ಚಂಡೀಗಢ: ಚಲಿಸುತ್ತಿದ್ದ ಕರ್ಮಭೂಮಿ ಎಕ್ಸ್ಪ್ರೆಸ್ (Karmabhoomi Express) ರೈಲಿನ 4 ಬೋಗಿಗಳು ಬೆಂಕಿ ಹೊತ್ತಿ ಉರಿದ (Fire Accident) ಘಟನೆ ಪಂಜಾಬ್ನ (Punjab) ಪಟಿಯಾಲಾ ಜಿಲ್ಲೆಯ ಬಸಂತಪುರ ರೈಲ್ವೆ ನಿಲ್ದಾಣದ ಬಳಿ ನಡೆದಿದೆ.
12508 ಸಂಖ್ಯೆಯ ರೈಲು ಅಮೃತಸರದಿಂದ ನ್ಯೂ ಜಲ್ಪೈಗುರಿಗೆ ತೆರಳುತ್ತಿತ್ತು. ಸುಮಾರು ಮಧ್ಯಾಹ್ನ 1:10ರ ವೇಳೆಗೆ ರೈಲಿನ ಬೋಗಿಗಳಲ್ಲಿ ಹಠಾತ್ ಆಗಿ ಬೆಂಕಿ ಕಾಣಿಸಿಕೊಂಡಿದೆ. ರೈಲಿನ ಎಂಜಿನ್ನಿಂದ 5ನೇ ಕೋಚ್ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಲೋಕೋ ಪೈಲಟ್ ರೈಲು ನಿಲ್ಲಿಸಿದ್ದು, ಪ್ರಯಾಣಿಕರನ್ನು ಸುರಕ್ಷಿತವಾಗಿ ಕೆಳಗಿಳಿಸಲಾಗಿದೆ. ಲೋಕೋ ಪೈಲಟ್ ಸಮಯಪ್ರಜ್ಞೆಯಿಂದ ಭಾರೀ ಅನಾಹುತವೊಂದು ತಪ್ಪಿದಂತಾಗಿದೆ. ಇದನ್ನೂ ಓದಿ: ಗಂಡ, ಇಬ್ರು ಮುತ್ತಿನಂಥ ಮಕ್ಕಳಿದ್ರೂ ʻಪರಸಂಗʼ – ವಿವಾಹಿತೆ ಜೊತೆ ಯುವಕ ಆತ್ಮಹತ್ಯೆ; ಅಕ್ರಮ ಸಂಬಂಧಕ್ಕೆ ಬಿತ್ತು ಹೆಣ
ಈ ಅವಘಡದಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಅಲ್ಲದೇ ಯಾರಿಗೂ ಗಾಯಗಳಾಗಿಲ್ಲ. ಶಾರ್ಟ್ ಸರ್ಕ್ಯೂಟ್ನಿಂದ ಬೆಂಕಿ ಕಾಣಿಸಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ರೈಲು ಸಿಬ್ಬಂದಿ ಬೆಂಕಿ ಹೊತ್ತಿದ್ದ ಕೋಚ್ಗಳನ್ನು ರೈಲಿನಿಂದ ಬೇರ್ಪಡಿಸಿ, ಬೆಂಕಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ. ಇದನ್ನೂ ಓದಿ: 3 ಕೋಟಿ ಮೌಲ್ಯದ ಆಸ್ತಿಗಾಗಿ ಬೆಂಗಳೂರಿನಲ್ಲಿ 7 ಜನರ ನರಮೇಧ!
