ದಿಸ್ಪುರ್: ಅಸ್ಸಾಂ (Assam) ಸರ್ಕಾರವು ಬಹುಪತ್ನಿತ್ವಕ್ಕೆ (Polygamy) ಕಡಿವಾಣ ಹಾಕುವ ನಿಟ್ಟಿನಲ್ಲಿ ಮಹತ್ವದ ನಿರ್ಧಾರವೊಂದನ್ನು ಕೈಗೊಂಡಿದೆ. ಒಂದಕ್ಕಿಂತ ಹೆಚ್ಚು ಮದುವೆಯಾದರೆ ಸರ್ಕಾರಿ ನೌಕರರಿಗೆ ಕೆಲಸದಿಂದ ತೆಗೆದುಹಾಕಲು ನಿರ್ಧರಿಸಿದೆ.
ಒಂದಕ್ಕಿಂತ ಹೆಚ್ಚು ಮದುವೆಯಾದರೆ ಸರ್ಕಾರಿ ನೌಕರರಿಗೆ ಕೆಲಸದಿಂದ (Govt Job) ಗೇಟ್ಪಾಸ್ ನೀಡಲು ಹಾಗೂ ಬಹುಪತ್ನಿತ್ವ ಸಾಬೀತಾದರೆ ಸರ್ಕಾರಿ ಉದ್ಯೋಗದಿಂದ ವಜಾಗೊಳಿಸಲು ಅಸ್ಸಾಂ ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ಅಷ್ಟೇ ಅಲ್ಲದೆ, ಭವಿಷ್ಯದಲ್ಲಿ ಸರ್ಕಾರಿ ಉದ್ಯೋಗ ಪಡೆಯುವುದಕ್ಕೂ ಅವರು ಅನರ್ಹರಾಗಲಿದ್ದಾರೆ. ಇದನ್ನೂ ಓದಿ: ಅಮೆರಿಕ ಚುನಾವಣೆಯಲ್ಲಿ ಸೋಲು – ನಾನೇ ಸ್ಪರ್ಧಿಸಿದ್ದರೆ ಜಯಭೇರಿ ಬಾರಿಸುತ್ತಿದ್ದೆವು: ಟ್ರಂಪ್
ಅಸ್ಸಾಂ ಸೇವಾ ನಿಯಮಗಳು 1964ಕ್ಕೆ ತಿದ್ದುಪಡಿ ತರಲಾಗಿದ್ದು, ಇದರಲ್ಲಿನ ನಿಯಮ 7ಕ್ಕೆ ಹೊಸ ಕಲಂ 6 ಅನ್ನು ಸೇರ್ಪಡೆ ಮಾಡಲಾಗಿದೆ. ಈ ಕಠಿಣ ನಿಯಮವು ಹಿಂದೂ, ಮುಸ್ಲಿಂ, ಕ್ರೈಸ್ತ ಸೇರಿದಂತೆ ಎಲ್ಲ ಧರ್ಮದ ಸರ್ಕಾರಿ ನೌಕರರಿಗೂ ಅನ್ವಯಿಸಲಿದೆ.
ಈ ಬಗ್ಗೆ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಮಾತನಾಡಿ, ಏಕರೂಪ ನಾಗರಿಕ ಸಂಹಿತೆ ಜಾರಿಯಾದ ಹಿನ್ನೆಲೆ ಈ ಕ್ರಮ ಕೈಗೊಳ್ಳಲಾಗಿದೆ. ಈ ಹಿಂದೆ ಇಂತಹ ಪ್ರಕರಣಗಳಲ್ಲಿ ಕೇವಲ ಅಮಾನತು ಕ್ರಮ ಕೈಗೊಳ್ಳಲಾಗುತ್ತಿತ್ತು. ಆದರೆ, ಇನ್ನು ಮುಂದೆ ಉದ್ಯೋಗದಿಂದಲೇ ವಜಾಗೊಳಿಸುವ ಕಠಿಣ ಕ್ರಮಕ್ಕೆ ಸಂಪುಟ ಒಪ್ಪಿಗೆ ನೀಡಿದೆ ಎಂದು ತಿಳಿಸಿದ್ದಾರೆ.ಇದನ್ನೂ ಓದಿ: ಹಾಸನಾಂಬ ದೇವಿ ದರ್ಶನ ಪಡೆದ ಸಿಎಂ ಡಿಕೆಶಿ ಪುತ್ರ ಆಕಾಶ್
