ಬೆಂಗಳೂರು: ಬಸವಣ್ಣನ ಬಗ್ಗೆ ಅವಹೇಳನಕಾರಿ ಪುಸ್ತಕ ಬರೆದಿರೋ ರವಿ ಹಂಜ್ (Ravi Hanj) ಭಾರತದ ಕಾನೂನು ಮರೆತಿರಬೇಕು. ಅವರಿಗೆ ಕಾನೂನು ನೆನಪು ಮಾಡಿಕೊಡ್ತೀವಿ ಅಂತ ಡಿಸಿಎಂ ಪರಮೇಶ್ವರ್ (G. Parameshwar) ಎಚ್ಚರಿಕೆ ನೀಡಿದ್ದಾರೆ.
ರವಿ ಹಂಜ್ ಪುಸ್ತಕ ಮುಟ್ಟುಗೋಲು ಹಾಕೋ ವಿಚಾರಕ್ಕೆ ಸರ್ಕಾರಕ್ಕೆ ಸವಾಲ್ ಹಾಕಿರೋ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಬಹಳಷ್ಟು ಸಮುದಾಯ, ಬಹಳಷ್ಟು ಚರ್ಚೆ ಆಗಿದೆ. ಇಡೀ ರಾಜ್ಯದಲ್ಲಿ ಚರ್ಚೆ ಆಗಿದೆ. ನಾವು ಕ್ಯಾಬಿನೆಟ್ ನಲ್ಲಿ ಚರ್ಚೆ ಮಾಡಿ ಪುಸ್ತಕ ಮುಟ್ಟುಗೋಲು ಹಾಕಿಕೊಳ್ಳೋ ತೀರ್ಮಾನ ಮಾಡಿದ್ದೇವೆ. ಈಗ ಅದರಲ್ಲಿ ಆಕ್ಷೇಪಾರ್ಹ ಪದ ಇಲ್ಲ ಅಂತ ಅವರು ಹೇಳ್ತಾರೆ. ನಾವು ಪರಿಶೀಲನೆ ಮಾಡಿಯೇ ತೀರ್ಮಾನ ಮಾಡಿರೋದು ಅಂತ ತಿರುಗೇಟು ಕೊಟ್ರು.
ಅವರು ಸರ್ಕಾರಕ್ಕೆ ಸವಾಲ್ ಹಾಕಿದ್ರೆ ಈ ದೇಶದಲ್ಲಿ ಕಾನೂನು ಇದೆ. ಅವರು ಅಮೆರಿಕಾದಲ್ಲಿ NRI ಆಗಿದ್ದಾರೆ. ಅವರು ನಮ್ಮ ದೇಶದ ಕಾನೂನು ಮರೆತಿರಬೇಕು. ಅವರಿಗೆ ನಮ್ಮ ದೇಶದ ಕಾನೂನು ನೆನಪು ಮಾಡೋಣ.ಈ ದೇಶದಲ್ಲಿ ಕಾನೂನುಗಳು ಇವೆ ಅಂತ ಅವರಿಗೆ ರಿಮೈಂಡ್ ಮಾಡ್ತೀವಿ ಅಂತ ಎಚ್ಚರಿಕೆ ಕೊಟ್ರು.
ರವಿ ಹಂಜ್ ಅಮೆರಿಕ ರಾಯಭಾರಿ ಕಚೇರಿ ಸಹಾಯ ಕೋರಿದ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು,ಅವರು ಅಮೆರಿಕಾದ ಪ್ರಜೆ.ಹೀಗಾಗಿ ಅವರು ಅವರ ರಾಯಭಾರಿಗೆ ತೊಂದರೆ ಅಗ್ತಿದೆ ಅಂತ ಹೇಳಲೇಬೇಕು.ರಕ್ಷಣೆ ಮಾಡಿ ಅಂತ ಕೇಳಿಕೊಂಡಿರಬಹುದು ಅಂತ ತಿಳಿಸಿದರು.

