– ಬಿಹಾರದ ವೈಶಾಲಿ ಜಿಲ್ಲೆಯಲ್ಲಿರುವ ಆರು ಪಥದ ರಸ್ತೆ
ಪಾಟ್ನಾ: ವೈಶಾಲಿ ಜಿಲ್ಲೆಯ ಬಿದುಪುರ ಬ್ಲಾಕ್ ಅನ್ನು ಪಾಟ್ನಾದ ಹೊರವಲಯದಲ್ಲಿರುವ ಕಚ್ಚಿ ದರ್ಗಾಕ್ಕೆ ಸಂಪರ್ಕಿಸುವ ಬಿಹಾರದ ಗಂಗಾ ನದಿಗೆ ಅಡ್ಡಲಾಗಿ ನಿರ್ಮಿಸಲಾದ 9.76 ಕಿ.ಮೀ ಉದ್ದದ ಆರು ಪಥಗಳ ಸೇತುವೆಯನ್ನು ಪ್ರಧಾನಿ ನರೇಂದ್ರ ಮೋದಿ (Narendra Modi) ಶನಿವಾರ ಉದ್ಘಾಟಿಸಿದರು.
ಈ ಸೇತುವೆಗೆ (Nitish Setu) ಬಿಹಾರದ ಮಾಜಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಹೆಸರನ್ನು ಇಡಲಾಗಿದೆ. ಅವರ ಅಧಿಕಾರಾವಧಿಯಲ್ಲಿ ಈ ಯೋಜನೆಯನ್ನು ರೂಪಿಸಿ ಪೂರ್ಣಗೊಳಿಸುವ ಹಂತಕ್ಕೆ ತರಲಾಗಿದೆ. ಇದನ್ನೂ ಓದಿ: ಸಿಂಧೂ ಜಲ ಒಪ್ಪಂದದ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ: ಭಾರತ ಸ್ಪಷ್ಟನೆ
ಸೇತುವೆ ಉದ್ಘಾಟನೆಗಾಗಿ ಪಾಟ್ನಾಕ್ಕೆ ಬಂದಿಳಿದ ಪ್ರಧಾನಿ ಮೋದಿ ಅವರನ್ನು ನಿತೀಶ್ ಕುಮಾರ್ ಸ್ವಾಗತಿಸಿದರು. ಇಬ್ಬರೂ ನಾಯಕರು ಆತ್ಮೀಯವಾಗಿ ಅಪ್ಪುಗೆ ವಿನಿಮಯ ಮಾಡಿಕೊಂಡರು. ಬಿಹಾರದಲ್ಲಿ ಸರ್ಕಾರವನ್ನು ಮುನ್ನಡೆಸುವ ಮೊದಲ ಬಿಜೆಪಿ ನಾಯಕ ಮುಖ್ಯಮಂತ್ರಿ ಸಾಮ್ರಾಟ್ ಚೌಧರಿ ನೇತೃತ್ವದ ಸಚಿವ ಸಂಪುಟ ವಿಸ್ತರಣೆಯ ಸಮಾರಂಭದಲ್ಲಿ ಮೇ ತಿಂಗಳಿನಲ್ಲಿ ಮೋದಿ ಭಾಗವಹಿಸಿದ್ದರು. ಅದಾದ ಬಳಿಕ ಪ್ರಧಾನಿ ಮೋದಿ ಅವರು ಪೂರ್ವ ರಾಜ್ಯಕ್ಕೆ ನೀಡುತ್ತಿರುವ ಮೊದಲ ಭೇಟಿ ಇದಾಗಿದೆ.
ಬಿಹಾರದ ವೈಶಾಲಿ ಜಿಲ್ಲೆಯಲ್ಲಿರುವ ಆರು ಪಥದ ರಸ್ತೆ ನಿರ್ಮಿಸಲಾಗಿದೆ. ಗಂಗಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಸೇತುವೆ ಇದು. ಸುಮಾರು 4,280 ಕೋಟಿ ರೂಪಾಯಿ ವೆಚ್ಚದಲ್ಲಿ ಸೇತುವೆ ನಿರ್ಮಾಣವಾಗಿದೆ. 9.76 ಕಿ.ಮೀ ಉದ್ದದ ಸೇತುವೆ ವೈಶಾಲಿ ಜಿಲ್ಲೆಯ ಬಿದೂಪುರವನ್ನು ಪಾಟ್ನಾ ಹೊರವಲಯದ ಕಚ್ಚಿ ದರ್ಗಾದೊಂದಿಗೆ ಸಂಪರ್ಕಿಸುತ್ತದೆ. ಸೇತುವೆ ಉದ್ಘಾಟನೆಯಿಂದ ಉತ್ತರ ಮತ್ತು ದಕ್ಷಿಣ ಬಿಹಾರದ ನಡುವಿನ ಸಂಪರ್ಕ ಸುಧಾರಣೆಯಾಗಿದೆ. ಇದನ್ನೂ ಓದಿ: ವಿದೇಶಿ ಪ್ರಜೆಯಾಗಿದ್ದರೂ ಮಾರುತಿ ಎಂಡಿ ಆಗಿದ್ದು ಹೇಗೆ – ಸೋನಿಯಾ ಗಾಂಧಿಗೆ ನಿಶಿಕಾಂತ್ ದುಬೆ ಪ್ರಶ್ನೆ
ಮಹಾತ್ಮ ಗಾಂಧಿ ಸೇತು ಹಾಗೂ ಜೆ.ಪಿ. ಸೇತುವೆಗಳ ಮೇಲಿನ ವಾಹನ ದಟ್ಟಣೆ ಕಡಿಮೆಯಾಗುವ ನಿರೀಕ್ಷೆಯಿದೆ. ಕೃಷಿ ಉತ್ಪನ್ನಗಳು ಮತ್ತು ಕೈಗಾರಿಕಾ ಸರಕುಗಳ ಸಾಗಣೆಗೆ ಅನುಕೂಲವಾಗಲಿದೆ. ಬಿಹಾರದಲ್ಲಿ ಒಟ್ಟು 34,470 ಕೋಟಿ ರೂಪಾಯಿ ಮೌಲ್ಯದ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಪ್ರಧಾನಿ ಚಾಲನೆ ಹಾಗೂ ಶಂಕುಸ್ಥಾಪನೆ ನೆರವೇರಿಸಿದ್ದಾರೆ. 100 ವಿದ್ಯುತ್ ಚಾಲಿತ ಬಸ್ಗಳ ಸೇವೆಗೂ ಚಾಲನೆ ನೀಡಿದ್ದಾರೆ.
