– ವಾಟ್ಸಪ್ ಚಾಟ್ ರಿಲೀಸ್ ಮಾಡಿದ ಹೆಚ್ಡಿಕೆ
ಹಾಸನ: ಇಲ್ಲಿನ ಜಿಲ್ಲಾಧಿಕಾರಿ ಕೆ.ಎಸ್ ಲತಾಕುಮಾರಿ ಹಾಗೂ ಉಸ್ತುವಾರಿ ಸಚಿವ ಶಿವಲಿಂಗೇಗೌಡ ವಿರುದ್ಧ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ (HD Kumaraswamy) ಅವರು ಲಂಚದ ಬಾಂಬ್ ಸಿಡಿಸಿದ್ದಾರೆ.
ದಂಪತಿ ಸಮೇತರರಾಗಿ ಹಾಸನಾಂಬ ದೇವಿ (Hasanamba devi) ದರ್ಶನ ಪಡೆದ ಕುಮಾರಸ್ವಾಮಿ ಅವರು ಶಾಸಕ ಹೆಚ್.ಪಿ ಸ್ವರೂಪ್ಪ್ರಕಾಶ್ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದಾರೆ. ಇದೇ ವೇಳೆ ಡಿಸಿ ಪಿಎ ಶಶಿಕಿರಣ್ ಅವರದ್ದು ಎನ್ನಲಾದ ವಾಟ್ಸಪ್ ಚಾಟ್ ರಿಲೀಸ್ ಮಾಡಿದ್ದಾರೆ.
ಡಿಸಿ ಕೆ.ಎಸ್ ಲತಾಕುಮಾರಿ ಪಿಎ ಶಶಿಕಿರಣ್ ಲಂಚ ಕೇಳಿ ಕ್ರಶರ್ ಮಾಲೀಕನ ಜೊತೆ ಮಾಡಿದ್ದು ಎನ್ನಲಾದ ವ್ಯಾಟ್ಸಪ್ ಚಾಟ್ ದಾಖಲೆ ಬಿಡುಗಡೆ ಮಾಡಿದ್ದಾರೆ. ಬಳಿಕ ಮಾತನಾಡಿದ ಕೇಂದ್ರ ಸಚಿವರು, 10 ರೂಪಾಯಿ ಲಂಚ ಕೇಳಿದ್ರೆ ನನಗೆ ಫೋನ್ ಮಾಡಿ ಅಂತಾ ಮುಖ್ಯಮಂತ್ರಿ ಹೇಳಿದ್ದಾರೆ. ಆದ್ರೆ ಇಲ್ಲಿನ ಸಚಿವರು ಕೊಡೋದು ಧರ್ಮ ಅಂತಾರೆ. ಇಂತಹದ್ದಕ್ಕೆ ಕಡಿವಾಣ ಹಾಕಿದ್ರೆ ನಾನೇ ಸನ್ಮಾನ ಮಾಡ್ತೀನಿ ಎಂದು ಹೇಳಿದ್ದಾರೆ.
ರಾಜ್ಯದ ಸಿಎಂಗೆ ಹೇಳ್ತಿನಿ, ಇದೊಂದು ಜಿಲ್ಲೆ ಅಲ್ಲ ಎಲ್ಲಾ ಕಡೆ ಇದೇ ವಾತಾವರಣ ಇದೆ. ಪ್ರತಿ ಶನಿವಾರ ಪ್ರಜಾ ಸೇವಾ ಕಾರ್ಯಕ್ರಮಕ್ಕೆ ಲಕ್ಷಾಂತರ ಹಣ ಖರ್ಚು ಮಾಡ್ತಾ ಇದ್ದೀರಿ. ಹಾಗಿದ್ರೆ ಅಲ್ಲಿ ಕೊಡುವ ಅರ್ಜಿಯ ಕಥೆ ಏನು? ಈ ಫೋನ್ಗಳನ್ನ ಸೀಜ್ ಮಾಡಿ ತನಿಖೆ ಮಾಡ್ತಿರಾ ಸಲೀಂ ಅವರೇ? ಅಂತಾ ಪ್ರಶ್ನೆ ಮಾಡಿದ್ದಾರೆ.
ಈ ದಾಖಲೆಯನ್ನ ಯಾರೋ ಅಧಿಕಾರಿನೇ ಕೊಟ್ಟಿದ್ದಾರೆ. ಈ ಚರ್ಚೆ ಮೂರು ಕ್ರಷರ್ ವಿಚಾರದಲ್ಲಿ ಈ ಚರ್ಚೆ ನಡೆದಿದೆ. ಸಿಎಂ ಹಾಸನಾಂಬ ದರ್ಶನ ಮಾಡಿ ಒಳ್ಳೆಯ ಮಾತು ಆಡ್ತಾರೆ. ಇಲ್ಲಿ ನಡೆಯುತ್ತಿರುವ ವಿಚಾರದಲ್ಲಿ ಕಡಿವಾಣ ಹಾಕ್ತಾರಾ ಕೇಳಿ? ಇಂತಹ ವಿಚಾರ ಮಾತಾಡಿ ಮಾತಾಡಿ ನನಗೇ ಬೆಸರ ಆಗಿದೆ
ಯಾರೂ ಅನ್ಯತಾ ಬಾವಿಸಬೇಡಿ. ಸರ್ಕಾರದಲ್ಲಿ ಏನು ನಡೆಯುತ್ತಿದೆ ಅದನ್ನ ಜನರ ಮುಂದೆ ಇಟ್ಟಿದ್ದೇನೆ ಎಂದು ತೀವ್ರ ಅಸಮಾಧಾನ ಹೊರಹಾಕಿದ್ದಾರೆ.
