– ವಾರ್ಡ್ ಒನ್ ಅಭಿಯಾನ ಕಾಂಗ್ರೆಸ್ , ಬಿಜೆಪಿ ನಾಯಕರ ನಡುವೆ ಗಲಾಟೆ
ಬೆಂಗಳೂರು: ವಾರ್ಡ್ ಒನ್ ಎರಡನೇ ಹಂತದ ಅಭಿಯಾನದ ವೇಳೆ ಬಿಜೆಪಿ, ಕಾಂಗ್ರೆಸ್ ನಾಯಕರ ನಡುವೆ ಗಲಾಟೆ ಆಗಿದೆ. ಬಿಜೆಪಿ ಶಾಸಕ ಬೈರತಿ ಬಸವರಾಜ್ (Byrathi Basavaraj), ಕಾಂಗ್ರೆಸ್ ಎಂಎಲ್ಸಿ ನಾರಾಯಣಸ್ವಾಮಿ ಕಾಂಗ್ರೆಸ್ ಕಾರ್ಯಕರ್ತ ನಡುವೆ ತಳ್ಳಾಟ, ನೂಕಾಟ ಆಗಿದೆ. ಸಚಿವ ಕೃಷ್ಣಬೈರೇಗೌಡರ (Krishna Byre Gowda) ಮುಂದೆ ಕೈ ಕೈ ಮಿಲಾಯಿಸುವ ಹಂತಕ್ಕೆ ಗಲಾಟೆ ಆಗಿದೆ.
ವಾರ್ಡ್ ಗಳ ಅಭಿವೃದ್ಧಿ ಮತ್ತು ಮೂಲಭೂತ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಜಿಬಿಎ ವ್ಯಾಪ್ತಿಯಲ್ಲಿ ಒನ್ ವಾರ್ಡ್ ಅಭಿಯಾನ (Ward One Campaign) ನಡೆಯುತ್ತಾ ಇದೆ. ಮೊದಲ ಹಂತದ ಅಭಿಯಾನದಲ್ಲಿ 43 ವಾರ್ಡ್ ಗಳನ್ನ ಅಭಿವೃದ್ಧಿ ಮಾಡಿದ್ದಾರೆ. ಇಂದು 2ನೇ ಹಂತದ ವಾರ್ಡ್ ಒನ್ ಅಭಿಯಾನಕ್ಕೆ ಸಚಿವ ಕೃಷ್ಣಬೈರೇಗೌಡ ಕೆ.ಆರ್ ಪುರಂ ಕ್ಷೇತ್ರದ ಟಿನ್ ಫ್ಯಾಕ್ಟರಿ ಬಳಿ ಚಾಲನೆ ನೀಡಿದ್ದಾರೆ ವಾರ್ಡ್ ಒನ್ ಅಭಿಯಾನಕ್ಕೆ ಚಾಲನೆ ನೀಡುವ ವೇಳೆ ಕೆ.ಆರ್ ಪುರಂ ಕ್ಷೇತ್ರದ ಬಿಜೆಪಿ ಶಾಸಕ ಬೈರತಿ ಬಸವರಾಜ್ ಮತ್ತು ಎಂಎಲ್ ಸಿ ನಾರಾಯಣಸ್ವಾಮಿ ನಡುವೆ ಗಲಾಟೆ ಆಗಿದೆ.
ರಸ್ತೆಗುಂಡಿ ಮುಚ್ಚಿಲ್ಲ ಅಂತಾ ಮೂಲಭೂತ ಸಮಸ್ಯೆಗಳ ಬಗ್ಗೆ ಸಚಿವರಿಗೆ ಸ್ಥಳೀಯರು ದೂರು ನೀಡಲು ಮುಂದಾಗಿದ್ದಾರೆ. ಈ ವೇಳೆ ನಾರಾಯಣ ಸ್ವಾಮಿ ಸ್ಥಳೀಯರಿಗೆ ಶಾಸಕರು ಏನು ಕೆಲಸ ಮಾಡಿಲ್ಲ ಅಂತಾ ಬೈದಿದ್ದಾರೆ. ಮಧ್ಯೆ ಪ್ರವೇಶಿಸಿದ ಶಾಸಕ ಬೈರತಿ ಬಸವರಾಜ್ ನಡುವೆ ಗಲಾಟೆ ಆಗಿದೆ. ಕೈ ಕೈ ಮಿಲಾಯಿಸುವ ಹಂತಕ್ಕೆ ಗಲಾಟೆ ಆಗಿ ಪೊಲೀಸ್ರು ಮಧ್ಯೆ ಪ್ರವೇಶಿಸಿ ಗಲಾಟೆ ಬಿಡಿಸಿದ್ದಾರೆ.
ಇನ್ನೂ ಗಲಾಟೆ ಆದ ಬಳಿಕ ಸಚಿವ ಕೃಷ್ಣಬೈರೇಗೌಡ ಮುಂದೆ ಬೈರತಿ ಬಸವರಾಜ್ ಪ್ರಶ್ನೆ ಮಾಡಿದ್ದಾರೆ. ಹೀಗೆ ಮಾತಾಡೋದು ಸರಿನಾ ಹೇಗೆ ಮಾತಾಡ್ತಾರೆ. ನಾನು ನನ್ನ ಕಾರ್ಯಕರ್ತರನ್ನ ಕರೆಸುತ್ತಿದ್ದೆ. ನಿಮ್ಮನ್ನ ಪ್ರಶ್ನೆ ಮಾಡೋಥರ ಮಾಡ್ತಿದ್ದೆ. ನಿಮ್ಮ ಬಗ್ಗೆ ಗೌರವ ಇದೆ ಈ ರೀತಿ ಮಾತಾಡೋದು ಸರಿ ಅಲ್ಲ ಅಂತಾ ಸಚಿವರ ಮುಂದೆ ವಾಕ್ಸಮರ ಮಾಡಿದ್ದಾರೆ. ನಂತರ ಸಚಿವ ಕೃಷ್ಣಬೈರೇಗೌಡ ಸುಮ್ನಿರಿ ಬಸಣ್ಣ ಅಂತಾ ಸಮಾಧಾನ ಪಡಿಸುವ ಕೆಲಸ ಆಗಿದೆ.
ಇನ್ನೂ ಈ ಘಟನೆಗೆ ಸಂಬಂಧಿಸಿದಂತೆ ಸಚಿವ ಕೃಷ್ಣಬೈರೇಗೌಡ ಪ್ರತಿಕ್ರಿಯಿಸಿ, ಶಾಸಕರು ನಮ್ಮ ಜೊತೆ ಸೇರಿದ್ರೂ ಅಭಿವೃದ್ಧಿ ಬಗ್ಗೆ ನಾವು ಮಾತಾನಾಡಿದ್ವಿ. ರಾಜಕೀಯ ಬೇರೆ ಅಭಿವೃದ್ಧಿ ಬೇರೆ. ಅವರು ಅನೇಕ ಸಲಹೆ ನೀಡಿದ್ರೂ. ಆದ್ರೆ ಕೆಲವೊಂದು ಭಾರೀ ವೈಮನಸ್ಸು ಬರುತ್ತೆ, ಆದ್ರೆ ಅದು ಅಭಿವೃದ್ಧಿ ವಿಚಾರದಲ್ಲಿ ಆಗಬೇಕು. ಅವರಿಗೂ ತಿಳಿ ಹೇಳುವ ಕೆಲಸ ಮಾಡಿದ್ದೇನೆ ಅಂದರು.
ಇನ್ನೂ ಗಲಾಟೆ ಮಾಡಿದ ನಾರಾಯಣ ಸ್ವಾಮಿ ವಿರುದ್ಧ ಬೈರತಿ ಬಸವರಾಜ್ ಆಕ್ರೋಶ ಹೊರಹಾಕಿದ್ದಾರೆ. ನಮ್ಮ ಭಿಕ್ಷೆಯಿಂದ ಎಂಎಲ್ಸಿ ಆಗಿದ್ದಾನೆ. ನಮ್ಮ ಜೊತೆ ಇದ್ದವನು, ಸಮಸ್ಯೆ ಹೇಳೋಕೆ ಹೋದರೆ ನಮ್ಮ ಹುಡುಗನ ಮೇಲೆನೆ ಗಲಾಟೆ ಮಾಡಿ ಹಲ್ಲೆ ಮಾಡೋಕೆ ಬರ್ತಾನೆ. ನಾನು ಸಾವಿರಾರು ಕಾರ್ಯಕರ್ತರನ್ನ ಸೇರಿಸುತ್ತಾ ಇದ್ದೆ, ಈ ರೀತಿ ಮಾಡೋದು ಎಷ್ಟು ಸರಿ ಅಂತಾ ಅಸಮಾಧಾನ ಹೊರಹಾಕಿದ್ದಾರೆ.
ಒಟ್ಟಾರೆ ಬಿಜೆಪಿ ಶಾಸಕರ ಕಾಂಗ್ರೆಸ್ ಎಂಎಲ್ಸಿ ನಡುವೆ ಗಲಾಟೆ ಆಗಿದೆ. ಇದಕ್ಕೆ ಹೇಗೆ ಉತ್ತರ ಕೊಡಬೇಕು ಅಂತಾ ಗೊತ್ತಿದೆ ಅಂತಾ ಹೈರತಿ ಬಸವರಾಜ್ ಎಚ್ಚರಿಸಿದ್ದಾರೆ. ಬಹಿರಂಗವಾಗಿ ಶುರುವಾದ ಗಲಾಟೆ ಎಲ್ಲಿಗೆ ಹೋಗಿ ತಲುಪಲಿದೆಯೋ ಕಾದು ನೋಡಬೇಕಿದೆ.

