ಹಾಸನ: ಬೆಂಗಳೂರಿನ (Bengaluru) ಫ್ರೀಡಂ ಪಾರ್ಕ್ನಲ್ಲಿ ನಡೆಯುತ್ತಿರುವ ಆಶಾ ಕಾರ್ಯಕರ್ತೆಯರ ಪ್ರತಿಭಟನೆಯಲ್ಲಿ (Protest) ಭಾಗಿಯಾಗಿದ್ದ ಆಲೂರು ತಾಲೂಕಿನ ಕಾರ್ಜುವಳ್ಳಿ ಗ್ರಾಮದ ಆಶಾ ಕಾರ್ಯಕರ್ತೆ (Asha Worker) ರೂಪ ಅವರ ಮಗ ಅಪಘಾತದಲ್ಲಿ (Accident) ಸಾವನ್ನಪ್ಪಿದ್ದಾನೆ.
ಸುಜಯ್ (21) ಮೃತ ದುರ್ದೈವಿ. ತಾಯಿ ಪ್ರತಿಭಟನೆಯಲ್ಲಿ ನಿರತರಾಗಿದ್ದಾಗಲೇ ಅಪಘಾತದಲ್ಲಿ ಮಗ ಸಾವನ್ನಪ್ಪಿದ್ದಾನೆ. ಇದನ್ನೂ ಓದಿ: ಆಶಾಗಳ ಸೇವೆ ಇಲ್ಲದಿದ್ದರೂ ಆರೋಗ್ಯ ಇಲಾಖೆ ನಡೆಯುತ್ತೆ: ಪ್ರತಿಭಟನೆ ವಿರುದ್ಧ ಆರೋಗ್ಯ ಸಚಿವ ಗರಂ
ಬುಧವಾರ (ನ.25) ಸಂಜೆ ಲಕ್ಷ್ಮೀಪುರ ಬಳಿ ಬೈಕ್ ಅಪಘಾತದಲ್ಲಿ ಸುಜಯ್ ಮೃತಪಟ್ಟಿದ್ದ. ಈ ವಿಚಾರ ತಿಳಿಯುತ್ತಿದ್ದಂತೆ ಬೆಂಗಳೂರಿನಿಂದ ರೂಪ ಅವರು ಆಲೂರಿಗೆ ವಾಪಾಸ್ ಆಗಿದ್ದಾರೆ. ಮಗನನ್ನು ಕಳೆದುಕೊಂಡು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಆಲೂರು ಆಸ್ಪತ್ರೆಯಲ್ಲಿ ಸುಜಯ್ ಮೃತದೇಹ ಇರಿಸಲಾಗಿದ್ದು, ಮುಂದಿನ ಕ್ರಮಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಆಲೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಅಪಘಾತ ನಡೆದಿತ್ತು. ಇದನ್ನೂ ಓದಿ: ಹತ್ತನೇ ದಿನಕ್ಕೆ ಕಾಲಿಟ್ಟ `ಆಶಾ’ ಪ್ರತಿಭಟನೆ – ಮನವೊಲಿಸುವಲ್ಲಿ ಸಕ್ಸಸ್ ಆಗ್ತಾರಾ ಸಿಎಂ?
