ಕೊಪ್ಪಳ: ಬಿಜೆಪಿಯವರಿಗೆ (BJP) ವೋಟು ಹಾಕಿದ್ರೆ 5 ಗ್ಯಾರಂಟಿ ಬಂದ್ ಆಗುತ್ತೆ ಅಂತ ಸಚಿವ ಶಿವರಾಜ್ ತಂಗಡಗಿ (Shivaraj Tangadagi) ಬಹಿರಂಗ ಸಭೆಯಲ್ಲೇ ಹೇಳಿಕೆ ನೀಡಿದ್ದಾರೆ.
ಕೊಪ್ಪಳದ (Koppal) ಕಾರಟಗಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಗೃಹಲಕ್ಷ್ಮಿಯರಿಗೆ 2,000 ಬಂದ್, ಅನ್ನಭಾಗ್ಯ ಬಂದ್, ಉಚಿತ ಬಸ್ ಕಾರ್ಯಕ್ರಮ ಸ್ತ್ರೀಶಕ್ತಿ, ಯುವನಿಧಿಯೂ ಬಂದ್ ಆಗಲಿದೆ. 100ಕ್ಕೆ 100ರಷ್ಟು ಬಂದ್ ಆಗಲಿದೆ ಅಂತ ಎಚ್ಚರಿಕೆ ನೀಡಿದ್ದಾರೆ. ಇವರು ಅದಾನಿ, ಅಂಭಾನಿಗೆ ಸಾಲ ಮನ್ನಾ ಮಾಡ್ತಾರೆ. ಸಾಮಾನ್ಯ ಜನರಿಗೆ ಯಾಕೆ ಮಾಡಲ್ಲ. ರೈತರಿಗೆ ಯಾಕೆ ಮಾಡಲ್ಲ, ರೈತರ ಬಗ್ಗೆ ಕಾಳಜಿ ಇದ್ರೆ ಸಾಲ ಮನ್ನಾ ಮಾಡಲಿ. ನಾನು ವೋಟಿಗಾಗಿ ಹೇಳಲ್ಲ, ನಾವು ಹೇಳಿದಂತೆ, ಗ್ಯಾರಂಟಿ ಕೊಟ್ಟಿದ್ದೇವೆ ಎಂದಿದ್ದಾರೆ. ಇದನ್ನೂ ಓದಿ: ಮಂಗಳೂರಿನಿಂದ ಬೆಂಗಳೂರಿಗೆ ಸಂಚರಿಸುವ ವಂದೇ ಭಾರತ್ ಹೈಸ್ಪೀಡ್ ರೈಲು ಸೇವೆಗೆ ಚಾಲನೆ
ಬಿಜೆಪಿಯವರು ಹೆಂಗ್ ಗ್ಯಾರಂಟಿ ಯೋಜನೆ ಕೊಡ್ತಾರೆ ಅಂತಿದ್ದರು ಈಗ ಎಲ್ಲಾ ಯೋಜನೆ ಕೊಟ್ಟಿದ್ದೀವಿ. ಅವರು ಬಸ್ ಕೊಡೋಕೆ ಆಗಲ್ಲ. ಆದರೆ ನಾವು ಬಸ್ ಕೊಟ್ಟಿದ್ದೇವೆ. ನಿಮ್ಮ ಕೈಗೆ ಸ್ಟೇರಿಂಗ್ ಮಾತ್ರ ಕೊಟ್ಟಿಲ್ಲ. ಸಚಿವನಾದ ಮೇಲೆ ಯಾರ ಕೈಗೂ ಸಿಗೋದಿಲ್ಲ ಅಂತಾರೆ. ಆದರೆ ಸಚಿವನಾದ ನಂತರ ವಾರದಲ್ಲಿ 2-3 ದಿನ ಕ್ಷೇತ್ರದಲ್ಲಿ ಇರ್ತೇನೆ ಎಂದು ಹೇಳಿದ್ದಾರೆ.
ಬಿಜೆಪಿಯವರು ಯಾವಾಗ್ಲೂ ಕಾಪಿ ಮಾಡೋದ್ರಲ್ಲೇ ಇರೋದು. ಕೇಂದ್ರ ಸರ್ಕಾರವೂ ಎಲ್ಲ ನಮ್ಮ ಯೋಜನೆಗಳನ್ನ ಕಾಪಿ ಮಾಡ್ತಾ ಇದ್ದಾರೆ. ಅವರಲ್ಲಿ ಯಾವುದೇ ಸ್ವಂತಿಕೆ ಅನ್ನೋದು ಇಲ್ಲ. ಅದಕ್ಕೆ ನಾನು ಹೇಳಿದ್ದು, ಬಿಜೆಪಿಗೆ ವೋಟ್ ಹಾಕಿದ್ರೆ ಗ್ಯಾರಂಟಿ ಬಂದ್ ಮಾಡ್ತಾರೆ ಅಂತ. ನಾವು ಅಭಿವೃದ್ಧಿ ಜೊತೆಗೆ ಗ್ಯಾರಂಟಿ ಕೊಡ್ತಿವಿ ಅಂತ ಹೇಳಿದ್ವಿ. ಗ್ಯಾರಂಟಿಯಿಂದ ಅಭಿವೃದ್ಧಿ ಕಡಿಮೆ ಆಗಿದೆ ಅಂತಾರೆ, ಹಾಗಾದ್ರೆ ಅವರು ಅಧಿಕಾರಕ್ಕೆ ಬಂದ್ರೆ ಗ್ಯಾರಂಟಿ ಮುಂದುವರೆಸುತ್ತೇವೆ ಅಂತ ಹೇಳಲಿ. ತಾಕತ್ ಇದೆಯಾ ಬಿಜೆಪಿಯವರಿಗೆ ಎಂದು ವಾಗ್ದಾಳಿ ನಡೆಸಿದ್ದಾರೆ.ಇದನ್ನೂ ಓದಿ: ನನ್ನ ಜೊತೆ ನೇರ ಚರ್ಚೆಗೆ ಬನ್ನಿ, ಚರ್ಚೆಯ ಬಳಿಕ ಮೋದಿ ರಾಜಕೀಯ ಜೀವನ ಅಂತ್ಯ: ರಾಹುಲ್ ಸವಾಲು
