– ಪ್ರತಿ ಮನೆಯಲ್ಲೂ ಸುಖ, ಶಾಂತಿ ನೆಲೆಸಲಿ – ನಾಡಿನ ಒಳಿತಿಗಾಗಿ ಸಿಎಂ ಪ್ರಾರ್ಥನೆ
ಹಾಸನ: ವರ್ಷಕ್ಕೊಮ್ಮೆ ದರ್ಶನ ಕೊಡುವ ತಾಯಿ ಹಾಸನಾಂಬ ದೇವಿ ಜಾತ್ರಾಮಹೋತ್ಸವಕ್ಕಿಂದು 10 ದಿನ. ಅಲ್ಲದೇ ನರಕ ಚತುರ್ಥಿ ಹಿನ್ನೆಲೆ ಸಿಎಂ ಡಿ.ಕೆ ಶಿವಕುಮಾರ್ ಹಾಸನಕ್ಕೆ ಭೇಟಿ ನೀಡಿದ್ರು.
ಹಾಸನಾಪುರ ಮಧ್ಯಸ್ಥೇ ಹಾಸ್ಯರೂಪೇ ಮಹೇಶ್ವರಿ |
ಭಕ್ತಾಭೀಷ್ಟಪ್ರದೇ ದೇವಿ ಹಾಸನಾಂಬೇ ನಮೋಸ್ತುತೇ ||ಹಾಸನದ ಅಧಿದೇವತೆ, ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುವ ಶಕ್ತಿ ಸ್ವರೂಪಿಣಿ ಶ್ರೀ ಹಾಸನಾಂಬೆಯ ಸನ್ನಿಧಿಗೆ ಇಂದು ಕುಟುಂಬ ಸಮೇತ ಭೇಟಿ ನೀಡಿ, ತಾಯಿಯ ದರ್ಶನ ಪಡೆದು, ವಿಶೇಷ ಪೂಜೆ ಸಲ್ಲಿಸಿದೆ. ಇದೇ ವೇಳೆ ಜಗನ್ಮಾತೆಯ ಕೃಪಾಶೀರ್ವಾದದಿಂದ ನಾಡಿನ ಪ್ರತಿಯೊಂದು ಮನೆಯಲ್ಲೂ ಸುಖ, ಶಾಂತಿ, ನೆಮ್ಮದಿ ನೆಲೆಸಲಿ, ಎಲ್ಲರ ಬದುಕಿನಲ್ಲಿ ಒಳಿತು ಮತ್ತು ಸಮೃದ್ಧಿ ತುಂಬಿರಲಿ ಎಂದು ಪ್ರಾರ್ಥಿಸಿದೆ.
ಈ ಸಂದರ್ಭದಲ್ಲಿ ಹಾಸನ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಕೆ.ಎಂ. ಶಿವಲಿಂಗೇಗೌಡ, ಸಂಸದರಾದ ಶ್ರೀ ಶ್ರೇಯಸ್ ಎಂ. ಪಟೇಲ್ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.
— DK Shivakumar (@DKShivakumar) November 8, 2026
ಹಾಸನದಲ್ಲಿರುವ ಶಕ್ತಿ ದೇವತೆ ಹಾಸನಾಂಬ ದೇಗುಲಕ್ಕೆ ಪತ್ನಿ ಉಷಾರ ಅವರೊಂದಿಗೆ ಆಗಮಿಸಿ, ಪೂಜೆ ಸಲ್ಲಿಸಿದರು. ಗರ್ಭಗುಡಿಯಲ್ಲಿ ನಿಂತು ಭಕ್ತಿ ಭಾವದಿಂದ ಪ್ರಾರ್ಥನೆ ಸಲ್ಲಿಸಿದರು. ಮುಖ್ಯಮಂತ್ರಿ ಆದ ಬಳಿಕ ಮೊದಲ ಬಾರಿಗೆ ಹಾಸನಾಂಬ ದೇವಿ ದರ್ಶನಕ್ಕೆ ಆಗಮಿಸಿದ ವಿಶೇಷ ಪೂಜೆ ಸಲ್ಲಿಸಿ ದೇವಿ ದರ್ಶನ ಪಡೆದರು.
ಸಿಎಂ ಡಿಕೆಶಿಗೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಂ.ಶಿವಲಿಂಗೇಗೌಡ, ಸಂಸದ ಶ್ರೇಯಸ್ಪಟೇಲ್ ಸಾಥ್ ನೀಡಿದ್ರು. ಇದಾದ ಬಳಿಕ ಹಾಸನದ ಮಹಾನಗರಪಾಲಿಕೆ ವಸ್ತು ಪ್ರದರ್ಶನ ಮೈದಾನದಲ್ಲಿ ಫಲಪುಷ್ಪ ಪ್ರದರ್ಶನ ಹಾಗೂ ಹಾಸನಾಂಬ ಕ್ರೀಡೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾದ್ರು.
ಇದಾದ ಬಳಿಕ ಬೀಕನಹಳ್ಳಿ ಗ್ರಾಮದ ಪುರದಮ್ಮ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ರು.
