– ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ಟೀಕೆ
ನವದೆಹಲಿ: ದೇವಾಲಯಗಳಲ್ಲಿ ಅರ್ಚಕರು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗುತ್ತಾರೆ ಎಂದು ಹೇಳಿಕೆ ನೀಡಿದ್ದ ಅಖಿಲ ಭಾರತ ವಿದ್ಯಾರ್ಥಿ ಸಂಘದ (AISA) ಸದಸ್ಯೆ ನೇಹಾ ಬೋರಾ (Neha Bora) ವಿರುದ್ಧ ದೆಹಲಿಯಲ್ಲಿ ಪೊಲೀಸ್ ದೂರು ದಾಖಲಾಗಿದೆ.
ದೆಹಲಿ ಹೈಕೋರ್ಟ್ನ ಮಹಿಳಾ ವಕೀಲೆ ಅಮಿತಾ ಸಚ್ದೇವ ಅವರು ಪಾರ್ಲಿಮೆಂಟ್ ಸ್ಟ್ರೀಟ್ ಪೊಲೀಸ್ ಠಾಣೆಯ ಎಸ್ಎಚ್ಒಗೆ ದೂರು ಸಲ್ಲಿಸಿದ್ದು, ಹೇಳಿಕೆ ಕುರಿತು ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.
ನೇಹಾ ಬೋರಾ ಅವರ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿರುವ ದೂರುದಾರರು, ಇದು ಧಾರ್ಮಿಕ ಸಮುದಾಯದ ಗೌರವಕ್ಕೆ ಧಕ್ಕೆ ಉಂಟುಮಾಡಬಹುದು ಮತ್ತು ಸಾಮಾಜಿಕ ಸಾಮರಸ್ಯದ ಮೇಲೆ ಪರಿಣಾಮ ಬೀರಬಹುದು ಎಂದು ಆರೋಪಿಸಿದ್ದಾರೆ.
ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ವಾಗ್ದಾಳಿ
ಈ ವಿಚಾರವಾಗಿ ಬಿಜೆಪಿ ಕೂಡ ನೇಹಾ ಬೋರಾ ಮತ್ತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿಕೆಗಳನ್ನು ಟೀಕಿಸಿದೆ. ಬಿಜೆಪಿ ತನ್ನ ಸೋಷಿಯಲ್ ಮೀಡಿಯಾ ಎಕ್ಸ್ನಲ್ಲಿ ಬೋರಾ ಅವರ ಹೇಳಿಕೆಯನ್ನು ಹಂಚಿಕೊಂಡು, ಅದನ್ನು ರಾಹುಲ್ ಗಾಂಧಿ ಅವರ ಹಿಂದಿನ ಹೇಳಿಕೆಗಳಿಗೆ ಹೋಲಿಸಿದೆ.
ಬೋರಾ ಅವರು ರಾಹುಲ್ ಗಾಂಧಿ ಈ ಹಿಂದೆ ವ್ಯಕ್ತಪಡಿಸಿದ್ದ ಅಭಿಪ್ರಾಯಗಳನ್ನೇ ಬೇರೆ ಪದಗಳಲ್ಲಿ ಪುನರಾವರ್ತಿಸುತ್ತಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ. ಇಬ್ಬರೂ ಸನಾತನ ಧರ್ಮ ಮತ್ತು ಹಿಂದೂ ಧಾರ್ಮಿಕ ನಂಬಿಕೆಗಳಿಗೆ ಅಗೌರವ ತೋರಿದ್ದಾರೆ ಎಂದು ಬಿಜೆಪಿ ಟೀಕಿಸಿದೆ.ಇದನ್ನೂ ಓದಿ: ದೀಪಾವಳಿ ಜಾಗೃತಿ ಬಗ್ಗೆ ದಿಯಾ ಮಿರ್ಜಾ ವೀಡಿಯೊ ಡಿಲೀಟ್ – ಹೈಕೋರ್ಟ್ ವಾರ್ನಿಂಗ್ ಬಳಿಕ ಮತ್ತೆ ಅಪ್ಲೋಡ್
ಕಾಂಗ್ರೆಸ್ನ ಹೊಸ ಪೋಸ್ಟರ್ ಗರ್ಲ್ ನೇಹಾ ಬೋರಾ ರಾಹುಲ್ ಗಾಂಧಿ ಈ ಹಿಂದೆ ಹೇಳಿದ್ದನ್ನು ಬೇರೆ ರೀತಿಯಲ್ಲಿ ಪುನರಾವರ್ತಿಸುತ್ತಿದ್ದಾರೆ. ಅವರ ಸನಾತನ ವಿರೋಧಿ ಮತ್ತು ಅರಾಜಕತಾವಾದಿ ಚಿಂತನೆಯು ಇಡೀ ದೇಶಕ್ಕೆ ಕುತ್ತು ತರುವಂತಿದೆ ಎಂದು ಬಿಜೆಪಿ ತನ್ನ ಪೋಸ್ಟ್ನಲ್ಲಿ ಬರೆದಿದೆ.
ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೂ ಮಿತಿ ಇದೆ ಎಂದ ವಕೀಲೆ
ಅಮಿತಾ ಸಚ್ದೇವ ತಮ್ಮ ದೂರಿನಲ್ಲಿ, ಭಾರತೀಯ ಸಂವಿಧಾನವು ಅಭಿವ್ಯಕ್ತಿ ಸ್ವಾತಂತ್ರ್ಯವನ್ನ ನೀಡಿದೆ. ಆದರೆ, ಇತರ ಸಮುದಾಯಗಳ ಭಾವನೆ ಮತ್ತು ಘನತೆಯನ್ನು ಗೌರವಿಸುವುದರೊಂದಿಗೆ ಈ ಸ್ವಾತಂತ್ರ್ಯವನ್ನು ಜವಾಬ್ದಾರಿಯುತವಾಗಿ ಬಳಸಬೇಕು ಎಂದು ಹೇಳಿದ್ದಾರೆ.
ಯಾವುದೇ ಧಾರ್ಮಿಕ ಅಥವಾ ಸಾಮಾಜಿಕ ಗುಂಪಿನ ವಿರುದ್ಧ ಆರೋಪ ಮಾಡುವ ಮೊದಲು ಅದರ ಹಿಂದಿರುವ ಸತ್ಯಾಂಶ ಮತ್ತು ಸಂದರ್ಭಗಳನ್ನು ಪರಿಗಣಿಸಬೇಕು ಎಂಬುದು ಅವರ ವಾದವಾಗಿದೆ.ಇದನ್ನೂ ಓದಿ: ಕಾಂಗ್ರೆಸ್ ಮುಖಂಡನ 2 ಎಕರೆ ಅಡಿಕೆ ತೋಟ ತೆರವು – ಸಮಾಧಾನ ಹೇಳಲು ಬಂದ ಬಿಜೆಪಿ ನಾಯಕರ ಮುಂದೆ ಕಣ್ಣೀರಿಟ್ಟ ರೈತ
