ಬಾಲಿವುಡ್ ನಟ ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯಾ ರೈ ಬಚ್ಚನ್ ಇತ್ತೀಚೆಗೆ ಮನೀಶ್ ಮಲ್ಹೋತ್ರಾ ಆಯೋಜಿಸಿದ್ದ ತಾರಾಬಳಗದ ದೀಪಾವಳಿ ಪಾರ್ಟಿಯಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಸೆಲೆಬ್ರೇಷನ್ನಲ್ಲಿ ಭಾಗಿಯಾದ ವೇಳೆ ಅವರಿಬ್ಬರು ಒಟ್ಟಾಗಿದ್ದ ಫೋಟೋ ಮತ್ತು ವಿಡಿಯೋಗಳು ಸೋಷಿಯಲ್ ಮೀಡಿಯಾಗಳಲ್ಲಿ ಗಮನ ಸೆಳೆಯುತ್ತಿವೆ.
ಪಾರ್ಟಿಗೆ ಅಭಿಷೇಕ್ ಬಚ್ಚನ್ ಬ್ಲ್ಯಾಕ್ ಕುರ್ತಾ ಸೆಟ್ ಧರಿಸಿ ಬಂದಿದ್ದರು. ಐಶ್ವರ್ಯಾ ರೈ ಗೋಲ್ಡನ್ ವಿನ್ಯಾಸವಿರುವ ಕೆಂಪು ಸೀರೆಯಲ್ಲಿ ಮಿಂಚಿದರು. ಲೂಸ್ ಹೇರ್, ರೆಟ್ ಲಿಪ್ಸ್ಟಿಕ್ ಫೇರ್ ಮೇಕಪ್ ಅವರ ಲುಕ್ಗೆ ಮೆರುಗು ನೀಡಿತ್ತು.
ಇತ್ತೀಚಿನ ವರ್ಷಗಳಲ್ಲಿ ಅಭಿಷೇಕ್ ಮತ್ತು ಐಶ್ವರ್ಯಾ ಒಟ್ಟಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದು ಕಡಿಮೆ. ಹೀಗಾಗಿ ಈ ಬಾರಿಯ ದೀಪಾವಳಿ ಪಾರ್ಟಿಯಲ್ಲಿ ಅವರಿಬ್ಬರು ಒಟ್ಟಾಗಿ ಕಾಣಿಸಿಕೊಂಡದ್ದು ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದೆ. ಇದನ್ನೂ ಓದಿ: ಭಾರತದಲ್ಲಿ ಮೊದಲ ದಿನ 77.50 ಕೋಟಿ ಕಲೆಕ್ಷನ್ ಮಾಡಿದ ‘ರಾಮಾಯಣ’ – ಕರ್ನಾಟಕದಲ್ಲಿ ಗಳಿಸಿದ್ದೆಷ್ಟು?
ಐಶ್ವರ್ಯ ರೈ ಯಾವುದೇ ಕಾರ್ಯಕ್ರಮಗಳಿಗೆ ಹೋದರೂ ಮಗಳು ಆರಧ್ಯ ಜೊತೆ ಕಾಣಿಸಿಕೊಂಡಿದ್ದರು. ಅಷ್ಟೇ ಅಲ್ಲ ಕೆಲವು ಬಾರಿ ಐಶ್ವರ್ಯ ಮತ್ತು ಅಭಿಷೇಕ್ ಬೇರೆ ಆಗುತ್ತಿದ್ದಾರೆ ಎಂಬ ಮಾತುಗಳು ಸಹ ಆಗಾಗ ಕೇಳಿಬರುತ್ತಿದ್ದವು. ಆದರೆ, ಅವರಿಬ್ಬರೂ ಈ ವಿಷಯದ ಕುರಿತು ಎಂದೂ ಪ್ರತಿಕ್ರಿಯೆ ನೀಡಿರಲಿಲ್ಲ. ಈಗ ದಂಪತಿ ಒಟ್ಟಾಗಿ ಕಾಣಿಸಿಕೊಂಡಿದ್ದು, ಎಲ್ಲ ಊಹಾಪೋಹಗಳಿಗೆ ತೆರೆ ಎಳೆದಂತಾಗಿದೆ. ಇದನ್ನೂ ಓದಿ: ಜಾರ್ಖಂಡ್ನಲ್ಲಿ ಭೀಕರ ರಸ್ತೆ ಅಪಘಾತ – ವೇಗದ ಟ್ರಕ್ ಹರಿದು ಮೂವರು ಮಕ್ಕಳು ಸೇರಿ 7 ಮಂದಿ ಸಾವು
