ರಣಬೀರ್ ಕಪೂರ್ ಮತ್ತು ರಾಕಿಂಗ್ ಸ್ಟಾರ್ ಯಶ್ (Yash) ಅಭಿನಯದ ಸಿನಿಮಾ ʻರಾಮಾಯಣ: ರೈಸ್ ಆಫ್ ಎ ಲೆಜೆಂಡ್ʼ ಬಾಕ್ಸ್ ಆಫೀಸ್ನಲ್ಲಿ ದಾಖಲೆಯ ಓಟ (Ramayana) ಮುಂದುವರಿಸಿದೆ.
ಬಿಡುಗಡೆಯಾಗಿ ( Box Office Collection) ಮೂರನೇ ವಾರಕ್ಕೆ ಕಾಲಿಟ್ಟಿರುವ ಈ ಸಿನಿಮಾ, ಈಗ ವಿಶ್ವಾದ್ಯಂತ ಬರೋಬ್ಬರಿ 1,600 ಕೋಟಿ ರೂ. ಗಳಿಕೆಯ ಹೊಸ್ತಿಲಲ್ಲಿದೆ.
16ನೇ ದಿನವಾದ ಇಂದು (ಶುಕ್ರವಾರ) ಸಂಜೆ 4 ಗಂಟೆಯವರೆಗೆ ಭಾರತದಲ್ಲಿ ಚಿತ್ರವು 4.99 ಕೋಟಿ ರೂ. ನಿವ್ವಳ ಗಳಿಕೆ ಕಂಡಿದೆ. ಇದರಲ್ಲಿ ಹಿಂದಿ ಅವತರಣಿಕೆಯಿಂದ 4.09 ಕೋಟಿ, ಕನ್ನಡದಿಂದ 39 ಲಕ್ಷ, ತಮಿಳಿನಿಂದ 35 ಲಕ್ಷ ಹಾಗೂ ತೆಲುಗಿನಿಂದ 16 ಲಕ್ಷ ರೂ. ಸಂಗ್ರಹವಾಗಿದೆ. ಸಂಜೆ ಮತ್ತು ರಾತ್ರಿಯ ಶೋಗಳ ಕಲೆಕ್ಷನ್ ಸೇರಿದರೆ ಈ ಮೊತ್ತ ಇನ್ನಷ್ಟು ಹೆಚ್ಚಾಗಲಿದೆ.ಇದನ್ನೂ ಓದಿ: ರವಿಚಂದ್ರನ್ ಪುತ್ರ ಮನೋರಂಜನ್ ನಟನೆಯ ಕೌಂತೇಯ ಚಿತ್ರದ ಹಾಡು ರಿಲೀಸ್
ಇದುವರೆಗಿನ ಒಟ್ಟು ಲೆಕ್ಕಾಚಾರ ನೋಡುವುದಾದರೆ, ಭಾರತದಲ್ಲಿ ʻರಾಮಾಯಣʼ ಚಿತ್ರದ ಒಟ್ಟು ನಿವ್ವಳ ಗಳಿಕೆ 868.74 ಕೋಟಿ ರೂ.ಗೆ ತಲುಪಿದೆ. ಇನ್ನು ವಿದೇಶಿ ಮಾರುಕಟ್ಟೆಗಳಿಂದ 515 ಕೋಟಿ ರೂ. ಹರಿದುಬಂದಿದ್ದು, ವಿಶ್ವಾದ್ಯಂತ ಸಿನಿಮಾದ ಒಟ್ಟು ಕಲೆಕ್ಷನ್ 1,547.15 ಕೋಟಿ ರೂ. ದಾಟಿದೆ. ಈ ಮೂಲಕ 1,600 ಕೋಟಿ ಕ್ಲಬ್ ಸೇರಲು ಸಿನಿಮಾ ಇನ್ನೊಂದೇ ಹೆಜ್ಜೆ ಬಾಕಿ ಇದೆ. ಇನ್ನು ಈ ಚಿತ್ರದ ಎರಡನೇ ಭಾಗವು 2028ರ ದೀಪಾವಳಿಗೆ ಬಿಡುಗಡೆಯಾಗಲಿದೆ.ಇದನ್ನೂ ಓದಿ: ಪನೋರಮಾ ವಿಭಾಗಕ್ಕೆ ಕನ್ನಡದ ಕಿರುಚಿತ್ರ ‘ಉಳಿದಿದ್ದು ಸಂಪಿಗೆ ಮಾತ್ರ’ ಆಯ್ಕೆ
