ಮಂಡ್ಯ: ಜಗಳ ಬಿಡಿಸಲು ಹೋದ ಯುವಕನನ್ನು ಡ್ರ್ಯಾಗರ್ನಿಂದ ಕತ್ತು ಸೀಳಿ ಹತ್ಯೆ ಮಾಡಿರುವ ಘಟನೆ ಮಂಡ್ಯದ (Mandya) ಮದ್ದೂರು (Maddur) ಪಟ್ಟಣದ ಕೆಮ್ಮಣ್ಣು ನಾಲೆ ಪ್ರದೇಶದ ಸಿದ್ಧಾರ್ಥ ನಗರದಲ್ಲಿ ನಡೆದಿದೆ.
ಮದ್ದೂರು ಪಟ್ಟಣದ ನಂದನ್ (25) ಕೊಲೆಯಾದ ಯುವಕ. ಹಣದ ವಿಚಾರಕ್ಕೆ ಆರೋಪಿ ರಘು ಹಾಗೂ ಪ್ರಕಾಶ್ ನಡುವೆ ಜಗಳವಾಗಿದ್ದು, ಪ್ರಕಾಶ್ ಜೊತೆ ತೆರಳಿದ್ದ ನಂದನ್ ಇಬ್ಬರ ನಡುವಿನ ಜಗಳ ಬಿಡಿಸಲು ಹೋಗಿದ್ದಾನೆ. ಈ ವೇಳೆ ಆರೋಪಿ ಶಿವರಾಜು ಡ್ರ್ಯಾಗರ್ನಿಂದ ನಂದನ್ ಮೇಲೆ ಹಲ್ಲೆ ನಡೆಸಿದ್ದಾನೆ. ಧನುಷ್, ಶಿವರಾಜು ಹಾಗೂ ನಿಖಿಲ್ನಿಂದ ಹಲ್ಲೆ ನಡೆದಿರುವ ಆರೋಪ ಕೇಳಿಬಂದಿದೆ. ಇದನ್ನೂ ಓದಿ: ದಾವಣಗೆರೆಯಲ್ಲಿ ಟ್ರಾನ್ಸ್ಫಾರ್ಮರ್ ಸ್ಫೋಟ – ಎರಡು ವಾಹನ, ಅಂಗಡಿ ಭಸ್ಮ, ಅಕ್ಕಪಕ್ಕದ ಮನೆಗಳಿಗೂ ಹಾನಿ
ಹಲ್ಲೆಯಿಂದ ತೀವ್ರ ಗಾಯಗೊಂಡ ನಂದನ್ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಮದ್ದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಘಟನಾ ಸ್ಥಳಕ್ಕೆ ಮದ್ದೂರು ಪೊಲೀಸರು ಹಾಗೂ ಎಸ್ಪಿ ಶೋಭಾರಾಣಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ʻನಾನು ನಡೆದಿದ್ದೇ ದಾರಿʼ – ಬಂದ್ ಮಾಡಿದ್ದ ರೈಲ್ವೆ ಗೇಟ್ ಕಿತ್ತೆಸೆದು ಸಾಗಿದ ಒಂಟಿ ಸಲಗ
