ಹಾಸನ: ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ (D K Shivakumar) ಅವರ ಪುತ್ರ ಆಕಾಶ್ (Akash) ಹಾಸನಾಂಬ ದೇವಸ್ಥಾನಕ್ಕೆ ಭೇಟಿ ನೀಡಿ ದೇವಿಯ ದರ್ಶನ ಪಡೆದಿದ್ದಾರೆ.
ಶಾಸಕ ಬಂಡಿ ಸಿದ್ದೇಗೌಡ ಅವರೊಂದಿಗೆ ಪ್ರವಾಸಿ ಮಂದಿರದಿಂದ ಪ್ರೋಟೋಕಾಲ್ ವಾಹನದಲ್ಲಿ ಆಗಮಿಸಿದ ಆಕಾಶ್, ಶಿಷ್ಟಾಚಾರದಂತೆ ದೇವಿಯ ದರ್ಶನ ಪಡೆದರು. ಈ ವೇಳೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಂ.ಶಿವಲಿಂಗೇಗೌಡ ಅವರು ಆಕಾಶ್ ಅವರನ್ನು ಸ್ವಾಗತಿಸಿದರು. ಸಂಸದ ಶ್ರೇಯಸ್ ಪಟೇಲ್ ಕೂಡ ಅವರಿಗೆ ಸಾಥ್ ನೀಡಿದರು.
ಹಾಸನಾಂಬ ದರ್ಶನ ಪಡೆದ ಗಣ್ಯರು
ಹಾಸನಾಂಬ ದೇವಿಯ ದರ್ಶನಕ್ಕೆ ವಿವಿಧ ಕ್ಷೇತ್ರಗಳ ಗಣ್ಯರು ಆಗಮಿಸುತ್ತಿದ್ದಾರೆ. ಶಾಸಕರಾದ ಬಸನಗೌಡ ದದ್ದಲ್, ರಾಘವೇಂದ್ರ ಹಿಟ್ನಾಳ್, ಮಾಜಿ ಸಚಿವ ಜೀವರಾಜ್ ಹಾಗೂ ಚಲನಚಿತ್ರ ನಟಿ ತಾರಾ ಸೇರಿದಂತೆ ಹಲವರು ದೇವಿಯ ದರ್ಶನ ಪಡೆದಿದ್ದಾರೆ.ಇದ್ನನೂ ಓದಿ: US Midterm Elections : ಗವರ್ನರ್ ಚುನಾವಣೆಯಲ್ಲಿ ವಿವೇಕ್ ರಾಮಸ್ವಾಮಿಗೆ ಸೋಲು, ಇತಿಹಾಸ ನಿರ್ಮಿಸಿದ ಆಮಿ ಆಕ್ಟನ್
