ಮೈಸೂರು: ಎಥೆನಾಲ್ (Ethenol) ಉತ್ಪಾದನೆ ಬಿಜೆಪಿ ಸರ್ಕಾರ ಬಂದಾಗ ಆರಂಭವಾಗಿಲ್ಲ, ಮೈಸೂರು ಮಹರಾಜರೂ ಎಥೆನಾಲ್ ಉತ್ಪಾದನೆ ಆರಂಭಿಸಿದ್ದರು ಎಂದು ಮಾಜಿ ಕೇಂದ್ರ ಸಚಿವ ಮುರುಗೇಶ್ ನಿರಾಣಿ (Murugesh Nirani) ಹೇಳಿದ್ದಾರೆ.
ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಸಚಿವ ರಿಜ್ವಾನ್ ಅರ್ಷದ್ (Rizwan Arshad) ಎಥೆನಾಲ್ ಬಗ್ಗೆ ಸುಳ್ಳು ಹಬ್ಬಿಸುತ್ತಿದ್ದಾರೆ. ಎಥೆನಾಲ್ ಉತ್ಪಾದನೆ ಬಿಜೆಪಿ ಸರ್ಕಾರ ಬಂದ ಮೇಲೆ ಆರಂಭವಾಗಿಲ್ಲ. ಮೈಸೂರು ಮಹಾರಾಜರು ಎಥೆನಾಲ್ ಉತ್ಪಾದನೆ ಆರಂಭಿಸಿದ್ದರು. 500 ಎಥೆನಾಲ್ ಉತ್ಪಾದನಾ ಕೇಂದ್ರಗಳಿವೆ. ಪ್ರತಿ ವರ್ಷ 1,200 ಕೋಟಿ ಲೀಟರ್ ಪೆಟ್ರೋಲ್ನಲ್ಲಿ ಮಿಕ್ಸ್ ಮಾಡುತ್ತಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಭಾರತದಲ್ಲಿ E100 ಎಥೆನಾಲ್ ಯುಗ ಆರಂಭ – ಏನಿದು ಹೊಸ ರೂಲ್ಸ್, ಕಾರು ಮಾಲೀಕರು ತಿಳಿಯಬೇಕಾದ್ದು ಏನು?
ಡಿಸೇಲ್ ನಲ್ಲಿ ಎಥೆನಾಲ್ ಮಿಕ್ಸ್ ಮಾಡುತ್ತಿಲ್ಲ. ಬರೀ ಪೆಟ್ರೋಲ್ ನಲ್ಲಿ ಮಾತ್ರ ಮಿಕ್ಸ್ ಮಾಡುತ್ತಿದ್ದೇವೆ. ಪೆಟ್ರೋಲಿಯಂ ಕಂಪನಿಗಳು ಹೆಚ್ಚಿನ ಪ್ರಮಾಣದಲ್ಲಿ ಎಥೆನಾಲ್ ಮಿಕ್ಸ್ ಮಾಡುವ ಅಗತ್ಯವಿಲ್ಲ. ಯಾವ ಪೆಟ್ರೋಲಿಯಂ ಟರ್ಮಿನಲ್ನಿಂದ ಸಚಿವ ರಿಜ್ವಾನ್ ಸ್ಯಾಂಪಲ್ ತೆಗೆದಿದ್ದಾರೆ? ಸ್ಯಾಂಪಲ್ ತೆಗೆಯುವಾಗ ಯಾವ ಯಾವ ಅಧಿಕಾರಿಗಳು ಇದ್ದರು ಎಂಬುದನ್ನು ಹೇಳಲಿ. ಸ್ಯಾಂಪಲ್ ಟೆಸ್ಟ್ಗೆ ಸಚಿವ ರಿಜ್ವಾನ್ ಒಂದು ಸಮಿತಿ ರಚಿಸಲಿ. ಅವರು ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಎಥೆನಾಲ್ ಮಿಶ್ರಣದಿಂದ ವಾಹನಗಳ 4 ರಿಂದ 5 % ಮೈಲೆಜ್ ಕಡಮೆ ಆಗುತ್ತದೆ ಎಂಬುದನ್ನು ಒಪ್ಪಿಕೊಳ್ಳುತ್ತೇವೆ. ಎಥೆನಾಲ್ ಮಿಶ್ರಣದಿಂದ ಪೆಟ್ರೋಲ್ ಬಂಕ್ಗೆ ಅಥವಾ ಪೆಟ್ರೋಲಿಯಂ ಟರ್ಮಿನಲ್ಗಳಿಗೆ ಯಾವುದೇ ಹೆಚ್ಚಿನ ಲಾಭವಿಲ್ಲ ಎಂದು ಅವರು ಸ್ಪಷ್ಟನೆ ನೀಡಿದ್ದಾರೆ.
ಬಿಜೆಪಿ ರಾಜ್ಯಧ್ಯಕ್ಷರ ಬದಲಾವಣೆ ವಿಚಾರವಾಗಿ, ರಾಜ್ಯಾಧ್ಯಕ್ಷರ ಹುದ್ದೆಗೆ ನಾನು ಆಕಾಂಕ್ಷಿ ಅಲ್ಲ. ಹೈಕಮಾಂಡ್ ಕೊಟ್ಟರೆ ಹುದ್ದೆ ನಿರ್ವಹಿಸುತ್ತೇನೆ. ವಿಜಯೇಂದ್ರ ಒಳ್ಳೆ ಕೆಲಸ ಮಾಡುತ್ತಿದ್ದಾರೆ. ಹೈಕಮಾಂಡ್ ವಿಜಯೇಂದ್ರ ಅವರನ್ನೇ ಮುಂದುವರಿಸಬಹುದು. ಇಲ್ಲ ಬದಲಾವಣೆ ಮಾಡಬಹುದು ಎಂದಿದ್ದಾರೆ. ಇದನ್ನೂ ಓದಿ: 169 ರೂ.ಗೆ ಸಿಗುತ್ತೆ ಪ್ಯೂರ್ ಪೆಟ್ರೋಲ್ – ದಿನಕ್ಕೆ 400 ಲೀ. ಎಥೆನಾಲ್ ಮಿಶ್ರಣ ಇಲ್ಲದ ಪೆಟ್ರೋಲ್ ಸೇಲ್
