ಮುಂಬೈ: ನಗರದ ಹಲವು ಪ್ರಮುಖ ಸ್ಥಳಗಳಾದ ನಟ ಅಮಿತಾಬ್ ಬಚ್ಚನ್ (Amitabh Bachchan) ಬಂಗಲೆ ಜಲ್ಸಾ, ಬಾಂಬೆ ಹೈಕೋರ್ಟ್ (Bombay High Court) ಮತ್ತು ಬಾಂಬೆ ಸ್ಟಾಕ್ ಎಕ್ಸ್ಚೇಂಜ್(BSE) ಗಳನ್ನು ಗುರಿಯಾಗಿಸಿಕೊಂಡು ಬಾಂಬ್ ಬೆದರಿಕೆ ಬಂದಿದ್ದು, ನಗರದಲ್ಲಿ ಪೊಲೀಸ್ ಕಟ್ಟೆಚ್ಚರ ವಿಹಿಸಿಲಾಗಿದೆ.
ನ್ಯಾಯಾಲಯಕ್ಕೆ ಬೆದರಿಕೆ ಇ-ಮೇಲ್ ಬಂದಿದ್ದು, ನಗರದ ಕನನಿಬಿಡ ಮೂರು ಸ್ಥಳಗಳು ಸೇರಿದಂತೆ ವರ್ಲಿ ರೇಸ್ಕೋರ್ಸ್ನಲ್ಲಿ ಬಾಂಬ್ ದಾಳಿ ನಡೆಯುವ ಬಗ್ಗೆ ಎಚ್ಚರಿಕೆ ನೀಡಲಾಗಿದೆ. ಬೆದರಿಕೆ ಬಂದ ನಂತರ ಮುಂಬೈ ಪೊಲೀಸರು ತನಿಖೆ ಆರಂಭಿಸಿದ್ದು, ಈ ಬೆದರಿಕೆ ಇ-ಮೇಲ್ ಹಿಂದಿರುವವರು ಯಾರಿದ್ದಾರೆ ಎಂದು ತನಿಖೆ ಕೈಗೊಂಡಿದ್ದಾರೆ.
ಇದು ಅಮಿತಾಬ್ ಬಚ್ಚನ್ ಅವರನ್ನು ಗುರಿಯಾಗಿಸಿಕೊಂಡು ಬಂದಿರುವ ಎರಡನೇ ಬೆದರಿಕೆ. ಅ. 22ರಂದು ನಗರದ ಶಾಲೆಗೆ ಬೆದರಿಕೆ ಇ-ಮೇಲ್ ಕಳುಹಿಸಲಾಗಿದ್ದು, ಅದರಲ್ಲಿ ಹಿರಿಯ ನಟನ ಹೆಸರನ್ನು ಉಲ್ಲೇಖಿಸಲಾಗಿತ್ತು. ಆದರೆ, ಆ ಸಮಯದಲ್ಲಿ, ಬಚ್ಚನ್ ಅವರಿಗೆ ಯಾವುದೇ ನೇರ ಬೆದರಿಕೆ ಕರೆ ಬಂದಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದರು.
ಅಕ್ಟೋಬರ್ 18 ರಂದು ನಟ ಟೈಗರ್ ಶ್ರಾಫ್ ಅವರ ಕಾರಿನ ಮೇಲೆ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಗುಂಡಿನ ದಾಳಿ ನಡೆಸಿದ ನಂತರ ಸೆಲೆಬ್ರಿಟಿಗಳ ಸುರಕ್ಷತೆಯ ಬಗ್ಗೆ ಹೆಚ್ಚಿನ ಕಳವಳ ವ್ಯಕ್ತವಾಗಿದೆ. ಇವೆಲ್ಲವುಗಳ ನಡುವೆಯೇ ಈ ಬೆದರಿಕೆ ಇ-ಮೇಲ್ ಈಗ ಮುಂಬೈ ಪೊಲೀಸರಿಗೆ ಮತ್ತೊಂದು ತಲೆನೋವಾಗಿದೆ.ಇದನ್ನೂ ಓದಿ: ಪಾಕ್ನ ವಿವಾದಿತ ಧರ್ಮಗುರು ಅನುಯಾಯಿ ಸಮಾಧಿ ಮೇಲೆ ಕಲ್ಮ ವಿರೋಧಿ ಬರಹ – ಚಿಕ್ಕಮಗಳೂರಲ್ಲಿ ಬೂದಿ ಮುಚ್ಚಿದ ಕೆಂಡ
ನಟರಾದ ತುಷಾರ್ ಕಪೂರ್ ಮತ್ತು ಆಯುಷ್ಮಾನ್ ಖುರಾನಾ ಅವರಿಗೆ ಬಿಷ್ಣೋಯ್ ಗ್ಯಾಂಗ್ ಹೆಸರಿನಲ್ಲಿ ಬೆದರಿಕೆ ಕರೆ ಬಂದಿದೆ. ಅಷ್ಟೇ ಅಲ್ಲ ತನಿಖೆಯಲ್ಲಿ ಬೆಂಗಳೂರು ಮೂಲದ 30 ವರ್ಷದ ಟೆಕ್ಕಿಯನ್ನ ಮುಂಬೈ ಅಪರಾಧ ವಿಭಾಗ ಬುಧವಾರ ಬಂಧಿಸಿದೆ. ಪ್ರಾಥಮಿಕ ತನಿಖೆಗಳಲ್ಲಿ ಬಿಷ್ಣೋಯ್ ಗ್ಯಾಂಗ್ ಜೊತೆ ಆತನ ಸಂಪರ್ಕದ ಬಗ್ಗೆ ಯಾವುದೇ ಪುರಾವೆ ಕಂಡುಬಂದಿಲ್ಲ.ಇದನ್ನೂ ಓದಿ: 3 ಕೋಟಿ ಮೌಲ್ಯದ ಆಸ್ತಿಗಾಗಿ ಬೆಂಗಳೂರಿನಲ್ಲಿ 7 ಜನರ ನರಮೇಧ!
