ಮಂಡ್ಯ: ಜಿಲ್ಲೆಯ ಶ್ರೀರಂಗಪಟ್ಟಣ (Srirangapatna) ತಾಲೂಕಿನ ಕೆಆರ್ಎಸ್ (KRS) ಜಲಾಶಯದ ನೀರಿನ ಮಟ್ಟ ಮತ್ತೆ 100 ಅಡಿಗೆ ಕುಸಿದಿದೆ.
ತಮಿಳುನಾಡಿಗೆ ನಿರಂತರವಾಗಿ ನೀರು ಹರಿಸುತ್ತಿರುವ ಕಾರಣ ಜಲಾಶಯದಲ್ಲಿ ನೀರಿನ ಮಟ್ಟ ದಿನೇ ದಿನೇ ಕುಸಿಯುತ್ತಿದೆ. ವಾರದ ಹಿಂದೆ 104 ಅಡಿ ಇದ್ದ ಜಲಾಶಯದ ನೀರಿನ ಮಟ್ಟ, ಇದೀಗ ಮತ್ತೊಮ್ಮೆ ನೂರು ಅಡಿಗೆ ಕುಸಿದಿದೆ. ಇದನ್ನೂ ಓದಿ: ಸಿದ್ದರಾಮಯ್ಯನವರ ಸ್ಟಿಂಗ್ ಆಪರೇಶನ್, ಕಾಂಗ್ರೆಸ್ಗೆ ಸೋಲುವ ಸಿಚುವೇಶನ್: ಆರ್ ಅಶೋಕ್
ಸದ್ಯ ಜಲಾಶಯಕ್ಕೆ ಕೇವಲ 548 ಕ್ಯೂಸೆಕ್ ಮಾತ್ರ ಒಳಹರಿವು ಇದ್ದು, 7,871 ಕ್ಯೂಸೆಕ್ ಹೊರಹರಿವು ಇದೆ. ಇದರಿಂದ ಸದ್ಯ ಜಲಾಶಯದಲ್ಲಿ 100.12 ಅಡಿ ನೀರಿನ ಮಟ್ಟವಿದ್ದು, ಒಟ್ಟು 22.904 ಟಿಎಂಸಿ ನೀರು ಸಂಗ್ರಹವಾಗಿದೆ.
