ಬಿಗ್ಬಾಸ್ ಮಾಜಿ ಕಂಟೆಸ್ಟೆಂಟ್ಗಳಾದ ಐಶ್ವರ್ಯ ಸಿಂಧೋಗಿ (Aishwarya Shindogi) ಹಾಗೂ ಶಿಶಿರ್ ಶಾಸ್ತ್ರಿ (Shishir Shastry) ಜೋಡಿಯ ಎಂಗೇಜ್ಮೆಂಟ್ ನೈಟ್ ಬಹಳ ಅದ್ದೂರಿಯಾಗಿ ನಡೆದಿದೆ. ಭಾನುವಾರ ಮುಂಜಾನೆ ಸಾಂಪ್ರದಾಯಿಕವಾಗಿ ಉಂಗುರ ಬದಲಿಸಿಕೊಂಡು ಮದುವೆ ನಿಶ್ಚಯ ಮಾಡಿಕೊಂಡಿತ್ತು ಈ ಜೋಡಿ. ಅದೇ ದಿನ ರಾತ್ರಿ ವೆಸ್ಟರ್ನ್ ಶೈಲಿಯಲ್ಲಿ ಕೇಕ್ ಕತ್ತರಿಸಿ ಮ್ಯೂಸಿಕಲ್ ನೈಟ್ ಔತಣಕೂಟ ಜರುಗಿದೆ. ಎಂಗೇಜ್ ಆಗಿರುವ ನಯಾ ಜೋಡಿಗೆ ಕಿರುತೆರೆ ಗಣ್ಯರು, ಸಿನಿಮಾ ಕಲಾವಿದರು ಶುಭ ಹಾರೈಸಿದ್ರು.
ಒಂದಿಡೀ ದಿನ `ಐಶಿರ್’ ಎಂಗೇಜ್ಮೆಂಟ್ ಕಾರ್ಯಕ್ರಮ ನಡೆದಿದೆ. ಬೆಳಗ್ಗೆ ಶಿವನ ಥೀಮ್ನಲ್ಲಿ ಶಾಸ್ತ್ರೋಕ್ತ ಪದ್ಧತಿಯಲ್ಲಿ ನಯಾ ಜೋಡಿ ಉಂಗುರ ಬದಲಿಸಿಕೊಂಡರು. ರಾತ್ರಿ ಪಾರ್ಟಿಯಲ್ಲಿ ವೆಸ್ಟರ್ನ್ ಉಡುಗೆ ಜೊತೆ ವೆಸ್ಟರ್ನ್ ಶೈಲಿಯಲ್ಲೇ ಡೆಕೋರೇಷನ್ ಮಾಡಲಾಗಿತ್ತು. ಬಂಗಾರದ ಬಣ್ಣ ಹಾಗೂ ಬಿಳಿ ಕಪ್ಪು ಹೂಗಳ ಥೀಮ್ ಒಳಗೊಂಡಿತ್ತು. ದೀಪದ ಬೆಳಕಲ್ಲಿ, ಸಂಗೀತದ ಸುನಾದದ ಮಧ್ಯೆ ಕೇಕ್ ಕತ್ತರಿಸಿದ ಐಶಿರ್ ಜೋಡಿ ತಮ್ಮ ಖುಷಿಯನ್ನ ಎಲ್ಲರ ಜೊತೆ ಹಂಚಿಕೊಂಡರು. ಇದನ್ನೂ ಓದಿ: ʻಐಶಿರ್ʼ ನಿಶ್ಚಿತಾರ್ಥದಲ್ಲಿ ಎಲ್ಲೆಲ್ಲೂ ಶಿವನ ಥೀಮ್ – ವಿಶೇಷ ವಿನ್ಯಾಸದಲ್ಲಿ ಮಿಂಚಿದ ಜೋಡಿ
ಕಿರುತೆರೆ ಕಲಾವಿದರಾದ ರಜನಿ, ವಾಣಿಶ್ರೀ , ನಟಿ ಅನುಪಮಾ, ನೇಹ ಗೌಡ, ಇಶಿತಾ, ಪ್ರೇಮ್ ದಂಪತಿ, ಗಣೇಶ್ ಸಹೋದರ ಮಹೇಶ್ ಹಾಗೂ ಗಂಧದಗುಡಿ ಧಾರಾವಾಹಿ ಟೀಮ್ ಸದಸ್ಯರೆಲ್ಲ ಉಪಸ್ಥಿತರಿದ್ದರು. ಸ್ನೇಹಿತರ, ಕುಟುಂಬಸ್ಥರು ಹಾಗೂ ಸಹ ಕಲಾವಿದರ ಜೊತೆ ಐಶ್ವರ್ಯ ಹಾಗೂ ಶಿಶಿರ್ ಅದ್ದೂರಿ ಎಂಗೇಜ್ಮೆಂಟ್ ಪಾರ್ಟಿ ನಡೆದಿದೆ.
ಐಶ್ವರ್ಯಗೆ ತಂದೆ-ತಾಯಿ ಇಲ್ಲದ ಕಾರಣ ಅವರ ಸ್ಥಾನದಲ್ಲಿ ನಿಂತು ಡಾಲಿ ರಾಜೇಶ್ ದಂಪತಿ ಶಾಸ್ತ್ರ ಪೂರೈಸಿದ್ದಾರೆ. ಇನ್ನು ಐಶ್ವರ್ಯ ತಂದೆ-ತಾಯಿಯ ಫೋಟೋ ಕಾರ್ಯಕ್ರಮದಲ್ಲಿ ಕಂಡುಬಂದಿದ್ದು, ಐಶ್ವರ್ಯ ಹೆತ್ತವರ ನೆನಪಲ್ಲೇ ಜೀವನ ಮುನ್ನಡೆಸುತ್ತಿರೋದರ ಸಾಕ್ಷಿಯಾಗಿ ಕಂಡುಬಂತು. ಇದನ್ನೂ ಓದಿ: ಶಿಶಿರ್ – ಐಶ್ವರ್ಯ ಮದುವೆ ಡೇಟ್ ಫಿಕ್ಸ್
