ಕಳೆದ ಎರಡು ವಾರಗಳ ಹಿಂದೆ ಬಿಗ್ಬಾಸ್ಗೆ ರೀ ಎಂಟ್ರಿ ಕೊಟ್ಟಿದ್ದ ಸ್ಪರ್ಧಿ ಮಾಡರ್ನ್ ಮಹಾಕವಿ ಮಂಜ ಈ ವಾರ ಬಿಗ್ಬಾಸ್ ಸ್ಪರ್ಧೆಯಿಂದ ನಿರ್ಗಮಿಸಿದ್ದಾರೆ. ಅತಿಥಿಯಾಗಿ ರೀ ಎಂಟ್ರಿ ಕೊಟ್ಟು ಅಬ್ಬರಿಸುವ ಸೂಚನೆ ಕೊಟ್ಟಿದ್ದ ಮಂಜ ಒಂದು ಒಳ್ಳೆಯ ಜರ್ನಿಯನ್ನು ತಮ್ಮದಾಗಿಸಿಕೊಂಡು ಇದೀಗ ಮನೆಯಿಂದ ಹೊರಬಂದಿದ್ದಾರೆ.
ಬಿಗ್ಬಾಸ್ ಮೂಲ ನಿಯಮ ಉಲ್ಲಂಘಿಸಿದ್ದ ಕಾರಣಕ್ಕೆ ಕಂಟೆಸ್ಟೆಂಟ್ ಮಂಜನನ್ನ ಬಿಗ್ಬಾಸ್ ಮನೆಯಿಂದ ಹೊರಕ್ಕೆ ಕಳುಹಿಸಿದ್ದರು. ಅದಾದ ಬಳಿಕ ಒಂದು ತಿಂಗಳಾದ್ಮೇಲೆ ಮತ್ತೆ ಮಂಜ ವಾಪಸ್ ಕಾರ್ಯಕ್ರಮಕ್ಕೆ ಬಂದಿದ್ದರು. ಆದರೆ ಮಂಜ ಗೆಸ್ಟ್ ಅನ್ನೋದು ಹೊರ ಜಗತ್ತಿಗೆ ಮಾತ್ರ ಗೊತ್ತಿತ್ತು. ಅವರು ಅತಿಥಿಯಾಗಿ ದೊಡ್ಮನೆಗೆ ಎಂಟ್ರಿ ಕೊಟ್ಟಿದ್ದಾರೆ ಅನ್ನೋದು ಸ್ಪರ್ಧಿಗಳಿಗೆ ಗೊತ್ತಿರಲಿಲ್ಲ. ಇದೀಗ ಮಂಜು ಕಂಟೆಸ್ಟೆಂಟ್ ಅಲ್ಲ, ಅತಿಥಿ ಅನ್ನೋದು ತಿಳಿದುಬಂದಿದೆ.
ಯುವರಾಣಿ ಗಾನವಿಯವರ ಸೇನಾಧಿಪತಿಯಾಗಿದ್ದ ಮಂಜ ಅವರನ್ನು ಸ್ವತಃ ಗಾನವಿ ಅವರೇ ನಾಮಿನೇಟ್ ಮಾಡಿದ್ದರು. ಆದರೆ ಮಂಜ ಸ್ಫರ್ಧಿಯಲ್ಲ… ಅತಿಥಿ ಅನ್ನೋದು ತಿಳಿದು ಮನೆಯವರಿಗೆ ಒಂದೆಡೆ ಶಾಕ್ ಆದ್ರೆ, ಇನ್ನೊಂದು ಕಡೆ ಅವರು ಬದಲಾಗಿದ್ದ ರೀತಿ ನೋಡಿ ಸಂತೋಷವಾಗಿದೆ.
ಮಂಜಗೆ ಕೇವಲ ಎರಡು ವಾರ ಕಾಲ ತಮ್ಮ ತಪ್ಪು ತಿದ್ದಿಕೊಳ್ಳಲು, ಅಸಲಿ ಟ್ಯಾಲೆಂಟ್ ತೋರಿಸಲು ಹಾಗೂ ಜೀವನಪರ್ಯಂತ ಬಿಗ್ಬಾಸ್ನಿಂದ ಹೊರಕ್ಕೆ ಹಾಕಿರೋ ಸ್ಪರ್ಧಿ ಎಂಬ ಹಣೆಪಟ್ಟಿಯಿಂದ ದೂರ ಮಾಡಲು ಬಿಗ್ಬಾಸ್ ಅವಕಾಶ ಕೊಟ್ಟಿದ್ದರು. ಹೀಗಾಗಿ, ಇದೀಗ ರೀ ಎಂಟ್ರಿಯ ಸಮಯ ಮುಗಿಯುತ್ತಿದ್ದಂತೆ ಮಂಜ ಬಿಗ್ಬಾಸ್ ಕಾರ್ಯಕ್ರಮ ಬಿಟ್ಟು ಹೊರ ಬಂದಿದ್ದಾರೆ.
ಅಗ್ನಿಪರೀಕ್ಷೆಯಿಂದ ಬಿಗ್ಬಾಸ್ ಸ್ಪರ್ಧೆಗೆ ಅವಕಾಶ ಪಡೆದಿದ್ದ ಮಂಜ ಉಳಿದ ಕಂಟೆಸ್ಟೆಂಟ್ ಪಾಲಿನ ಟಫ್ ಕಾಂಪಿಟೇಟರ್ ಎಂದೇ ಪರಿಗಣಿಸಲ್ಪಟ್ಟಿದ್ದರು. ಆದರೆ, ನಾಲಿಗೆಗೆ ಲಗಾಮು ಹಾಕದೆ ಮನೆಯಿಂದ ಕಿಕ್ಔಟ್ ಆಗಿದ್ದರು. ಆದರೂ ಬಿಗ್ಬಾಸ್ ಮತ್ತೊಂದು ಅವಕಾಶವನ್ನು ಮನೆಗೆ ಪ್ರವೇಶಿಸಲು ನೀಡಿದ್ದರು. ಇದೀಗ ಕ್ಲೀನ್ಚಿಟ್ ಪಡೆದುಕೊಂಡು ಮನೆಯಿಂದ ವಾಪಸ್ಸಾಗಿರುವ ಖುಷಿಯಲ್ಲಿದ್ದಾರೆ ಮಾಡರ್ನ್ ಮಹಾಕವಿ ಮಂಜ.
