ಗಾಂಧಿನಗರ: ಇನ್ಮುಂದೆ ಗುಜರಾತ್ (Gujarat)ರಸ್ತೆಗಳಲ್ಲಿ ಓಡಾಡುವ ಖಾಸಗಿ ವಾಹನಗಳ ಮೇಲೆ ಜಾತಿ ಹೆಸರು ಅಥವಾ ಚಿಹ್ನೆಗಳನ್ನು ಹಾಕುವಂತಿಲ್ಲ. ಬೈಕ್, ಆಟೋ, ಕಾರು, ಬಸ್ ಮತ್ತು ಟ್ರಕ್ ಹೀಗೆ ಯಾವುದೇ ಖಾಸಗಿ ವಾಹನಗಳ ಮೇಲೆ ಜಾತಿ ಸೂಚಿಸುವ ಪದ, ಬರಹ ಅಥವಾ ಸ್ಟಿಕ್ಕರ್ಗಳನ್ನು ಅಂಟಿಸುವುದನ್ನು ಗುಜರಾತ್ ಸರ್ಕಾರ ಸಂಪೂರ್ಣವಾಗಿ ಬ್ಯಾನ್ ಮಾಡಿದೆ.
ಈ ಹೊಸ ರೂಲ್ಸ್ ಜಾರಿಗೆ ತರಲು ಸರ್ಕಾರವು ‘ಗುಜರಾತ್ ಮೋಟಾರು ವಾಹನ ನಿಯಮಗಳು 1989’ಕ್ಕೆ ತಿದ್ದುಪಡಿ ತಂದಿದ್ದು, ಅಧಿಕೃತ ನೋಟಿಫಿಕೇಶನ್ ಹೊರಡಿಸಿದೆ. ಪಟೇಲ್, ಕ್ಷತ್ರಿಯ ಸೇರಿದಂತೆ ಯಾವುದೇ ಜಾತಿಯನ್ನು ಗುರುತಿಸುವ ಸ್ಟಿಕ್ಕರ್, ಚಿತ್ರ ಅಥವಾ ಸಂಕೇತಗಳನ್ನು ವಾಹನಗಳ ಗಾಜು, ಬಾಗಿಲ ಮೇಲೆ ಹಾಕುವಂತಿಲ್ಲ. ಒಂದು ವೇಳೆ ಸರ್ಕಾರವೇ ವಿಶೇಷ ಆದೇಶದ ಮೂಲಕ ಅನುಮತಿ ನೀಡಿದರೆ ಮಾತ್ರ ಇದಕ್ಕೆ ವಿನಾಯಿತಿ ಇರಲಿದೆ.ಇದನ್ನೂ ಓದಿ: ಭಾರತ ಈಗ ಏಷ್ಯಾದ 3ನೇ ಶಕ್ತಿಶಾಲಿ ರಾಷ್ಟ್ರ – ಪ್ರಧಾನಿ ಮೋದಿ 2ನೇ ಪ್ರಭಾವಿ ನಾಯಕ
ವಾಹನಗಳ ಮೇಲಿನ ಜಾತಿ ಪ್ರದರ್ಶನಕ್ಕೆ ಬ್ರೇಕ್ ಹಾಕಲು ಸರ್ಕಾರ ಈ ಹಿಂದೆಯೇ ಪ್ಲ್ಯಾನ್ ಮಾಡಿತ್ತು. ಕಳೆದ ಜೂನ್ 11ರಂದು ಕರಡು ನಿಯಮವನ್ನು ಪ್ರಕಟಿಸಿ, ಸಾರ್ವಜನಿಕರಿಂದ ಆಕ್ಷೇಪಣೆ ಅಥವಾ ಸಲಹೆ ನೀಡಲು 30 ದಿನಗಳ ಟೈಮ್ ಕೊಟ್ಟಿತ್ತು. ಆದರೆ ಆ ಸಮಯದಲ್ಲಿ ಯಾರಿಂದಲೂ ಯಾವುದೇ ಆಕ್ಷೇಪಣೆ ಬಾರದ ಕಾರಣ, ಈಗ ಅಂತಿಮವಾಗಿ ಈ ರೂಲ್ಸ್ ಜಾರಿಗೆ ತರಲಾಗಿದೆ.ಇದನ್ನೂ ಓದಿ: ನೀರು ಕುಡಿಯಲು ಯೋಗ್ಯ: ಬಿಸ್ಲೆರಿ ಕಂಪನಿ ಸ್ಪಷ್ಟನೆ
