ಹಾಸನ: ಹಾಸನಾಂಬ (Hasanamba) ಜಾತ್ರಾ ಮಹೋತ್ಸವದಲ್ಲಿ ಹಾಸನ ತಹಶೀಲ್ದಾರ್ (Tahsildar) ಗೀತಾ ಹಾಗೂ ಡಿವೈಎಸ್ಪಿ (DySP) ಮಾಲತೇಶ್ ಅವರ ನಡುವೆ ತೀವ್ರ ವಾಗ್ವಾದ ನಡೆದಿದೆ. ಈ ವೇಳೆ ಗೀತಾ ಅವರು ಕಣ್ಣೀರಿಟ್ಟಿದ್ದಾರೆ.
ಪ್ರೋಟೋಕಾಲ್ ವಾಹನ ಹೋಗುತ್ತಿದೆ. ನನ್ನ ವಾಹನ ತೆಗಿಸಿಕೊಡಿ ಎಂದು ತಹಶೀಲ್ದಾರ್ ಹೇಳಿದ್ದಾರೆ. ಇದೇ ವಿಚಾರಕ್ಕೆ ತಹಶೀಲ್ದಾರ್ ಹಾಗೂ ಡಿವೈಎಸ್ಪಿ ನಡುವೆ ವಾಗ್ವಾದ ಆರಂಭವಾಗಿದೆ. ದೇವಾಲಯದ ಮುಂಭಾಗ ಭಕ್ತರ ಎದುರಲ್ಲಿ ಅಧಿಕಾರಿಗಳು ಏಕವಚನದಲ್ಲೇ ಪರಸ್ಪರ ನಿಂದಿಸಿಕೊಂಡಿದ್ದಾರೆ. ಈ ವೇಳೆ ತಹಶೀಲ್ದಾರ್ ಕಣ್ಣೀರಿಟ್ಟಿದ್ದಾರೆ. ಇದನ್ನೂ ಓದಿ: ಕುಟುಂಬ ಸಮೇತರಾಗಿ ಶಕ್ತಿ ಸ್ವರೂಪಿಣಿ ಹಾಸನಾಂಬೆ ದೇವಿ ದರ್ಶನ ಪಡೆದ ಡಿಕೆಶಿ
ಭಾನುವಾರ ರಜಾ ದಿನವಾಗಿದ್ದರಿಂದ ದೇವಸ್ಥಾನದಲ್ಲಿ ಭಕ್ತರ ಸಂಖ್ಯೆ ಹೆಚ್ಚಿದೆ. ಧರ್ಮದರ್ಶನದ ಸಾಲಿನಲ್ಲಿ ಭಕ್ತರು ತುಂಬಿ ತುಳುಕುತ್ತಿದ್ದಾರೆ. 1000, 300 ರೂ. ವಿಶೇಷ ದರ್ಶನದ ಸಾಲಿನಲ್ಲಿ ಭಕ್ತರ ಸಂಖ್ಯೆ ಕಡಿಮೆ ಇದೆ.
ದೇವಿ ದರ್ಶನ ಪಡೆದು ವಾಪಾಸ್ ಹೋಗುವವರಿಗೆ ಹೆಚ್ಚಿನ ಬಸ್ಗಳ ವ್ಯವಸ್ಥೆ ಮಾಡಲಾಗಿದೆ. ಬೆಂಗಳೂರಿಗೆ ಹೆಚ್ಚಿನ ಬಸ್ ವ್ಯವಸ್ಥೆ ಮಾಡಲಾಗಿದೆ. ಹಾಸನ ನಗರದ ಚನ್ನಪಟ್ಟಣದಲ್ಲಿರುವ ಸಾರಿಗೆ ಬಸ್ ನಿಲ್ದಾಣ ಬಸ್ಗಳಿಂದ ತುಂಬಿಹೋಗಿದೆ. ಇದನ್ನೂ ಓದಿ: ಹಾಸನ ಡಿಸಿ, ಶಿವಲಿಂಗೇಗೌಡ ವಿರುದ್ಧ ಲಂಚಾರೋಪ – ಕೇಂದ್ರ ಸಚಿವ ಕುಮಾರಸ್ವಾಮಿ ಬಾಂಬ್
