-ಭೇಟಿ ವೇಳೆ ಇದ್ದ ರಣಬೀರ್ ಕಪೂರ್, ಸಾಯಿ ಪಲ್ಲವಿ
ನವದೆಹಲಿ: ಜಾಗತಿಕ ಯಶಸ್ಸು ಗಳಿಸಿ, 2000 ಕೋಟಿ ಕ್ಲಬ್ ಸೇರುತ್ತಿರುವ ಹೊತ್ತಿನಲ್ಲಿ ರಾಮಾಯಣ ತಂಡ (Ramayana Team) ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಅವರನ್ನು ಭೇಟಿಯಾಗಿದೆ.
`ರಾಮಾಯಣ: ಭಾಗ 1′ (Ramayana Part 1)ಚಿತ್ರದ ನಿರ್ಮಾಪಕ ನಮಿತ್ ಮಲ್ಹೋತ್ರಾ, ನಿರ್ದೇಶಕ ನಿತೇಶ್ ತಿವಾರಿ, ರಾಮನ ಪಾತ್ರಧಾರಿ ರಣಬೀರ್ ಕಪೂರ್ (Ranbeer Kapoor) ಮತ್ತು ಸೀತೆಯ ಪಾತ್ರಧಾರಿ ಸಾಯಿ ಪಲ್ಲವಿ (Sai Pallavi) ಅವರು ಭೇಟಿಯಾಗಿ ಪೌರಾಣಿಕ ಮಹಾಕಾವ್ಯದ ಬಗ್ಗೆ ಚರ್ಚಿಸಿದ್ದಾರೆ. ಈ ವೇಳೆ ಅಮಿತ್ ಶಾ ಅವರು ಚಿತ್ರದ ಜಾಗತಿಕ ಯಶಸ್ಸಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಇದನ್ನೂ ಓದಿ: ವಿಷ್ಯುವಲ್ ಎಫೆಕ್ಟ್ ಆಸ್ಕರ್ ರೇಸ್ನಲ್ಲಿ ‘ರಾಮಾಯಣ’ – ಹಾಲಿವುಡ್ ಮೂವಿಗಳ ಜೊತೆ ಯಶ್ ಸಿನಿಮಾ ಪೈಪೋಟಿ
ಈ ಭೇಟಿಯ ವೇಳೆ ಮಹಾಕಾವ್ಯದ ಕುರಿತು ಅಮಿತ್ ಶಾ ಅವರಿಗಿದ್ದ ಆಳವಾದ ಜ್ಞಾನ ಮತ್ತು ಅದರ ಸಾಂಸ್ಕೃತಿಕ ಮಹತ್ವದ ಕುರಿತಾದ ತಿಳುವಳಿಕೆಯನ್ನು ಕಂಡು ಚಿತ್ರತಂಡ ಮೆಚ್ಚುಗೆ ವ್ಯಕ್ತಪಡಿಸಿದೆ. ಭೇಟಿಯ ಫೋಟೋಗಳನ್ನು ವರ್ಲ್ಡ್ ಆಫ್ ರಾಮಾಯಣ (World of Ramayana) ತಂಡವು ತನ್ನ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದೆ.
Team Ramayana was honoured to meet Home Minister Shri @AmitShah as the film continues to receive immense love across the country and in cinemas worldwide. https://t.co/jSiTpGH16w
— The World Of Ramayana (@WorldOfRamayana) November 26, 2026
ನಿತೇಶ್ ತಿವಾರಿ ನಿರ್ದೇಶನದ ಮತ್ತು ನಮಿತ್ ಮಲ್ಹೋತ್ರಾ ಹಾಗೂ ರಾಕಿಂಗ್ ಸ್ಟಾರ್ ಯಶ್ ನಿರ್ಮಾಣದ `ರಾಮಾಯಣ: ಭಾಗ 1′ ಚಿತ್ರವು 2026ರ ನ.5ರಂದು ವಿಶ್ವಾದ್ಯಂತ ಬಿಡುಗಡೆಯಾಗಿತ್ತು. ರಣಬೀರ್ ಕಪೂರ್, ಯಶ್, ಸಾಯಿ ಪಲ್ಲವಿ ಮತ್ತು ರವಿ ದುಬೆ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಈ ಚಿತ್ರಕ್ಕೆ ಭಾರತ ಮತ್ತು ವಿದೇಶಗಳಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.ಇದನ್ನೂ ಓದಿ: ಕಲೆಕ್ಷನ್ನಲ್ಲಿ ‘ರಾಮಾಯಣ’ ಅಬ್ಬರ; ಪುಷ್ಪ 2 ಜೀವಮಾನದ ಗಳಿಕೆ ದಾಖಲೆ ಮುರಿಯಲು ಕೇವಲ 7 ಕೋಟಿ ಬಾಕಿ
ಬಾಕ್ಸ್ ಆಫೀಸ್ನಲ್ಲಿ ತನ್ನ ಪ್ರಭಾವಶಾಲಿ ಓಟವನ್ನು ಮುಂದುವರಿಸಿರುವ `ರಾಮಾಯಣ’ ಚಿತ್ರವು ಈಗ ವಿಶ್ವಾದ್ಯಂತ 2,000 ಕೋಟಿ ರೂ. ಗಳಿಕೆಯ ಮೈಲಿಗಲ್ಲಿನತ್ತ ಸಾಗುತ್ತಿದೆ.
ಆಸ್ಕರ್ ರೇಸ್ನಲ್ಲಿ ರಾಮಾಯಣ
ಇನ್ನೂ ಜಾಗತಿಕ ಸಿನಿಮಾ ರಂಗದ ಅತ್ಯುನ್ನತ ಪ್ರಶಸ್ತಿ ಆಸ್ಕರ್ನ ವಿಷ್ಯುವಲ್ ಎಫೆಕ್ಟ್ (ದೃಶ್ಯ ಪರಿಣಾಮ) ಅಗ್ರ 20 ಸಿನಿಮಾಗಳ ಸಾಲಿನಲ್ಲಿ ನಿತೀಶ್ ತಿವಾರಿ ನಿರ್ದೇಶನದ ರಾಮಾಯಣ ಸಿನಿಮಾವು ಸ್ಥಾನ ಪಡೆದುಕೊಂಡಿದೆ. ಹಾಲಿವುಡ್ನ ಪ್ರಮುಖ ನಿರ್ಮಾಣಗಳಾದ `ಡ್ಯೂನ್: ಪಾರ್ಟ್ ತ್ರೀ’, `ದಿ ಒಡಿಸ್ಸಿ’ ಮತ್ತು `ಅವೆಂಜರ್ಸ್: ಡೂಮ್ಸ್ಡೇ’ ಈ ಸಾಲಿನಲ್ಲಿವೆ.ಇದನ್ನೂ ಓದಿ: ‘ರಾಮಾಯಣ’ ಗಲ್ಲಾಪೆಟ್ಟಿಗೆಯಲ್ಲಿ ಝಣಝಣ ಕಾಂಚಾಣ – ವಿಶ್ವಾದ್ಯಂತ 1,704 ಕೋಟಿ ರೂ. ಕಲೆಕ್ಷನ್


