ಗಾಂಧಿನಗರ: ಗುಜರಾತ್ನ (Gujarat) ಸಬರಮತಿ ಸೆಂಟ್ರಲ್ ಜೈಲಿಗೆ (Sabarmati Central Jail) ಬಾಂಬ್ ಬೆದರಿಕೆ (Bomb Threat) ಇಮೇಲ್ ಬಂದಿದೆ. ಈ ಜೈಲಿನಲ್ಲಿ ಹೈ ಪ್ರೊಫೈಲ್ ಕೈದಿಗಳನ್ನು ಇರಿಸಲಾಗಿರುವುದರಿಂದ ಹೈ ಅಲರ್ಟ್ ಘೋಷಿಸಲಾಗಿದೆ. ಇತ್ತೀಚೆಗಷ್ಟೇ ಇದೇ ಜೈಲಿನಲ್ಲಿರುವ ಲಾರೆನ್ಸ್ ಬಿಷ್ಣೋಯ್ನನ್ನು (Lawrence Bishnoi) ಹೈ ಸೆಕ್ಯೂರಿಟಿ ಸೆಲ್ಗೆ ಶಿಫ್ಟ್ ಮಾಡಲಾಗಿತ್ತು.
ಸಬರಮತಿ ಜೈಲು ಮಾತ್ರವಲ್ಲದೇ ರಾಜ್ಯದ ಹಲವು ಜೈಲುಗಳನ್ನು ಸ್ಫೋಟಿಸುವುದಾಗಿ ಬೆದರಿಕೆ ಇಮೇಲ್ ಬಂದಿವೆ. ಈ ಅನಾಮಧೇಯ ಇಮೇಲ್ ಬಂದ ನಂತರ ಗುಜರಾತ್ನಲ್ಲಿ ಭಾರೀ ಭದ್ರತೆ ಕೈಗೊಳ್ಳಲಾಗಿದೆ. ಜೈಲುಗಳಲ್ಲಿ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ಮದ್ದೂರು | ಜಗಳ ಬಿಡಿಸಲು ಹೋದ ಯುವಕನ ಕತ್ತು ಸೀಳಿ ಹತ್ಯೆ
ಬಾಂಬ್ ಪತ್ತೆ ದಳ (ಬಿಡಿಡಿಎಸ್) ಮತ್ತು ಶ್ವಾನ ದಳಗಳೊಂದಿಗೆ ಪೊಲೀಸರು ತಕ್ಷಣವೇ ಜೈಲಿನ ಆವರಣದಲ್ಲಿ ವ್ಯಾಪಕ ಶೋಧ ಕಾರ್ಯಾಚರಣೆಗಳನ್ನು ನಡೆಸಿದ್ದಾರೆ. ಇಮೇಲ್ ಕಳಿಸಿದ ದುಷ್ಕರ್ಮಿಗಳನ್ನು ಪತ್ತೆಹಚ್ಚಲು ಸೈಬರ್ ಪೊಲೀಸರ ತಂಡ ತಾಂತ್ರಿಕ ವಿವರಗಳು ಮತ್ತು ಐಪಿ ವಿಳಾಸವನ್ನು ಪರಿಶೀಲಿಸುತ್ತಿದೆ.
ಗುಜರಾತ್ನ ಅತಿದೊಡ್ಡ ಕಾರಾಗೃಹವಾದ ಅಹಮದಾಬಾದ್ನಲ್ಲಿರುವ ಸಬರಮತಿ ಕೇಂದ್ರ ಜೈಲಿಗೆ ಬೆದರಿಕೆ ಹಾಕಿರುವುದು ರಾಷ್ಟ್ರ ಮಟ್ಟದಲ್ಲಿ ತೀವ್ರ ಗಮನ ಸೆಳೆದಿದೆ. ಇತ್ತೀಚೆಗಷ್ಟೇ ಈ ಜೈಲಿನಲ್ಲಿ ಗ್ಯಾಂಗ್ಸ್ಟರ್ ಲಾರೆನ್ಸ್ ಬಿಷ್ಣೋಯ್ನನ್ನು ಹೈ-ಸೆಕ್ಯುರಿಟಿ ಬ್ಲಾಕ್ಗೆ ಸ್ಥಳಾಂತರಿಸಲಾಗಿತ್ತು.
ಅಹಮದಾಬಾದ್ನಾದ್ಯಂತ ನ್ಯಾಯಾಲಯಗಳು, ಶಾಲೆಗಳು ಮತ್ತು ಸಾರ್ವಜನಿಕ ಸ್ಥಳಗಳನ್ನು ಗುರಿಯಾಗಿಸಿಕೊಂಡು ಇದೇ ರೀತಿಯ ಬೆದರಿಕೆಯ ಇಮೇಲ್ಗಳು ಹಿಂದೆಯೂ ಬಂದಿವೆ. ಇಂತಹ ಬೆದರಿಕೆಗಳನ್ನು ಭದ್ರತಾ ಪಡೆಗಳು ಅತ್ಯಂತ ಗಂಭೀರವಾಗಿ ಪರಿಗಣಿಸುತ್ತಿವೆ. ಅಲ್ಲದೇ ಬೆದರಿಕೆ ಹಾಕಲಾದ ಸ್ಥಳಗಳಲ್ಲಿ ಸಂಪೂರ್ಣ ತಪಾಸಣೆ ನಡೆಸಿ ಜನರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲಾಗುತ್ತಿದೆ. ಇದನ್ನೂ ಓದಿ: ತೆಲಂಗಾಣದಲ್ಲಿ ಆಸ್ತಿ ವಿವಾದಕ್ಕೆ ಮಹಿಳೆಯ ಶಿರಚ್ಛೇದನ – ಪತಿಯ ಅಣ್ಣಂದಿರಿಂದಲೇ ಹತ್ಯೆ
