ನಾಲ್ಕು ಗೋಡೆಗಳ ನಡುವೆ ಹೊರಜಗತ್ತಿನ ಸಂಪರ್ಕವೇ ಇಲ್ಲದೆ ಕಳೆಯುವ ದಿನಗಳು, ಕುಟುಂಬದ ಒಂದು ಮಾತಿಗಾಗಿ, ಆಪ್ತರ ಸ್ಪರ್ಶಕ್ಕಾಗಿ ಹಪಹಪಿಸುವ ಮನಸ್ಸುಗಳು. ಇಂಥ ಹೊತ್ತಿನಲ್ಲಿ ಮನೆಯವರ ಪ್ರೀತಿಯ ಪತ್ರ ಕೈಗೆ ಸಿಕ್ಕರೆ ಅದೇ ಒಂದು ದೊಡ್ಡ ಖುಷಿ.
ಈ ವಾರ ಬಿಗ್ಬಾಸ್ (Bigg Boss) ಮನೆಯವರ ಪತ್ರಗಳನ್ನು ಕಳುಹಿಸಿಕೊಳ್ಳಿಟ್ಟಿದ್ದರು. ಆದರೆ ಅವುಗಳನ್ನು ಪಡೆಯೋದು ಅಷ್ಟೊಂದು ಸುಲಭವಲ್ಲ. ಎದುರಾಗುವ ಸವಾಲುಗಳನ್ನು ಎದುರಿಸಿ, ಪತ್ರ ಪಡೆಯಬೇಕು. ಅದರಂತೆ ಇಂದಿನ ಟಾಸ್ಕ್ನಲ್ಲಿ ಪತ್ರ ಪಡೆಯಲು ಸೌಂದರ್ಯ ಹಾಗೂ ಧನುಷ್ ಅಖಾಡಕ್ಕಿಳಿಯಲಿದ್ದಾರೆ. ಇದನ್ನೂ ಓದಿ: ಬಿಗ್ಬಾಸ್ ಮನೆಯಲ್ಲಿ ಮುದ್ದು ಸಂದೇಶ – ಮಗಳ ಧ್ವನಿ ಕೇಳಿ ಭಾವುಕರಾದ ಜಗ್ಗ ಮಮ್ಮಿ
ಪತ್ರಕ್ಕಾಗಿ risk!
ಬಿಗ್ ಬಾಸ್ | ಸೋಮ – ಶುಕ್ರ ರಾತ್ರಿ 9:30 | ಶನಿ – ಭಾನು ರಾತ್ರಿ 9:00
ಫುಲ್ಸ್ಟಾಪ್ ಇಲ್ಲದೇ 24X7 ನಾನ್ ಸ್ಟಾಪ್ ಮನರಂಜನೆ #JioHotstarನಲ್ಲಿ – https://t.co/96hibtGUwq
#BBK13 #ColorsKannada #ಕಲರ್ಫುಲ್ಕತೆ #colorfulstory #KichchaSudeepa #CKBBKPromo https://t.co/FcZsPfm9Z4
— Colors Kannada (@ColorsKannada) November 5, 2026
ಇದೇ ಮೊದಲ ಬಾರಿಗೆ ಬಿಗ್ಬಾಸ್ ಮನೆಯಿಂದಾಚೆ ಟಾಸ್ಕ್ವೊಂದನ್ನು ಇಟ್ಟಿದ್ದಾರೆ. ವಾಹಿನಿ ಪ್ರೋಮೊವೊಂದನ್ನು ರಿಲೀಸ್ ಮಾಡಿದ್ದು, ಬಿಗ್ಬಾಸ್ ಮನೆಯ ದ್ವಾರದ ಹಿಂದೆ ಒಂದು ಟಾಸ್ಕ್ ಅನ್ನು ಸೃಷ್ಟಿ ಮಾಡಲಾಗಿದೆ. ಅಲ್ಲಿ ಹಲವು ಪತ್ರಗಳನ್ನು ಇರಿಸಲಾಗಿದ್ದು, ಕೇವಲ ಒಂದು ನಿಮಿಷದಲ್ಲಿ ಹೋಗಿ ತಮ್ಮ ಮನೆಯವರ ಪತ್ರವನ್ನು ಹುಡುಕಿ ತರಬೇಕು. ಒಂದು ವೇಳೆ 1 ನಿಮಿಷದಲ್ಲಿ ಒಳಗೆ ಬರದಿದ್ದರೆ ಬಾಗಿಲು ಮುಚ್ಚುತ್ತದೆ.
ಸೌಂದರ್ಯ ಮತ್ತು ಧನುಷ್ ಕಣ್ಣುಗಳಲ್ಲಿ ಒಂದೆಡೆ ಮನೆಮಂದಿಯ ಮೇಲಿನ ಪ್ರೀತಿ, ಇನ್ನೊಂದೆಡೆ ಆಟದ ಉಳಿವಿನ ಆತಂಕ. ಕೇವಲ ಅರವತ್ತು ಸೆಕೆಂಡುಗಳು, ಹಲವು ಕಾಗದಗಳ ನಡುವೆ ತಮ್ಮವರ ಕೈಬರಹ ಹುಡುಕುವ ಅಸಾಧ್ಯ ಸವಾಲು. ಈ ಜೋಡಿ ಪತ್ರವನ್ನು ಹಿಡಿದು ಸುರಕ್ಷಿತವಾಗಿ ಒಳಗೆ ಕಾಲಿಡುತ್ತಾ? ಅಥವಾ ಬಾಗಿಲು ಮುಚ್ಚಿಕೊಳ್ಳುತ್ತಾ? ಇಂದಿನ ಸಂಚಿಕೆಯಲ್ಲಿ ಈ ಹೈ-ವೋಲ್ಟೇಜ್ ಎಮೋಷನಲ್ ಡ್ರಾಮಾ ಏನಾಗುತ್ತೆ ನೋಡಬಹುದು.ಇದನ್ನೂ ಓದಿ: ಸಹ ಸ್ಪರ್ಧಿ ಸಂತೋಷ್ ಜೊತೆ ಪ್ರೀತಿಯಲ್ಲಿ ಬಿದ್ದ ಫಾತಿಮಾ – ಬಿಗ್ ಬಾಸ್ ಮನೆಯಿಂದ ಹೊರಬರುವಂತೆ ಪೋಷಕರ ಒತ್ತಾಯ
ದೋಸ್ತಿಗಾಗಿ ಸುಸ್ತು ಹೊಡಿತಿದ್ದಾರೆ ಧನುಷ್-ತಾಂಡವ್ ರಾಮ್!
ಬಿಗ್ ಬಾಸ್ | ಸೋಮ – ಶುಕ್ರ ರಾತ್ರಿ 9:30 | ಶನಿ – ಭಾನು ರಾತ್ರಿ 9:00
ಫುಲ್ಸ್ಟಾಪ್ ಇಲ್ಲದೇ 24X7 ನಾನ್ ಸ್ಟಾಪ್ ಮನರಂಜನೆ #JioHotstarನಲ್ಲಿ – https://t.co/96hibtGUwq
#BBK13 #ColorsKannada #ಕಲರ್ಫುಲ್ಕತೆ #colorfulstory #KichchaSudeepa #CKBBKSP https://t.co/jrsGrXEgm6
— Colors Kannada (@ColorsKannada) November 4, 2026
