ನವದೆಹಲಿ: ನರೇಂದ್ರ ಮೋದಿ(Narendra Modi) ಹಾಗೂ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ(Rahul Gandhi) ನಡುವಿನ ವಾಕ್ಸಮರ ತೀವ್ರಗೊಂಡಿದ್ದು, ಮುಕ್ತ ವೇದಿಕೆಯಲ್ಲಿ ನೇರ ಚರ್ಚೆಗೆ ಬರುವಂತೆ ರಾಹುಲ್ ಪ್ರಧಾನಿಯವರಿಗೆ ಬಹಿರಂಗ ಸವಾಲು ಹಾಕಿದ್ದಾರೆ.
ಕಳೆದ 12 ದಿನಗಳಲ್ಲಿ 7ನೇ ಬಾರಿಗೆ ಪ್ರಧಾನಿ ಮೋದಿಗೆ ಸವಾಲು ಹಾಕಿರುವ ರಾಹುಲ್ ಗಾಂಧಿ, “ನನ್ನೊಂದಿಗೆ ನೇರ ಚರ್ಚೆ ನಡೆಸಿದ ಬಳಿಕ ಮೋದಿ ಅವರ ಪ್ರಧಾನಿ ಸ್ಥಾನ ಉಳಿಯುವುದಿಲ್ಲ ಹಾಗೂ ಅವರ ರಾಜಕೀಯ ಜೀವನವೇ ಮುಕ್ತಾಯವಾಗಲಿದೆ” ಎಂದು ಹೇಳಿದ್ದಾರೆ.
ಬಿಜೆಪಿ ನಾಯಕರು ಸಂಸದೀಯ ಚರ್ಚೆಯನ್ನೇ ಸೂಕ್ತ ವೇದಿಕೆ ಎನ್ನುತ್ತಾರೆ. ಆದರೆ, ಸಂಸತ್ತಿನಲ್ಲಿ ರೈತರ ಮಸೂದೆ, ಮತ ಕಳ್ಳತನ, ಎಸ್ಐಆರ್, ಚೀನಾ ವಿಚಾರ ಹಾಗೂ ಎಪ್ಸ್ಟೀನ್ ಸೇರಿದಂತೆ ಹಲವು ವಿಷಯಗಳ ಬಗ್ಗೆ ಮಾತನಾಡಲು ನನಗೆ ಅವಕಾಶ ನೀಡಲಿಲ್ಲ; ನನ್ನ ಮೈಕ್ ಆಫ್ ಮಾಡಲಾಗುತ್ತದೆ. ಆದ್ದರಿಂದ ಮುಕ್ತ ವೇದಿಕೆಯಲ್ಲಿ ಮುಖಾಮುಖಿಯಾಗಿ ಚರ್ಚೆ ನಡೆಸೋಣ ಎಂದು ರಾಹುಲ್ ಗಾಂಧಿ ಆಗ್ರಹಿಸಿದ್ದಾರೆ.
मोदी जी, अपने ही गोदी मीडिया के दिवाली मिलन में भी टेलीप्रॉम्प्टर?
लोग आपके, मंच आपका, माहौल आपका – फिर भी स्क्रिप्ट चाहिए थी। लगता है दबाव में घबरा गए हैं।
ख़ैर, कोई बात नहीं। मुझसे बहस में भी टेलीप्रॉम्प्टर ले आइए, जज भी अपनी पसंद का बैठा लीजिए।
बस आइए तो सही। देश जानना चाहता है – असली देशद्रोही कौन है?
— Rahul Gandhi (@RahulGandhi) November 13, 2026
ನನ್ನೊಂದಿಗೆ ಚರ್ಚೆಗೆ ಬರುವಾಗ ನೀವು ಬೇಕಿದ್ದರೆ ಟೆಲಿಪ್ರಾಂಪ್ಟರ್(Teleprompter) ತಂದುಕೊಳ್ಳಿ. ತೀರ್ಪುಗಾರರನ್ನೂ ನೀವೇ ಆರಿಸಿಕೊಳ್ಳಿ, ಬೇಕಿದ್ದರೆ ಅದಾನಿ ಅಥವಾ ಮೋಹನ್ ಭಾಗವತ್ ಅವರೇ ತೀರ್ಪುಗಾರರಾಗಲಿ. ನಿಜವಾದ ದೇಶದ್ರೋಹಿ ಯಾರು ಎಂಬುದು ದೇಶಕ್ಕೆ ತಿಳಿಯಬೇಕಿದೆ ಎಂದು ಅವರು ಸವಾಲು ಎಸೆದಿದ್ದಾರೆ. ಇದನ್ನೂ ಓದಿ: ಮೋದಿ ನನ್ನ ಫೋನ್ ಕದ್ದಾಲಿಕೆ ಮಾಡ್ತಿದ್ದಾರೆ – ಗಂಭೀರ ಆರೋಪ ಮಾಡುತ್ತಲೇ ಬಹಿರಂಗ ಚರ್ಚೆಗೆ ಸವಾಲೆಸೆದ ರಾಗಾ
अमित शाह जी, मोदी जी को कन्फ़्यूज़ मत कीजिए।
बस उन्हें मेरे साथ खुली बहस के लिए मना लीजिए। कोई भी मंच, कोई भी समय।
डरो मत। https://t.co/TciYEtNBIt
— Rahul Gandhi (@RahulGandhi) November 6, 2026
ಸೀತಾರಾಮನ್ ತಿರುಗೇಟು
ರಾಹುಲ್ ಗಾಂಧಿ ಅವರ ಬಹಿರಂಗ ಚರ್ಚೆಯ ಸವಾಲನ್ನು ಬಿಜೆಪಿ ನಾಯಕರು ತೀವ್ರವಾಗಿ ಟೀಕಿಸಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿರುವ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್(Nirmala Sitharaman), ರಾಹುಲ್ ಗಾಂಧಿ ಅವರು ಸಂಸತ್ತಿನಲ್ಲಿ ನಡೆಯುವ ಚರ್ಚೆಗಳಿಗೆ ಹಾಜರಾಗದೆ ಪದೇ ಪದೇ ದೂರ ಉಳಿಯುತ್ತಾರೆ. ಸಂಸತ್ತಿನಲ್ಲೇ ಚರ್ಚೆಗೆ ಸೂಕ್ತ ವೇದಿಕೆ ಲಭ್ಯವಿರುವಾಗ, ಪ್ರಧಾನ ಮಂತ್ರಿಯವರು ಪ್ರತ್ಯೇಕ ಸ್ಥಳವನ್ನು ಆರಿಸಿಕೊಳ್ಳಬೇಕೆಂದು ಅವರು ಏಕೆ ಒತ್ತಾಯಿಸುತ್ತಿದ್ದಾರೆ? ಎಂದು ಪ್ರಶ್ನಿಸಿದ್ದಾರೆ.
ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿರುವ ರಾಹುಲ್ ಗಾಂಧಿ ಅವರು ತಮ್ಮ ಸಾಂವಿಧಾನಿಕ ಜವಾಬ್ದಾರಿಯ ವಿಷಯದಲ್ಲಿ ಗಂಭೀರತೆಯನ್ನು ಪ್ರದರ್ಶಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
