ಬಿಗ್ಬಾಸ್ (Bigg Boss) ಮನೆಯಲ್ಲಿ ಭಾವನಾತ್ಮಕ ಕ್ಷಣವೊಂದು ಎದುರಾಗಿದೆ. ಸ್ಪರ್ಧಿ ಜಗದೀಶ್ (Jagadeesh) ಅವರಿಗೆ ಮನೆಯಿಂದ ಪತ್ರ ಬಂದಿದ್ದು, ಮಗಳು ಬಿಡಿಸಿದ ಚಿತ್ರ ಹಾಗೂ ಆಕೆಯ ಮುದ್ದು ಧ್ವನಿ ಭಾವುಕರನ್ನಾಗಿಸಿದೆ.
ಈ ವಾರ ಸ್ಪರ್ಧಿಗಳಿಗೆ ಮನೆಯಿಂದ ಪತ್ರ ಬಂದಿದ್ದು, ಜಗದೀಶ್ ಅವರ ಮುದ್ದು ಮಗಳು ಬಿಡಿಸಿದ ಚಿತ್ರ ಹಾಗೂ ತೊದಲು ನುಡಿಯ ಧ್ವನಿ ಸಂದೇಶ ಸಿಕ್ಕಿದ್ದು, ಅದನ್ನು ಕಂಡು ಭಾವುಕರಾಗಿ ಕಣ್ಣೀರು ಹಾಕಿದ್ದಾರೆ. ಇದನ್ನೂ ಓದಿ: ಸ್ಪರ್ಧಿಗಳಿಗೆ ಪ್ರೀತಿಪಾತ್ರರ ಪತ್ರ – ಅಕ್ಷರಗಳು ಕಾಣದೇ ಕಣ್ಣೀರಾದ ಕಂಗಳು
ಮುಗ್ಧ ಮನಸಿನ ಕರೆಗೆ ಕರಗಿದ ಜಗದೀಶ!
ಬಿಗ್ ಬಾಸ್ | ಸೋಮ – ಶುಕ್ರ ರಾತ್ರಿ 9:30 | ಶನಿ – ಭಾನು ರಾತ್ರಿ 9:00
ಫುಲ್ಸ್ಟಾಪ್ ಇಲ್ಲದೇ 24X7 ನಾನ್ ಸ್ಟಾಪ್ ಮನರಂಜನೆ #JioHotstarನಲ್ಲಿ – https://t.co/96hibtGUwq
#BBK13 #ColorsKannada #ಕಲರ್ಫುಲ್ಕತೆ #colorfulstory #KichchaSudeepa #CKBBKPromo https://t.co/bhQbOn7ZD9
— Colors Kannada (@ColorsKannada) November 4, 2026
ಮಗಳು ಬಿಡಿಸಿಕೊಟ್ಟಿರುವ ಸುಂದರ ಚಿತ್ರವನ್ನು ಪ್ರೀತಿಯಿಂದ ಹಿಡಿದು ಮನೆಯವರಿಗೆ ತೋರಿಸಿದ ಜಗದೀಶ್, ಇದು ನನ್ನ ಮಗಳು, ನಾನು, ನನ್ನ ಮನೆ ಎಂದು ಸಂಭ್ರಮಿಸಿದ್ದಾರೆ. ಆ ಬಳಿಕ ಬಿಗ್ಬಾಸ್ ಆಡಿಯೋದ ಪ್ಲೇ ಮಾಡಿದ್ದು, ಜಗದೀಶ್ ಮಗಳು, ಅಪ್ಪಾ ನಾನು ಚೆನ್ನಾಗಿದ್ದೀನಿ, ನೀನು ಚೆನ್ನಾಗಿ ಆಟ ಆಡು, ಲವ್ ಯು ಅಪ್ಪಾ ಎಂದು ಮುದ್ದಾಗಿ ಹೇಳಿದ ಮಾತುಗಳನ್ನು ಕೇಳಿ, ಜಗದೀಶ್ ಕಣ್ಣೀರಿಟ್ಟಿದ್ದಾರೆ.
ಅಪ್ಪ-ಮಗಳ ಈ ಅಪರೂಪದ ಹಾಗೂ ಅದ್ಭುತ ಪ್ರೀತಿಯ ಬಾಂಧವ್ಯ ಕಂಡು ಮನೆಯಲ್ಲಿದ್ದ ಉಳಿದ ಸಹಸ್ಪರ್ಧಿಗಳು ಕಣ್ಣೀರು ಹಾಕುತ್ತಾ ಭಾವುಕರಾದರು.ಇದನ್ನೂ ಓದಿ: ಸಹ ಸ್ಪರ್ಧಿ ಸಂತೋಷ್ ಜೊತೆ ಪ್ರೀತಿಯಲ್ಲಿ ಬಿದ್ದ ಫಾತಿಮಾ – ಬಿಗ್ ಬಾಸ್ ಮನೆಯಿಂದ ಹೊರಬರುವಂತೆ ಪೋಷಕರ ಒತ್ತಾಯ
