ನವದೆಹಲಿ: ಇಂದು ಗೋವರ್ಧನ ಪೂಜೆಯ ಸಂದರ್ಭದಲ್ಲಿ ಪ್ರಧಾನಿ ಮೋದಿ (PM Modi) ಅವರು ದೇಶದ ಜನರಿಗೆ ಶುಭಾಶಯ ಕೋರಿ, ಭಗವಾನ್ ಶ್ರೀಕೃಷ್ಣನ ಸಂಸ್ಕೃತ ಶ್ಲೋಕವೊಂದನ್ನು ಹಂಚಿಕೊಂಡಿದ್ದಾರೆ.
ಎಕ್ಸ್ (X) ಖಾತೆಯಲ್ಲಿ ಶುಭಾಶಯ ತಿಳಿಸಿದ ಅವರು, ಗೋವರ್ಧನ ಪೂಜೆಯ ಈ ಶುಭ ಸಂದರ್ಭದಲ್ಲಿ ಎಲ್ಲರಿಗೂ ಶಾಂತಿ, ಸಂತೋಷ ಮತ್ತು ಸಮೃದ್ಧಿ ಲಭಿಸಲಿ. ಈ ಹಬ್ಬವು ನಿಮ್ಮೆಲ್ಲರ ಜೀವನದಲ್ಲಿ ಹೊಸ ಶಕ್ತಿ ಹಾಗೂ ಉತ್ಸಾಹವನ್ನು ತರಲಿ. ಈ ವಿಶೇಷ ದಿನದಂದು ಭಕ್ತರ ರಕ್ಷಕ ಮತ್ತು ಗೋವರ್ಧನ ಪರ್ವತವನ್ನು ಎತ್ತಿದವನು ಎಂದು ಸ್ಮರಿಸುತ್ತಾ, ಭಗವಾನ್ ಶ್ರೀಕೃಷ್ಣನಿಗೆ ಅರ್ಪಿತವಾದ ಸಂಸ್ಕೃತ ಶ್ಲೋಕವೊಂದನ್ನು ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಹಬ್ಬದೂಟಕ್ಕೆ ಹೊರಟಿದ್ದಾಗ ಬೈಕ್ ಅಪಘಾತ – ಮಗಳು ಸಾವು, ತಂದೆ ಸ್ಥಿತಿ ಗಂಭೀರ
सभी देशवासियों को गोवर्धन पूजा की बहुत-बहुत शुभकामनाएं। यह पावन पर्व आप सभी के जीवन में नई ऊर्जा और नए उत्साह का संचार करे। सभी के सुख, सौभाग्य और समृद्धि का विस्तार हो, यही मंगलकामना है।
आभीरनगरीप्राणप्रियं सत्यपराक्रमम् ।
स्वभृत्यभयभेत्तारं गोवर्धनधरं भजे ॥ https://t.co/m4RELRBfsO
— Narendra Modi (@narendramodi) November 10, 2026
ಭಗವಾನ್ ಶ್ರೀಕೃಷ್ಣನ ಸಂಸ್ಕೃತ ಶ್ಲೋಕ ಹಂಚಿಕೊಂಡ ಮೋದಿ:
ಗೋವರ್ಧನವನ್ನು ಎತ್ತಿದವನನ್ನು, ಗೋಪಾಲಕ ಸಮುದಾಯದ ಪ್ರಾಣಪ್ರಿಯನನ್ನು, ಸತ್ಯವೇ ತನ್ನ ಪರಾಕ್ರಮವಾಗಿರುವವನನ್ನು ಹಾಗೂ ತನ್ನ ಭಕ್ತರ ಭಯವನ್ನು ಹೋಗಲಾಡಿಸುವವನನ್ನು ನಾನು ಪೂಜಿಸುತ್ತೇನೆ.
ಈ ಶ್ಲೋಕವು ಶ್ರೀಕೃಷ್ಣನ ಮೇಲಿನ ಭಕ್ತಿಯನ್ನು ವ್ಯಕ್ತಪಡಿಸುವುದರ ಜೊತೆಗೆ, ಆತನನ್ನು ಬ್ರಜದ ಜನರ ಪ್ರೀತಿಪಾತ್ರನೆಂದೂ, ಧೈರ್ಯದ ಪ್ರತೀಕವೆಂದೂ ಹಾಗೂ ಭಕ್ತರ ಕಷ್ಟ-ಭಯಗಳನ್ನು ದೂರ ಮಾಡುವ ರಕ್ಷಕನೆಂದೂ ಬಣ್ಣಿಸುತ್ತದೆ. ಅಲ್ಲದೆ, ಭಾರೀ ಮಳೆ ಮತ್ತು ಪ್ರವಾಹದಿಂದ ಬ್ರಜದ ಜನರನ್ನು ಕಾಪಾಡಲು ಶ್ರೀಕೃಷ್ಣನು ಗೋವರ್ಧನ ಪರ್ವತವನ್ನು ಎತ್ತಿದ ಐತಿಹಾಸಿಕ ಕಥೆಯನ್ನು ಇದು ನೆನಪಿಸುತ್ತದೆ. ಈ ಶ್ಲೋಕದ ಮೂಲಕ ಗೋವರ್ಧನ ಪೂಜೆಯ ಸಾಂಸ್ಕೃತಿಕ ಹಾಗೂ ಧಾರ್ಮಿಕ ಮಹತ್ವವನ್ನು ಪ್ರಧಾನಿಯವರು ಎತ್ತಿ ತೋರಿಸಿದ್ದಾರೆ.ಇದನ್ನೂ ಓದಿ: ಜೈಲಲ್ಲೇ ಪೋಕ್ಸೊ ಆರೋಪಿಗಳಿಂದ ಹುಚ್ಚಾಟ – ಜೈಲರ್ಗೆ ಜೀವ ಬೆದರಿಕೆ
