– ಹುಂಡಿಯಲ್ಲಿ 2.69 ಕೋಟಿ ಕಾಣಿಕೆ ಸಂಗ್ರಹ
ಬೆಳಗಾವಿ: ಉತ್ತರ ಕರ್ನಾಟಕದ ಆರಾಧ್ಯ ದೇವತೆ ಸವದತ್ತಿ ಯಲ್ಲಮ್ಮನ ದೇವಸ್ಥಾನದ ಹುಂಡಿ ಎಣಿಕೆ ಕಾರ್ಯ ನಡೆದಿದ್ದು, ಒಟ್ಟು 2 ಕೋಟಿ 69 ಲಕ್ಷ ರೂ. ಕಾಣಿಕೆ ಸಂಗ್ರಹವಾಗಿದೆ. ಇದರ ಜೊತೆಗೆ ಹುಂಡಿಯಲ್ಲಿ ಭಕ್ತನೊಬ್ಬ ಬರೆದಿದ್ದ ವಿಚಿತ್ರ ಬೇಡಿಕೆಯ ಪತ್ರ ಎಲ್ಲರ ಗಮನ ಸೆಳೆದಿದೆ.
ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಯಲ್ಲಮ್ಮನ ಗುಡ್ಡದಲ್ಲಿರುವ ದೇವಸ್ಥಾನದ ಹುಂಡಿಯಲ್ಲಿ 2.34 ಕೋಟಿ ನಗದು ಕಾಣಿಕೆ ಸಂಗ್ರಹವಾಗಿದೆ. ಇದರ ಜೊತೆಗೆ 26.95 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ 7.32 ಲಕ್ಷ ಮೌಲ್ಯದ ಬೆಳ್ಳಿ ಕಾಣಿಕೆ ಸಲ್ಲಿಕೆಯಾಗಿದೆ.
ಇನ್ನು ಹುಂಡಿ ಎಣಿಕೆ ವೇಳೆ ಸಿಕ್ಕ ಭಕ್ತನೊಬ್ಬನ ಪತ್ರ ಇದೀಗ ವೈರಲ್ ಆಗಿದೆ. ತನ್ನ ಮನೆಯಿಂದ ತಿಗಣೆಗಳು ತೊಲಗಬೇಕು ಎಂದು ಭಕ್ತ ದೇವಿಯಲ್ಲಿ ಬೇಡಿಕೊಂಡಿದ್ದಾನೆ. ಇದ್ನನೂ ಓದಿ: ಜೈಲಿನ ಕೈದಿಗಳಿಗೆ ರಾಜಾತಿಥ್ಯದ ವಿಡಿಯೋ ವೈರಲ್ ಪ್ರಕರಣ – ಧನ್ವೀರ್ಗೆ ಮತ್ತೊಂದು ಸಂಕಷ್ಟ
ʻಅಮ್ಮ, ನಮ್ಮ ಮನೆಯಿಂದ ತಿಗಣೆಗಳು ತೊಲಗಲಿ. ಎಲ್ಲ ತಿಗಣೆಗಳು ಮನೆಯಿಂದ ಹೋಗಲಿ. ನಿನ್ನ ದೇವಸ್ಥಾನಕ್ಕೆ ಬಂದು ಹಣ್ಣು-ಕಾಯಿ ಒಡೆದು ಹರಕೆ ತೀರಿಸುತ್ತೇನೆʼ ಎಂದು ಪತ್ರದಲ್ಲಿ ಬರೆದಿದ್ದಾನೆ. ಈ ವಿಚಿತ್ರ ಬೇಡಿಕೆಯ ಪತ್ರ ಸೋಷಿಯಲ್ ಮೀಡಿಯಾದಲ್ಲಿ ಗಮನ ಸೆಳೆಯುತ್ತಿದೆ.ಇದ್ನನೂ ಓದಿ: ‘ನಮ್ಮ ಮೆಟ್ರೋ’ ಪ್ರಯಾಣ ದರಕ್ಕೆ ಬಿಎಂಟಿಸಿ ಪೈಪೋಟಿ!
