– ಪೆಟ್ರೋಲ್, ಡೀಸೆಲ್ ಬೆಲೆ ಜಾಸ್ತಿ ಮಾಡ್ತಾರೆ ಅಂತಲೇ ಜನರಿಗೆ ಗ್ಯಾರಂಟಿ ಕೊಟ್ಟು ಸಹಾಯ ಮಾಡ್ತಿದ್ದೇವೆ
– ಕೇಂದ್ರಕ್ಕೆ ರೈತರ ಮೇಲೆ ಕಾಳಜಿ ಇಲ್ಲ ಅಂತ ಸಿಎಂ ಟೀಕೆ
ಹಾಸನ: ಇವರ ಕನಸಿನ ಸರ್ಕಾರ ಬಂದರೆ, ಗ್ಯಾರಂಟಿಗಳಿಗೆ ತೊಂದರೆ ಮಾಡ್ತಾರೆ ಅನ್ನೋದಕ್ಕೆ ಇದೇ ಸಾಕ್ಷಿ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ (H.D.Kumaraswamy) ವಿರುದ್ಧ ಸಿಎಂ ಡಿ.ಕೆ.ಶಿವಕುಮಾರ್ (D.K.Shivakumar) ವಾಗ್ದಾಳಿ ನಡೆಸಿದರು.
ಸಿಎಂ ಆದ ಬಳಿಕ ಮೊದಲ ಬಾರಿಗೆ ಕುಟುಂಬ ಸಮೇತರಾಗಿ ಡಿ.ಕೆ.ಶಿವಕುಮಾರ್ ಅವರು ಹಾಸನಾಂಬೆ ದರ್ಶನ ಪಡೆದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಲಾದರೂ ನಮ್ಮ ಗ್ಯಾರಂಟಿಗೆ ವಿರೋಧ ಇದ್ದಾರಲ್ಲ, ಬಹಳ ಸಂತೋಷ. ಸುಮಾರು ನಾಲ್ಕು ಕೋಟಿ ಜನರಿಗೆ ನಮ್ಮ ಗ್ಯಾರಂಟಿಗಳು ತಲುಪುತ್ತಿವೆ. ಇವರು ಗ್ಯಾರಂಟಿ ವಿರೋಧಿಗಳು. ಇವರ ಕನಸಿನ ಸರ್ಕಾರ ಬಂದರೆ ಗ್ಯಾರಂಟಿಗಳಿಗೆ ತೊಂದರೆ ಮಾಡ್ತೀವಿ ಅನ್ನೋದಕ್ಕೆ ಇದೇ ಸಾಕ್ಷಿ ಎಂದು ಟಾಂಗ್ ಕೊಟ್ಟರು.
ಕಬ್ಬು, ಯತ್ನಾಳ್ ಅಲ್ಲ… ಎಥೆನಾಲ್ ವಿಚಾರ ಇದೆ. ಅದು ಮಿಕ್ಸ್ ಆಗ್ತಿರೋದನ್ನು ನಾವು ಕಂಡುಹಿಡಿದಿದ್ದೇವೆ. ಎಥೆನಾಲ್ ಬಳಕೆಯಿಂದ ವಾಹನಗಳು ಹೆಚ್ಚು ಕಮ್ಮಿ ಆಗುತ್ತಿವೆ. ಬೆಲೆ ಏರಿಕೆ ಅಂತ ವಿಪಕ್ಷಗಳು ಟೀಕೆ ಮಾಡುತ್ತಾರೆ. ಬೆಲೆ ಏರಿಕೆ ಜಾಸ್ತಿ ಆಗುತ್ತಿದೆ. ಪೆಟ್ರೋಲ್, ಡೀಸೆಲ್ ಬೆಲೆ ಜಾಸ್ತಿ ಮಾಡ್ತಿದ್ದಾರೆ ಎಂದೇ ಐದು ಗ್ಯಾರಂಟಿ ಕೊಟ್ಟು ಜನರಿಗೆ ಸಹಾಯ ಮಾಡುತ್ತಿದ್ದೇವೆ. ರೈತರಿಗೆ 2500 ಕೊಡೋದು ಅಂತ ಇತ್ತು. ಈಗ 5 ಸಾವಿರ ಕೊಡಲು ತೀರ್ಮಾನ. ಬರಗಾಲ ದಾನ ಸುಮಾರು ಎರಡೂವರೆ ಸಾವಿರ ಕೋಟಿ ಆಗುತ್ತದೆ. ಕರೆಂಟ್ ಮೊದಲು 20 ಸಾವಿರ ಕೋಟಿ ಆಗ್ತಿತ್ತು. ಈಗ 30 ಸಾವಿರ ಆಗ್ತಿದೆ ಎಂದು ತಿಳಿಸಿದರು. ಇದನ್ನೂ ಓದಿ: ಹಾಸನಾಂಬೆ ಪಾದದಾಣೆಗೂ ಒಂದೇ ಒಂದು ಪೈಸೆ ಲೋಪ ಮಾಡಿಲ್ಲ: ಹೆಚ್ಡಿಕೆ ಆರೋಪಕ್ಕೆ ಶಿವಲಿಂಗೇಗೌಡ ಬೇಸರ
ವಿಪಕ್ಷದವರು ಮಾತನಾಡುತ್ತಾರೆ. ಅವರಿಗೆ ಬೇರೆ ಏನು ಇದೆ. ಕೇಂದ್ರದಿಂದ ಏನು ಕೊಡಿಸಲಿಲ್ಲ. ಪೆಟ್ರೋಲ್ ಡೀಸೆಲ್ ಬೆಲೆ ಇಳಿಸಲಿಲ್ಲ. ಕೇಂದ್ರದಿಂದ ಒಂದು ರೂಪಾಯಿ ಹಣ ಕೊಡಲಿಲ್ಲ. ಹತ್ತು ವರ್ಷ ಆಯ್ತು ಕಬ್ಬಿಗೆ ಏಕೆ ಬೆಂಬಲ ಬೆಲೆ ನಿಗದಿ ಮಾಡಲಿಲ್ಲ. ಸಕ್ಕರೆ ಬೆಲೆಯನ್ನ ಕಂಟ್ರೋಲ್ನಲ್ಲಿ ಇಟ್ಟರೆ ರೈತರಿಗೆ ಏನಾಗಬೇಕು? ರೈತರು ಕೇಳುವುದರಲ್ಲಿ ತಪ್ಪೇನಿಲ್ಲ. ಕೇಂದ್ರ ಸರ್ಕಾರಕ್ಕೆ ರೈತರ ಮೇಲೆ ಕಾಳಜಿ ಇಲ್ಲ. ಹಾಲು ಬೇರೆ ರಾಜ್ಯಕ್ಕೆ ನೋಡಿದರೆ ನಮ್ಮದು ಅಷ್ಟೇ ಇದೆ. ಜಾಸ್ತಿ ಬೆಲೆ ಆದರೂ ನಷ್ಟ ಅಂದ್ರೆ ಅವರು ಹೇಗೆ ನಡೆಸುತ್ತಾರಂತೆ ಎಂದು ಪ್ರಶ್ನಿಸಿದರು.
ಹಾಲು ಕೊಳ್ಳೋರೆ ಇಲ್ಲ. ದಿನಕ್ಕೆ 27 ಲಕ್ಷ ನಷ್ಟ ಆಗ್ತಿದೆ ಎಂಬ ರೇವಣ್ಣ ಹೇಳಿಕೆ ಬಗ್ಗೆ ಮಾತನಾಡಿ, ವರ್ಷಕ್ಕೆ ನೂರು ಕೋಟಿಯಷ್ಟು ನಷ್ಟ, ಪುಡಿ ಮಾಡಿದ್ರೆ ಕೊಳ್ಳೋರೆ ಇಲ್ಲ. ಈ ವಿಚಾರ ಹೊಸದು ನನಗೆ ಗೊತ್ತಿಲ್ಲ, ಚರ್ಚೆ ಮಾಡ್ತೀನಿ. ರೇವಣ್ಣನವರಷ್ಟು ನನಗೆ ಗೊತ್ತಿಲ್ಲ, ಅವರಷ್ಟು ಅನುಭವವಿಲ್ಲ ಕೇಳ್ತೀನಿ. ಹಾಸನಾಂಬೆಗೆ ಬಿಎಸ್ವೈ ಬಿಟ್ಟರೆ ಯಾರೂ ಅಭಿವೃದ್ಧಿಗೆ ಹಣ ನೀಡಿಲ್ಲ. ಜಿಲ್ಲಾಧಿಕಾರಿ ಬಳಿ ಮಾತನಾಡ್ತೀನಿ, ನನಗೆ ಯಾವುದೇ ಪ್ರಸ್ತಾವನೆ ಬಂದಿಲ್ಲ. ಏನು ಕೊರತೆ ಎಂದು ವಿಚಾರಿಸಿ ಮಾತನಾಡ್ತೀನಿ ಎಂದರು. ಇದನ್ನೂ ಓದಿ: ಹಾಸನ ಡಿಸಿ, ಶಿವಲಿಂಗೇಗೌಡ ವಿರುದ್ಧ ಲಂಚಾರೋಪ – ಕೇಂದ್ರ ಸಚಿವ ಕುಮಾರಸ್ವಾಮಿ ಬಾಂಬ್
