– ಶವ ಸಾಗಿಸಲು ಖತರ್ನಾಕ್ ಪ್ಲ್ಯಾನ್ ಮಾಡಿದ್ದ ಪಾತಕಿ
ಚಿಕ್ಕಬಳ್ಳಾಪುರ: ಬೆಂಗಳೂರಲ್ಲಿ (Bengaluru Mass Murder) ಏಳು ಜನರ ಹತ್ಯೆ ಪ್ರಕರಣಕ್ಕೆ ಮತ್ತೊಂದು ರೋಚಕ ತಿರುವು ಸಿಕ್ಕಿದೆ. ಮೃತದೇಹದಿಂದ ರಕ್ತ ಸೋರಬಾರದು, ಯಾರಿಗೂ ಅನುಮಾನ ಬರದಂತೆ ಶವ ಸಾಗಿಸಲು ಹಂತಕ ಮಾಡಿದ್ದ ಖತರ್ನಾಕ್ ಐಡಿಯಾ ವಿಚಾರಣೆ ವೇಳೆ ಬೆಳಕಿಗೆ ಬಂದಿದೆ.
ಹಂತಕ ಇಂದುಶೇಖರ್, ಶವಗಳನ್ನು ಸಾಗಿಸಲು ಖತರ್ನಾಕ್ ಐಡಿಯಾ ಮಾಡಿದ್ದ. ಶವ ಸಾಗಿಸುವಾಗ ಕಾರಿನಲ್ಲಿ ರಕ್ತ ಸೋರಬಾರದು, ಯಾರಿಗೂ ಅನುಮಾನ ಬರಬಾರದೆಂದು 9 ಪ್ಲಾಸ್ಟಿಕ್ ಚೀಲಗಳಲ್ಲಿ ಶವಗಳನ್ನು ತುಂಬಿದ್ದ. ಇದನ್ನೂ ಓದಿ: ಅ.16ರಿಂದ 31ರವರೆಗೆ 15 ದಿನದಲ್ಲಿ 7 ಕೊಲೆ – ನರಮೇಧಕ್ಕೆ ಮಗಳು ಸಾಥ್, ತಪ್ಪೊಪ್ಪಿಕೊಂಡ ಹಂತಕ
ನಂದಿಬೆಟ್ಟದಲ್ಲಿ ಬಾಲಕ ಪುನೀತ್ ಮೃತದೇಹ ಪತ್ತೆಯಾಗಿತ್ತು. ಶವವನ್ನು ಆರೋಪಿ 9 ಪ್ಲಾಸ್ಟಿಕ್ ಚೀಲಗಳಲ್ಲಿ ಹಾಕಿದ್ದ. ಮೊದಲು ಬೆಡ್ಶೀಟ್ನಲ್ಲಿ ಮೃತದೇಹ ಸುತ್ತಿದ್ದ. ನಂತರ ಒಂದರ ನಂತರ ಒಂದು ಚೀಲಗಳಲ್ಲಿ ಶವ ತುಂಬಿ ಬಿಸಾಡಿದ್ದ.
ಶವಕ್ಕೆ 9 ಸುತ್ತಿನ ಕೋಟೆ ನಿರ್ಮಿಸಿ ನಂತರ ಶವ ಸಾಗಾಟ ಮಾಡಿದ್ದ. ಪೊಲೀಸರ ತನಿಖೆ ವೇಳೆ ಆರೋಪಿಯ ಖತರ್ನಾಕ್ ಐಡಿಯಾ ಬೆಳಕಿಗೆ ಬಂದಿದೆ. ಶವಗಳ ಸಾಗಾಟದ ವೇಳೆ ಯಾರಾದ್ರು ಕೇಳಿದರೆ ಬಟ್ಟೆಗಳ ಮೂಟೆ ಎಂದು ಹೇಳಲು ಯೋಜನೆ ರೂಪಿಸಿದ್ದ. ಕೊಲೆಗೂ ಮುನ್ನ ಚೀಲಗಳನ್ನು ಖರೀದಿ ಮಾಡಿದ್ದ. ಇದನ್ನೂ ಓದಿ: ನಿಮ್ಮಮ್ಮನ ನಡತೆ ಸರಿಯಿಲ್ಲ ಅಂತಾ ಮಗಳ ಮನಸ್ಸಿನಲ್ಲಿ ವಿಷಬೀಜ ಬಿತ್ತಿದ್ದ ತಂದೆ – ಪತ್ನಿ ವಿರುದ್ಧ ನಿರಂತರ ಬ್ರೈನ್ವಾಷ್!
