ಭೋಪಾಲ್: ಕಾಡುಹಂದಿ ಬೇಟೆಗಾಗಿ ಇಟ್ಟಿದ್ದ ಸಿಡಿಮದ್ದನ್ನು `ರಸಗುಲ್ಲಾ’ (Rasagulla) ಎಂದು ಭಾವಿಸಿ ತಿಂದು ವ್ಯಕ್ತಿ ಸಾವನ್ನಪ್ಪಿರುವ ಘಟನೆ ಮಧ್ಯಪ್ರದೇಶದ (Madhya Pradesh) ದಂಡಿಂಡೋರಿ ಜಿಲ್ಲೆಯಲ್ಲಿ ನಡೆದಿದೆ.
ನ.10ರಂದು ಬೆಳಕಿಗೆ ಬಂದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಮೃತರನ್ನು ಎಎಫ್ಪಿ ರಾಜೇಂದ್ರ ಬಾರೌತಿಯಾ (35) ಎಂದು ಗುರುತಿಸಿದೆ. ಇದನ್ನೂ ಓದಿ: ಯುಜಿ ವೈದ್ಯಕೀಯ ಫಲಿತಾಂಶ ಇನ್ನೂ 27 ಸೀಟು ಬಾಕಿ: ಕೆಇಎ
ಗ್ರಾಮಸ್ಥರು ಸೇರಿಕೊಂಡು ಬೆಂಕಿಯ ಸುತ್ತ ಕುಳಿತಾಗ ವ್ಯಕ್ತಿಯೋರ್ವ ಮೃತ ವ್ಯಕ್ತಿಗೆ ಸ್ಫೋಟಕವೊಂದನ್ನು ನೀಡಿದ್ದ. ಆಗ ಮೃತ ವ್ಯಕ್ತಿ ಗೊತ್ತಾಗದೇ ಅದನ್ನು ರಸಗುಲ್ಲಾ ಎಂದು ಸೇವಿಸಿದಾಗ, ಅದು ಬಾಯಲ್ಲಿ ಬ್ಲಾಸ್ಟ್ ಆಗಿತ್ತು. ಗಂಭೀರವಾಗಿ ಗಾಯಗೊಂಡಿದ್ದ ವ್ಯಕ್ತಿಯನ್ನು ಡಿಂಡೋರಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ. ಈ ಘಟನೆ ಹೇಗೆ ಸಂಭವಿಸಿದೆ ಮತ್ತು ಇದು ಉದ್ದೇಶಪೂರ್ವಕವೇ ಎಂಬುದರ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಕೆಲವು ಗ್ರಾಮೀಣ ಮತ್ತು ಬುಡಕಟ್ಟು ಸಮುದಾಯದವರು ಕಾಡುಹಂದಿಗಳನ್ನು ಬೇಟೆಯಾಡಲು ಇಂತಹ ಕಚ್ಚಾ ಸ್ಫೋಟಕ ಸಾಧನಗಳನ್ನು ಬಳಸುತ್ತಾರೆ ಎಂದು ವರದಿಯಾಗಿದೆ. ಪಟಾಕಿಗಳು ಅಥವಾ ಕಲ್ಲುಗಣಿಗಳಿಂದ ಪಡೆದ ಗನ್ಪೌಡರ್ ಅನ್ನು ಹಿಟ್ಟಿನ ಉಂಡೆಗಳಲ್ಲಿ ತುಂಬಿ ಇದನ್ನು ತಯಾರಿಸಲಾಗುತ್ತದೆ. ಇವುಗಳ ನೋಟವು ಸಾಂಪ್ರದಾಯಿಕ ಭಾರತೀಯ ಸಿಹಿಯಾದ ರಸಗುಲ್ಲಾವನ್ನು ಹೋಲುತ್ತದೆ. ಇದನ್ನೂ ಓದಿ: ಶಿಕ್ಷಕರ ವರ್ಗಾವಣೆ ನಿಯಮಗಳ ಕರಡು ಅಧಿಸೂಚನೆ ಹೊರಡಿಸಿದ ಸರ್ಕಾರ
