ಬೆಂಗಳೂರು: ರಾಜ್ಯ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದ್ದು, ಸರ್ಕಾರಿ ಯೋಜನೆಗಳಡಿ ವಿತರಿಸುವ ಎಲ್ಲಾ ವಾಹನಗಳು ಮತ್ತು ಉಪಕರಣಗಳಿಗೆ ಹಳದಿ-ಕೆಂಪು ಬಣ್ಣದ ವಿನ್ಯಾಸ ಅಳವಡಿಸುವುದನ್ನ ಕಡ್ಡಾಯಗೊಳಿಸಿದೆ.
ಸರ್ಕಾರದಿಂದ ವಿತರಿಸಲಾಗುವ ವಾಹನಗಳು ಮತ್ತು ಉಪಕರಣಗಳಿಗೆ ಹಳದಿ-ಕೆಂಪು ಬಣ್ಣದ ವಿನ್ಯಾಸದ ಜೊತೆಗೆ ಅಧಿಕೃತ ರಾಜ್ಯ ಲಾಂಛನವನ್ನು ಕೂಡ ಕಡ್ಡಾಯವಾಗಿ ಅಳವಡಿಸಬೇಕು ಎಂದು ಸರ್ಕಾರ ಸೂಚಿಸಿದೆ.
ಈ ನಿಯಮ ಆಟೋರಿಕ್ಷಾಗಳು, ಕಾರುಗಳು, ಬೀದಿ ವ್ಯಾಪಾರಕ್ಕೆ ಬಳಸುವ ವಾಹನಗಳು ಸೇರಿದಂತೆ ಇತರ ಯಂತ್ರೋಪಕರಣಗಳಿಗೂ ಅನ್ವಯವಾಗಲಿದೆ.
ಸರ್ಕಾರಿ ಯೋಜನೆಗಳ ಅಡಿಯಲ್ಲಿ ವಿತರಿಸಲಾದ ಆಸ್ತಿಗಳನ್ನು ಸುಲಭವಾಗಿ ಗುರುತಿಸುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ. ಈ ನಿಯಮ ತಕ್ಷಣದಿಂದಲೇ ಜಾರಿಗೆ ಬರಲಿದೆ.


