ಬೆಂಗಳೂರು: ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ (Chalavadi Narayanaswamy) ಮನೆಗೆ ಚಾಕು ಪಾರ್ಸೆಲ್ ಪ್ರಕರಣ ಬಿಜೆಪಿ (BJP) ನಾಯಕರ ಕೆಂಗಣ್ಣಿಗೆ ಗುರಿಯಾಗಿದೆ. ಬೆಂಗಳೂರಿನ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ (High Grounds Police Station) ಛಲವಾದಿ ನಾರಾಯಣಸ್ವಾಮಿ ದೂರಿನ ಮೇರೆಗೆ ಎಫ್ಐಆರ್ (FIR) ದಾಖಲಾಗಿದೆ.
ಅಪರಿಚಿತರ ವಿರುದ್ಧ ದೂರು ದಾಖಲಿಸಿದ್ದು, ಚಾಕುಗಳನ್ನ ಕಳುಹಿಸಿದವರಿಗಾಗಿ ಹುಡುಕಾಟ ನಡೆಯುತ್ತಿದೆ. ಛಲವಾದಿ ನಾರಾಯಣಸ್ವಾಮಿ ಕೂಡ ಕಳೆದೊಂದು ವಾರದಿಂದ ಕಾಂಗ್ರೆಸ್ನ ಕೆಲವು ಹುಡುಗರು ಪದೇಪದೇ ಬಂದು ಗೂಂಡಾ ಪ್ರದರ್ಶನ ಮಾಡುತ್ತಿದ್ದಾರೆ. ಅವರ ಬೆದರಿಕೆಗಳಿಗೆ ನಾನು ಹೆದರಲ್ಲ. ಅಂಬೇಡ್ಕರ್ ಸಂವಿಧಾನದ ಅಡಿಯಲ್ಲಿ ನಾನು ಶಕ್ತಿ, ಯುಕ್ತಿಯಿಂದ ಹೋರಾಟ ಮಾಡುತ್ತೇನೆ ಎಂದಿದ್ದಾರೆ. ಇದನ್ನೂ ಓದಿ: ಕಾನ್ಪುರದಲ್ಲಿ ಮನೆಯ ಮೇಲ್ಛಾವಣಿ ಕುಸಿತ – 20 ದಿನದ ಹಸುಗೂಸು ಸೇರಿ ಮೂವರು ದುರ್ಮರಣ
ವಿಪಕ್ಷ ನಾಯಕ ಆರ್.ಅಶೋಕ್ ಛಲವಾದಿ ನಾರಾಯಣಸ್ವಾಮಿ ನಿವಾಸಕ್ಕೆ ಭೇಟಿ ನೀಡಿದ್ದರು. ಈ ವೇಳೆ ಮಾತನಾಡಿ, ಸೆವೆನ್ ಮಿನಿಸ್ಟರ್ ಕ್ವಾಟ್ರಸ್ನಲ್ಲಿ ಛಲವಾದಿ ಅವರ ನಿವಾಸ ಇದೆ. ಪಕ್ಕದಲ್ಲೇ ಜಡ್ಜ್ಗಳ ನಿವಾಸ ಕೂಡ ಇದೆ. ಆದರೂ ಕಾಂಗ್ರೆಸ್ನವರು ಇಲ್ಲಿಗೆ ಬರುತ್ತಾರೆ ಅಂದ್ರೆ ಏನು ಹೇಳೋದು? ಇದೆನ್ನೆಲ್ಲಾ ನೋಡುತ್ತಿದ್ದರೆ ಕಾಂಗ್ರೆಸ್ನ ಅವನತಿ ಪ್ರಾರಂಭ ಆಗಿದೆ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಭಾರತೀಯರಿಗೆ ದೀಪಾವಳಿ ಶುಭಾಶಯ ತಿಳಿಸಿದ ಇರಾನ್ ಸರ್ವೋಚ್ಚ ನಾಯಕ ಖಮೇನಿ ಪ್ರತಿನಿಧಿ
ಮುಂದುವರಿದು, ಛಲವಾದಿ ಅವರ ಜೊತೆ ನಾವಿದ್ದೇವೆ. ಇದಕ್ಕೆಲ್ಲ ನಾವು ಜಗ್ಗದೂ ಇಲ್ಲ, ಬಗ್ಗೋದೂ ಇಲ್ಲ. ಮುಂದೆ ಏನೇ ಆದರೂ ಅದಕ್ಕೆ ಸಿಎಂ ಡಿಕೆ ಶಿವಕುಮಾರ್ ಹೊಣೆ ಎಂದು ಎಚ್ಚರಿಸಿದ್ದಾರೆ. ಫ್ರೀಡಂ ಪಾರ್ಕ್ನಲ್ಲಿ ಬಿಜೆಪಿ ಎಸ್ಸಿ ಮೋರ್ಚಾ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಕಾಂಗ್ರೆಸ್ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಈ ಮಧ್ಯೆ, ಛಲವಾದಿ ನಾರಾಯಣಸ್ವಾಮಿ ವಿರೋಧಿಗಳೇ ಪಾರ್ಸೆಲ್ ಮಾಡಿಸಿರಬಹುದು ಅಂತ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ. ಇದನ್ನೂ ಓದಿ: ಹಾಸನಾಂಬೆ ಪಾದದಾಣೆಗೂ ಒಂದೇ ಒಂದು ಪೈಸೆ ಲೋಪ ಮಾಡಿಲ್ಲ: ಹೆಚ್ಡಿಕೆ ಆರೋಪಕ್ಕೆ ಶಿವಲಿಂಗೇಗೌಡ ಬೇಸರ
