ವಾಷ್ಟಿಂಗನ್: ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ನ (Lawrence Bishnoi Gang) ಕಿಂಗ್ ಪಿನ್ ಗ್ಯಾಂಗ್ಸ್ಟರ್ ಹರಿರಾಮ್ ಅಲಿಯಾಸ್ ಹ್ಯಾರಿ ಬಾಕ್ಸರ್ನನ್ನು (Harry Boxer) ಅಮೆರಿಕದ ಅಧಿಕಾರಿಗಳು ಕ್ಯಾಲಿಫೋರ್ನಿಯಾದಲ್ಲಿ ವಶಕ್ಕೆ ಪಡೆದಿದ್ದಾರೆ.
ದೆಹಲಿ ಪೊಲೀಸ್ ಸ್ಪೆಷಲ್ ಸೆಲ್ (Delhi Police Special Cell) ಹಾಗೂ ಹರಿಯಾಣ ಪೊಲೀಸರ ಸ್ಪೆಷಲ್ ಟಾಸ್ಕ್ ಫೋರ್ಸ್ ನೀಡಿದ ಖಚಿತ ಮಾಹಿತಿಯ ಮೇರೆಗೆ ಶುಕ್ರವಾರ (ನ.6) ರಾತ್ರಿ ಅಮೆರಿಕದ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ, ವಶಕ್ಕೆ ಪಡೆದಿದ್ದಾರೆ. ಇದನ್ನೂ ಓದಿ: 2029ರವರೆಗೆ ಕಾಯಿರಿ, ರಾಹುಲ್ ಗಾಂಧಿ ಪ್ರಧಾನಿ ಆಗುವುದು ಖಚಿತ: ಅಮಿತ್ ಶಾಗೆ ಕೆ.ಸಿ.ವೇಣುಗೋಪಾಲ್ ತಿರುಗೇಟು
ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ನೊಂದಿಗೆ ನಿಕಟ ಸಂಪರ್ಕ ಹೊಂದಿದ್ದ ಗ್ಯಾಂಗ್ಸ್ಟರ್ ಹರಿರಾಮ್ ಅಲಿಯಾಸ್ ಹ್ಯಾರಿ ಬಾಕ್ಸರ್ ಸುಲಿಗೆ ಮತ್ತು ಬಾಲಿವುಡ್ನ ಸ್ಟಾರ್ಗಳಿಗೆ ಬೆದರಿಕೆ ಸೇರಿದಂತೆ ಅನೇಕ ಪ್ರಕರಣಗಳ ಆರೋಪಿಯಾಗಿದ್ದ. ಅಮೆರಿಕದಲ್ಲಿ ಕುಳಿತುಕೊಂಡೇ ಬಾಲಿವುಡ್ನ ಹಲವರಿಗೆ ಸಾಮಾಜಿಕ ಜಾಲತಾಣಗಳು ಹಾಗೂ ಆಡಿಯೋ ಸಂದೇಶಗಳ ಮೂಲಕ ಬೆದರಿಕೆ ಹಾಕುತ್ತಿದ್ದ ಎಂದು ತಿಳಿದುಬಂದಿದೆ.ಇದನ್ನೂ ಓದಿ: ತಂದೆಯ ತಿಥಿ ಕಾರ್ಯಕ್ಕೆ ಸಾಕ್ಷಿ ಪ್ರದೋಷ್ಗೆ ಕೋರ್ಟ್ 5 ದಿನ ಷರತ್ತುಬದ್ಧ ಅನುಮತಿ
ಹ್ಯಾರಿ ಬಾಕ್ಸರ್ನ ನಿಜವಾದ ಹೆಸರು ಹರಿಚಂದ್ ಜಾಟ್. ಈತ ರಾಜಸ್ಥಾನದ ಕೋಟ್ಪುಟ್ಲಿ-ಬೆಹ್ರೋಡ್ ಜಿಲ್ಲೆಯ ಬಾಮ್ಸುರ್ ಪ್ರದೇಶದವನು. ಜೈಪೂರ್ನಲ್ಲಿ ವಾಸವಾಗಿದ್ದಾಗ ಬಾಕ್ಸಿಂಗ್ ಕಲಿತಿದ್ದರಿಂದ ಈತನಿಗೆ `ಬಾಕ್ಸರ್’ ಎಂಬ ಅಡ್ಡಹೆಸರು ಬಂದಿತ್ತು. ಈತ ಬಾಕ್ಸಿಂಗ್ ತರಬೇತುದಾರನಾಗಿ ಕೆಲಸ ಮಾಡಿದ್ದಲ್ಲದೆ, ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ತಯಾರಿ ನಡೆಸಿದ್ದ.
ಈತ ಯಾವಾಗ ವಿದೇಶಕ್ಕೆ ಹೋದನು ಎಂಬುದು ಸ್ಪಷ್ಟವಾಗಿಲ್ಲವಾದರೂ, ವಿದೇಶದಲ್ಲಿದ್ದುಕೊಂಡೇ ದೊಡ್ಡ ಜಾಲವನ್ನು ನಡೆಸುತಿದ್ದ ಮತ್ತು ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ನ ಚಟುವಟಿಕೆಗಳಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದ ಎಂದು ಪೊಲೀಸರು ಶಂಕಿಸಿದ್ದಾರೆ. ದೆಹಲಿ, ರಾಜಸ್ಥಾನ, ಪಂಜಾಬ್ ಮತ್ತು ಹರಿಯಾಣದಲ್ಲಿ ಈತನ ಹೆಸರು ಹಲವು ಅಪರಾಧ ಪ್ರಕರಣಗಳಲ್ಲಿ ಕೇಳಿಬಂದಿದೆ. ಕೆನಡಾದಲ್ಲಿರುವ ಹಾಸ್ಯನಟ ಕಪಿಲ್ ಶರ್ಮಾ ಅವರ ಕೆಫೆ ಮೇಲೆ ನಡೆದ ಗುಂಡಿನ ದಾಳಿಯಲ್ಲೂ ಈತನ ಹೆಸರು ಕೇಳಿಬಂದಿತ್ತು. ಸದ್ಯ ಸಿಬಿಐ ಸಹಾಯದಿಂದ ಹ್ಯಾರಿ ಬಾಕ್ಸರ್ನನ್ನು ಕಾನೂನುಬದ್ಧವಾಗಿ ಭಾರತಕ್ಕೆ ಕರೆತರಲು ಭಾರತೀಯ ತನಿಖಾ ಸಂಸ್ಥೆಗಳು ಸಿದ್ಧತೆ ನಡೆಸಿವೆ.ಇದನ್ನೂ ಓದಿ: ಒಂದೇ ಕುಟುಂಬದ ಏಳು ಜನರ ನರಮೇಧ – ಶವದ ವಾಸನೆ ಬರದಂತೆ 10 ಲೇಯರ್ ಟೇಪ್ ಸುತ್ತಿದ್ದ ಪಾಪಿ
