ಬೆಂಗಳೂರು: ಗಾಂಜಾ ಮತ್ತಲ್ಲಿ (Crime)ಗುಂಪೊಂದು ವ್ಯಕ್ತಿಯ ಕೈಕಾಲು ಕಟ್ಟಿ ರಸ್ತೆಯಲ್ಲಿ ಬೆಂಕಿ ಹಚ್ಚಿರುವ ಘಟನೆ ಬೆಂಗಳೂರಿನ (Bengaluru) ಗಿರಿನಗರದ ವೀರಭದ್ರ ಸಿಗ್ನಲ್ ಬಳಿ ನಡೆದಿದೆ.
ಪಾದರಾಯನಪುರದ ನಿವಾಸಿ ಮಹಮ್ಮದ್ ಗಾಯಾಳು ಎಂದು ಗುರುತಿಸಲಾಗಿದೆ. ಸುಟ್ಟ ಗಾಯಗಳಿಂದ ನರಳುತ್ತಿದ್ದ ವ್ಯಕ್ತಿಯನ್ನ ಪೊಲೀಸರು ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ.
ಯುವಕರ ಗುಂಪು ಪೆಟ್ರೋಲ್ ಸುರಿದು ಕೈಕಾಲು ಕಟ್ಟಿಹಾಕಿ ಬೆಂಕಿ ಹಚ್ಚಿರುವ ಶಂಕೆ ವ್ಯಕ್ತವಾಗಿದೆ. ಬೆಳಗ್ಗೆ ಆರುವರೆ ಸುಮಾರಿಗೆ ಈ ಘಟನೆ ನಡೆದಿದೆ. ದುಷ್ಕರ್ಮಿಗಳು ವ್ಯಕ್ತಿಯ ಕೈಕಾಲು ಕಟ್ಟಿ ಬೆಂಕಿ ಹಚ್ಚಿದ್ದಾರೆ. ವ್ಯಕ್ತಿ ಬಿದ್ದಿದ್ದ ಜಾಗದ ಪಕ್ಕದಲ್ಲಿ ನಿರ್ಜನ ಪ್ರದೇಶವಿದ್ದು, ಅಲ್ಲಿಂದ ಕೆಳಗೆ ತಳ್ಳಿದ್ದಾರೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.
ಘಟನೆ ಕುರಿತು ಮಾತನಾಡಿರುವ ದಕ್ಷಿಣ ವಿಭಾಗ ಡಿಸಿಪಿ ಡಾ, ಕೆ ವಂಶಿಕೃಷ್ಣ, ಇಂದು ಬೆಳಗ್ಗೆ ಆರುವರೆ ಸುಮಾರಿಗೆ ಘಟನೆ ಆಗಿದೆ. ವಿಚಾರ ತಿಳಿದು ಸ್ಥಳಕ್ಕೆ ಬಂದು ನೋಡುವಷ್ಟರಲ್ಲಿ ವ್ಯಕ್ತಿ ರಸ್ತೆಯ ಪಕ್ಕದಲ್ಲಿ ಬಿದ್ದಿದ್ದ. ತಕ್ಷಣ ಆತನನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಶೇಕಡ 70% ಸುಟ್ಟಿರುವ ಬಗ್ಗೆ ಮಾಹಿತಿ ಇದೆ.ಇದನ್ನೂ ಓದಿ: ಚಳಿಯಲ್ಲೂ ಮುಂದುವರಿದ ಆಶಾ ಕಾರ್ಯಕರ್ತೆಯರ ಹೋರಾಟ; ಪುಟ್ಟ ಮಕ್ಕಳೊಂದಿಗೆ ಅಹೋರಾತ್ರಿ ಧರಣಿ
ಗುಡ್ಡದ ಮೇಲೆ ಕೆಲವರು ಗಾಂಜಾ ಸೇವಿಸಿರೋದು ಪತ್ತೆಯಾಗಿದೆ. ಅಲ್ಲಿಂದಲೇ ಈ ವ್ಯಕ್ತಿಯ ಕೈಕಾಲು ಕಟ್ಟಿ ಪೆಟ್ರೋಲ್ ಹಾಕಿರೋ ಸಾಧ್ಯತೆ ಇದೆ. ಆರೋಪಿಗಳ ಪತ್ತೆಗೆ ಟೀ ಮಾಡಿದ್ದೇವೆ. ತನಿಖೆ ಮುಂದುವರಿದಿದೆ ಎಂದು ಹೇಳಿದ್ದಾರೆ.ಇದನ್ನೂ ಓದಿ: ಭದ್ರತಾ ಪಡೆಗಳ ಎನ್ಕೌಂಟ್ಗೆ ಲಷ್ಕರ್ ಉಗ್ರ ಲತೀಫ್ ಭಟ್ ಬಲಿ
