-ಆರೋಪ ತಳ್ಳಿಹಾಕಿದ ಬಿಜೆಪಿ ನಾಯಕ ದಿಲೀಪ್ ಘೋಷ್
ಕೋಲ್ಕತ್ತಾ: ತೃಣಮೂಲ ಕಾಂಗ್ರೆಸ್ ನಾಯಕ, ಸಂಸದ ಅಭಿಷೇಕ್ ಬ್ಯಾನರ್ಜಿ (Abhishek Banerjee) ಅವರು ನನ್ನ ಕೋಲ್ಕತ್ತಾ (Kolkatta) ಮನೆಯ ಮೇಲೆ ದಾಳಿಯಾಗಿದ್ದು, ಇದಕ್ಕೆ ಬಿಜೆಪಿಯೇ (BJP) ಕಾರಣ. ಕಳೆದ ಆರು ತಿಂಗಳಲ್ಲಿ ನನ್ನ ಜೀವಕ್ಕೆ ಕುತ್ತು ತರಲು ನಡೆಸಿದ ಏಳನೇ ಇದಾಗಿದೆ ಎಂದು ಆರೋಪಿಸಿದ್ದಾರೆ.
ಇಂದು (ನ.7) ಎಕ್ಸ್ ಖಾತೆಯಲ್ಲಿ ಕೆಲ ವಿಡಿಯೋಗಳನ್ನು ಹಂಚಿಕೊಂಡಿರುವ ಅವರು, ನನ್ನ ಹುಟ್ಟುಹಬ್ಬ ಆಚರಿಸುತ್ತಿದ್ದಾಗ ರಾತ್ರಿ 2 ಗಂಟೆಯ ಸುಮಾರಿಗೆ ಬಿಜೆಪಿ ಕಾರ್ಯಕರ್ತರು ಕೋಲ್ಕತ್ತಾದ ಕಾಳಿಘಾಟ್ ನಿವಾಸದ ಮೇಲೆ ದಾಳಿ ನಡೆಸಿದ್ದಾರೆ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ:Ben galuru Murder Horror | ಮೈಸೂರಿನ ಚಾಮುಂಡಿಬೆಟ್ಟ, ಚಾರ್ಮಾಡಿ ಘಾಟ್ನಲ್ಲಿ ಮೃತದೇಹ ಎಸೆದಿರೋ ಶಂಕೆ!
ಒಬ್ಬ ಚುನಾಯಿತ ಸಂಸತ್ ಸದಸ್ಯರಿಗೆ ಈ ರೀತಿ ಆದರೆ, ಇನ್ನು ಪಶ್ಚಿಮ ಬಂಗಾಳದ ಸಾಮಾನ್ಯ ಜನರ ಪಾಡೇನು? ಕಳೆದ ಆರು ತಿಂಗಳಲ್ಲಿ ನನ್ನ ಜೀವದ ಮೇಲೆ ನಡೆದ ಏಳನೇ ಯತ್ನವಿದು. ಆದರೂ ಯಾವುದೇ ಪೊಲೀಸ್ ಕ್ರಮವಾಗಲಿ ಅಥವಾ ನ್ಯಾಯಾಂಗದ ಮಧ್ಯಪ್ರವೇಶವಾಗಲಿ ನಡೆದಿಲ್ಲ. ನ್ಯಾಯಾಂಗವು ಮೌನವಾಗಿರುವುದರಿಂದ ರಾಜ್ಯಾದ್ಯಂತ ಪುಂಡರು ಅರಾಜಕತೆ ಸೃಷ್ಟಿಸುತ್ತಿದ್ದಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಿಜೆಪಿಯ ನಾಯಕ ದಿಲೀಪ್ ಘೋಷ್ ಈ ಆರೋಪಗಳನ್ನು ತಳ್ಳಿಹಾಕಿದ್ದು, ಯಾವ ರಾಜಕಾರಣಿಯ ಹುಟ್ಟುಹಬ್ಬವನ್ನಾದರೂ ರಸ್ತೆಬದಿಯಲ್ಲಿ ಆಚರಿಸುವುದನ್ನು ನಾವು ನೋಡಿರುವುದು ಇದೆ ಮೊದಲು. ಅಭಿಷೇಕ್ ಬ್ಯಾನರ್ಜಿ ಅವರನ್ನು ಕೊಲ್ಲಲು ಯಾರಿಗೆ ಸಮಯವಿದೆ? ಅವರಿಗೆ ಬೇರೆ ಯಾವುದೇ ವಿಷಯಗಳಿಲ್ಲದ ಕಾರಣ, ಜನರ ದಿಕ್ಕು ತಪ್ಪಿಸಲು ಇಂತಹ ಸುಳ್ಳು ಆರೋಪಗಳನ್ನು ಮಾಡಲಾಗುತ್ತಿದೆ ಎಂದು ಲೇವಡಿ ಮಾಡಿದ್ದಾರೆ.ಇದನ್ನೂ ಓದಿ: ದೆಹಲಿಯಲ್ಲಿ ವಿಷವಾಗುತ್ತಿದೆ ಉಸಿರಾಡುವ ಗಾಳಿ – ದೀಪಾವಳಿಗೂ ಮುನ್ನವೇ ವಾಯುಗುಣಮಟ್ಟ ಕಳಪೆ!
