ಮೈಸೂರು: ತಾಂತ್ರಿಕ ದೋಷದಿಂದ ಪ್ರಧಾನಿ ಮೋದಿ ಬೆಂಗಾವಲು ಹೆಲಿಕಾಪ್ಟರ್ ಮೈಸೂರಿನಲ್ಲೇ ಉಳಿದಿದೆ.
ಇಂಡಿಯನ್ ಏರ್ಫೋರ್ಸ್ಗೆ ಸೇರಿದ ಹೆಲಿಕಾಪ್ಟರ್ ಇದು. ಶುಕ್ರವಾರ ಮಧ್ಯಾಹ್ನ 3 ಗಂಟೆ 20 ನಿಮಿಷಕ್ಕೆ ಪ್ರಧಾನಿ ಮೋದಿ ಲಲಿತಮಹಲ್ ಹೆಲಿಪ್ಯಾಡ್ಗೆ ಆಗಮಿಸಿದ್ದರು. ಪ್ರಧಾನಿ ಮೋದಿ ಬೆಂಗಾವಲಿಗೆ ಎರಡು ಹೆಲಿಕಾಪ್ಟರ್ಗಳು ಬಂದಿದ್ದವು.
ಪ್ರಧಾನಿ ಮೋದಿ ಲ್ಯಾಂಡಿಂಗ್ ನಂತರ 3 ಹೆಲಿಕಾಪ್ಟರ್ ಟೇಕಾಫ್ ಆಗಬೇಕಿತ್ತು. ಈ ವೇಳೆ 2 ಹೆಲಿಕಾಪ್ಟರ್ ಟೇಕಾಫ್ ಆಗಿವೆ. ತಾಂತ್ರಿಕ ದೋಷದಿಂದ ಒಂದು ಹೆಲಿಕಾಪ್ಟರ್ ಮೈಸೂರಿನಲ್ಲೇ ಉಳಿದಿದೆ.
