– ʻವಿಕಸಿತ ಭಾರತ 2047ʼ ಗುರಿ ಸಾಧಿಸುವುದು ಅಸಾಧ್ಯವೇನಲ್ಲ
– ʻದೀಪಾವಳಿ ಮಿಲನ್ʼ ಸಮಾರೋಪದಲ್ಲಿ ಪ್ರಧಾನಿ ಹೇಳಿಕೆ
ನವದೆಹಲಿ: ಒಂದು ಕಾಲದಲ್ಲಿ ಕೆಂಪುಕೋಟೆಯಲ್ಲಿ ಬಡತನ ನಿರ್ಮೂಲನೆಯ (Garibi Hatao) ಭಾಷಣ ಸಾಮಾನ್ಯವಾಗಿ ಕೇಳಿಬರುತ್ತಿತ್ತು. ಆದ್ರೆ ಇತ್ತೀಚೆಗೆ ವಿಶ್ವಬ್ಯಾಂಕ್ ಬಿಡುಗಡೆ ಮಾಡಿದ ವರದಿಯೊಂದು ಭಾರತವು 50 ಕೋಟಿ ಜನರನ್ನ ಕಡು ಬಡತನದಿಂದ ಮೇಲೆತ್ತಿದೆ ಎಂದು ತೋರಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ (PM Modi) ತಿಳಿಸಿದರು.
ʻದೀಪಾವಳಿ ಮಿಲನ್ʼ ಸಮಾರಂಭದಲ್ಲಿಂದು ಪತ್ರಕರ್ತರನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ ಅವರು, 12 ವರ್ಷಗಳಲ್ಲಿ 50 ಕೋಟಿ ಜನರು ಕಡು ಬಡುತನದಿಂದ ಹೊರ ಬಂದಿದ್ದಾರೆ ಎಂದು ವಿಶ್ವಬ್ಯಾಂಕ್ (World Bank) ವರದಿಯನ್ನ ಉಲ್ಲೇಖಿಸಿ ಮಾತನಾಡಿದರು.
पीएम श्री @narendramodi भाजपा केन्द्रीय कार्यालय, नई दिल्ली में आयोजित दीपावली मिलन समारोह को संबोधित करते हुए।
लाइव देखें: https://t.co/RKoAkRMTV8
— BJP (@BJP4India) November 12, 2026
ಡೆಡ್ಲೈನ್ ನಿರ್ಧಾರವಾದಾಗ ನಮ್ಮ ಪ್ರಾಥಮಿಕತೆ ಬದಲಾಗುತ್ತದೆ. 2047ಕ್ಕೆ ಭಾರತ ವಿಕಸಿತ ಭಾರತವಾಗಬೇಕು. ಅದಕ್ಕಾಗಿ ನಾವು ಕೆಲಸ ಮಾಡಬೇಕು. ಭಾರತ ಈಗ ವಿಶ್ವದ 3ನೇ ಅತಿ ಹೆಚ್ಚು ಸ್ಟಾರ್ಟ್ ಅಪ್ ಹೊಂದಿರುವ ದೇಶವಾಗಿದೆ. ಭಾರತ ಅತಿದೊಡ್ಡ ರಿಯಲ್ ಟೈಮ್ ಪೇಮೆಂಟ್ ಸಿಸ್ಟಮ್ ಹೊಂದಿದೆ. 3 ಕೋಟಿ ಲಕ್ ಪತಿ ದೀದಿ ಮಾಡುವ ಗುರಿ ಇತ್ತು, ಆ ಗುರಿ ಮುಟ್ಟಿದ್ದೇವೆ. ಶೌಚಾಲಯ, ಗ್ಯಾಸ್ ಹೀಗೆ ಯಾವ ಗುರಿ ನಿರ್ಧರಿಸಿದ್ದೆವೋ ಅದನ್ನ ತಲುಪಿದ್ದೇವೆ. 4 ಪಥದ ರಸ್ತೆ ಕನಸಿನ ಮಾತಾಗಿತ್ತು, ಇಂದು ಹೈಸ್ಫೀಡ್ ರಸ್ತೆ ನಿರ್ಮಾಣವಾಗಿವೆ. ರೈಲ್ವೆ ವಿದ್ಯುದೀಕರಣ ಮುಕ್ತಾಯವಾಗಿದೆ. 2014ರ ವೇಳೆಗೆ 30% ಕಾಮಗಾರಿಯಾಗಿತ್ತು. ನಾವು 12 ವರ್ಷಗಳಲ್ಲಿ ಸಂಪೂರ್ಣ ಕಾಮಗಾರಿ ಮುಗಿಸಿದ್ದೇವೆ ಎಂದು ವಿವರಿಸಿದರು.
ಮುಂದುವರಿದು… ಒಂದು ಕಾಲದಲ್ಲಿ ಕೆಂಪುಕೋಟೆಯಲ್ಲಿ ನಿಂತು ಬಡತನ ನಿರ್ಮೂಲನೆ ಮಾಡುವ ಭಾಷಣ ಮಾಡಲಾಗುತ್ತಿತ್ತು. ನಾವು ಇಂದು ನಿಜವಾಗಿ ಬಡತನ ತೊಲಗಿಸಿದ್ದೇವೆ. 12 ವರ್ಷದಲ್ಲಿ 50 ಕೋಟಿ ಜನರು ಕಡು ಬಡುತನದಿಂದ ಹೊರ ಬಂದಿದ್ದಾರೆ ಎಂದು ವಲ್ಡ್ ಬ್ಯಾಂಕ್ ವರದಿ ಹೇಳಿದೆ. 12 ವರ್ಷದಲ್ಲಿ ಇದು ಸಾಧ್ಯವಾದ್ರೆ, 20 ವರ್ಷಗಳಲ್ಲಿ ಭಾರತ ಅಭಿವೃದ್ಧಿ ಹೊಂದಿದ ದೇಶವಾಗಲಿದೆ ಎಂದು ಮೋದಿ ವಿಶ್ವಾಸ ವ್ಯಕ್ತಪಡಿಸಿದರು.
ವಿಶ್ವ ಬ್ಯಾಂಕ್ನ ಅಕ್ಟೋಬರ್ 2026ರ ‘ಬಡತನ ಮತ್ತು ಸಮಾನತೆ ಸಂಕ್ಷಿಪ್ತ ವರದಿ’ಯ (Poverty and Equity Brief) ಪ್ರಕಾರ, 2011 ಮತ್ತು 2023ರ ನಡುವೆ ಸುಮಾರು 49.6 ಕೋಟಿ ಜನರು ‘ಕೆಳ-ಮಧ್ಯಮ ಆದಾಯದ ಬಡತನ ರೇಖೆ’ಯಿಂದ (lower-middle-income poverty threshold) ಮೇಲೆ ಬಂದಿದ್ದಾರೆ. ಅದೇ ಟೈಮಲ್ಲಿ ಭಾರತದಲ್ಲಿ ತೀವ್ರ ಬಡತನದ ಪ್ರಮಾಣವು 27.1% ರಿಂದ 2.6% ಕ್ಕೆ ಇಳಿದಿದೆ ಎಂದು ವರದಿ ದಾಖಲಿಸಿದೆ. 49.6 ಕೋಟಿ ಎಂಬ ಅಂಕಿಅಂಶವು ದಿನಕ್ಕೆ 4.20 ಡಾಲರ್ ಆದಾಯದ ಬಡತನ ರೇಖೆಗೆ ಸಂಬಂಧಿಸಿದೆ. ಆದರೆ ತೀವ್ರ ಬಡತನವನ್ನ ದಿನಕ್ಕೆ 3 ಡಾಲರ್ ಆದಾಯದ ಮಾನದಂಡದ ಆಧಾರದ ಮೇಲೆ ಅಳೆಯಲಾಗುತ್ತದೆ. ಈ ಎರಡೂ ಲೆಕ್ಕಾಚಾರಗಳು 2021ರ ‘ಖರೀದಿ ಶಕ್ತಿ ಸಮಾನತೆ’ಯನ್ನು (Purchasing Power Parity – PPP) ಆಧರಿಸಿವೆ ಎಂದು ಪ್ರಧಾನಿ ಮಾಹಿತಿ ನೀಡಿದರು.
ಕೂಲಿ ಕಾರ್ಮಿಕನ ಮಗ ವಿಜ್ಞಾನಿಯಾಗುತ್ತಿದ್ದಾನೆ
ಅಲ್ಲದೇ, ಇಂದು ಕೂಲಿ ಕಾರ್ಮಿಕನ ಮಗ ವಿಜ್ಞಾನಿಯಾಗುತ್ತಿದ್ದಾನೆ. ಇದು ಬದಲಾಗುತ್ತಿರುವ ಭಾರತ. ಭಾರತದ ಯಶಸ್ವಿ ಕಥೆಗಳನ್ನ ಪತ್ರಕರ್ತರು ಹೊರ ತರಬೇಕು. ಇದೊಂದು ರೀತಿಯ ದೇಶಸೇವೆ, ಭಾರತದಲ್ಲಿ ಸಾಕಷ್ಟು ಸುಧಾರಣೆಗಳಾಗಿದೆ. ಅದೇಲ್ಲವನ್ನು ನೀವು ದೇಶಕ್ಕೆ ತೋರಿಸಿದ್ದೀರಿ. ಈಗ ನಶೆಯ ವಿರುದ್ಧ ಜಾಗೃತಿ ಮೂಡಿಸಬೇಕಿದೆ. ನಾವು ಎಲ್ಲ ಸೇರಿ ವಿಕಸಿತ ಭಾರತ ನಿರ್ಮಾಣ ಮಾಡೋಣ ಎಂದು ಕರೆ ನೀಡಿದರು.
