್ವಾಮಿ ಹತ್ಯೆ ಕೇಸ್ನಲ್ಲಿ ಬಿಗ್ ಟ್ವಿಸ್ಟ್: ಕೋರ್ಟ್ನಲ್ಲಿ ಉಲ್ಟಾ ಹೊಡೆದ ಮತ್ತಿಬ್ಬರು ಸಾಕ್ಷಿಗಳು!
ಧನ್ವೀರ್ ವಿರುದ್ಧ ಆರ್ಆರ್ ನಗರ , ಚಾಮರಾಜಪೇಟೆ ಹಾಗೂ ಮಹಾಲಕ್ಷ್ಮಿ ಲೇಔಟ್ ಪೊಲೀಸ್ ಸ್ಟೇಷನ್ನಲ್ಲಿ ದೂರು ದಾಖಲಾಗಿತ್ತು. ಇದೀಗ ಆರ್ಆರ್ ನಗರದ ದೂರಿನ ಅನ್ವಯ ವಿಚಾರಣೆ ಮುಗಿಸಿದ್ದು, ಬಳಿಕ ಇನ್ನೆರಡು ದೂರುಗಳ ವಿಚಾರಣೆಗೆ ಧನ್ವೀರ್ ಶೀಘ್ರದಲ್ಲೇ ಭಾಗಿಯಾಗಬೇಕಿದೆ.
